ವಿಷಯಕ್ಕೆ ಹೋಗು

ಮೆಕ್ಕೆ ಜೋಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Maize
Illustration depicting both male and female flowers of maize
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
Z. mays
Binomial name
Zea mays
Zea mays "fraise"
Zea mays 'Ottofile giallo Tortonese'

ಮೆಕ್ಕೆ ಜೋಳವು (ಜಿಯಾ ಮೇಸ್; ಇದನ್ನು ಅನೇಕ ಇಂಗ್ಲಿಷ್ ಮಾತನಾಡುವ ರಾಷ್ಟ್ರಗಳಲ್ಲಿ 'ಕಾರ್ನ್' ಎಂದು ಕರೆಯಲಾಗುತ್ತದೆ) ಮೀಸೊಅಮೆರಿಕದಲ್ಲಿ ಇತಿಹಾಸ ಪೂರ್ವ ಕಾಲದಿಂದ ಸ್ಥಳೀಯರು ಒಗ್ಗಿಸಿಕೊಂಡಿರುವ ಒಂದು ಹುಲ್ಲು ಜಾತಿ. ಮುಸುಕಿನ ಜೋಳ, ಗೋವಿನ ಜೋಳ ಪರ್ಯಾಯ ನಾಮಗಳು. ಇದನ್ನು ಆಜ಼್ಟೆಕ್ ಮತ್ತು ಮಾಯನ್ನರು ಕೇಂದ್ರ ಮತ್ತು ದಕ್ಷಿಣ ಮೆಕ್ಸಿಕೊದಾದ್ಯಂತ ನಿಕ್ಸ್‌ಟಮಲೈಸೇಶನ್ ಎಂದು ಕರೆಯಲ್ಪಡುವ ಕ್ರಿಯೆಯಲ್ಲಿ ಬೇಯಿಸಲು ಅಥವಾ ಪುಡಿಮಾಡಲು ವಿವಿಧ ರೀತಿಗಳಲ್ಲಿ ಬೆಳೆಸಿದರು. ನಂತರ ಈ ಬೆಳೆಯು ಅಮೆರಿಕದ ಹೆಚ್ಚಿನ ಭಾಗದಾದ್ಯಂತ ಹರಡಿತು. ಕ್ರಿ.ಶ 1250ರಿಂದ ಕ್ರಿ.ಶ 1700ರವರೆಗಿನ ಅವಧಿಯಲ್ಲಿ ಹೆಚ್ಚುಕಡಿಮೆ ಸಂಪೂರ್ಣ ಭೂಖಂಡವೇ ಈ ಬೆಳೆಯನ್ನು ಬೆಳೆಯಲು ಆರಂಭಿಸಿತು. ಮೆಕ್ಕೆ ಜೋಳದ ಹೆಚ್ಚುವರಿ ಮತ್ತು ವೈವಿಧ್ಯಗಳ ಆಧಾರದ ಮೇಲೆ ಈ ಪ್ರದೇಶದ ಯಾವುದೋ ಒಂದು ಗಮನಾರ್ಹ ಅಥವಾ ದಟ್ಟ ಸಾಂದ್ರತೆಯ ಜನಸಮೂಹವು ಅತ್ಯುತ್ತಮವಾದ ವ್ಯಾಪಾರ ಜಾಲವೊಂದನ್ನು ಅಭಿವೃದ್ಧಿಗೊಳಿಸಿತು. 15ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು 16ನೇ ಶತಮಾನದ ಆರಂಭದಲ್ಲಿ ಅಮೆರಿಕನ್ನರೊಂದಿಗಿನ ಯುರೋಪಿನ ಸಂಪರ್ಕದ ನಂತರ ಪರಿಶೋಧಕರು ಮತ್ತು ವ್ಯಾಪಾರಿಗಳು ಮೆಕ್ಕೆ ಜೋಳವನ್ನು ಯುರೋಪ್‌ಗೆ ತಂದರು ಹಾಗೂ ವ್ಯಾಪಾರ ಮೂಲಕ ಇತರ ರಾಷ್ಟ್ರಗಳಿಗೆ ಪರಿಚಯಿಸಿದರು. ಮೆಕ್ಕೆ ಜೋಳದ ಭಿನ್ನ ಹವಾಗುಣದಲ್ಲೂ ಬೆಳೆಯುವ ಸಾಮರ್ಥ್ಯದಿಂದಾಗಿ ಮತ್ತು ಉಪಯೋಗವು ತುಂಬಾ ಮೌಲ್ಯಯುತವಾದುದರಿಂದ, ಇದು ಪ್ರಪಂಚದ ಇತರ ಕಡೆಗಳಿಗೂ ಬಹುಬೇಗ ಹರಡಿತು.

ಮೆಕ್ಕೆ ಜೋಳವು ಅಮೆರಿಕಾದಲ್ಲಿ ಅತಿಹೆಚ್ಚು ಬೆಳೆಯುವ ಬೆಳೆಯಾಗಿದೆ. ವಾರ್ಷಿಕವಾಗಿ ಅಮೆರಿಕ ಸಂಯುಕ್ತ ಸಂಸ್ಥಾನವೊಂದರಲ್ಲೇ 332 ದಶಲಕ್ಷ ಮೆಟ್ರಿಕ್ ಟನ್‍ಗಳಷ್ಟು ಮೆಕ್ಕೆ ಜೋಳವನ್ನು ಬೆಳೆಯಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬೆಳೆಯುವ ಮೆಕ್ಕೆ ಜೋಳದಲ್ಲಿ ಜೀವಾಂತರ ಮೆಕ್ಕೆ ಜೋಳವು 80%ನಷ್ಟನ್ನು ಒಳಗೊಳ್ಳುತ್ತದೆ.[] ಮೆಕ್ಕೆ ಜೋಳದ ಕೆಲವು ಪ್ರಭೇದಗಳು 7 metres (23 feet)ನಷ್ಟು ಉದ್ದಕ್ಕೆ ಬೆಳೆಯುತ್ತವೆ.[] ಹೆಚ್ಚು ವಾಣಿಜ್ಯ ದೃಷ್ಟಿಯಿಂದ ಬೆಳೆಸಲ್ಪಡುವ ಮೆಕ್ಕೆ ಜೋಳವು 2.5 metres (8.2 feet) ನಷ್ಟು ಪ್ರಮಾಣಿತ ಎತ್ತರಕ್ಕೆ ಬೆಳೆಯುತ್ತದೆ. ಸಿಹಿ ಮೆಕ್ಕೆಜೋಳವು ಸಾಮಾನ್ಯವಾಗಿ ಜಮೀನಿನಲ್ಲಿ ಬೆಳೆಯುವ ಮೆಕ್ಕೆಜೋಳಗಳಿಗಿಂತ ಚಿಕ್ಕದಾಗಿರುತ್ತವೆ.

ಹೆಸರು ನೀಡುವ ರೀತಿನೀತಿಗಳು

[ಬದಲಾಯಿಸಿ]
ಅನೇಕ ಸಣ್ಣ ಗಂಡು ಹೂವುಗಳು ತೆನೆ ಎಂದು ಕರೆಯಲ್ಪಡುವ ಗಂಡು ಪುಷ್ಟ ವಿನ್ಯಾಸವನ್ನು ರೂಪಿಸುತ್ತವೆ

ಯುನೈಟೆಡ್ ಕಿಂಗ್ಡಮ್ ಮತ್ತು ಐರ್ಲ್ಯಾಂಡ್ ನಲ್ಲಿ ಈಗ ಇದನ್ನು ಸಾಮಾನ್ಯವಾಗಿ "ಸ್ವೀಟ್ ಕಾರ್ನ್(ಸಿಹಿ ಮೆಕ್ಕೆಜೋಳ)" ಎಂದು ಕರೆಯುತ್ತಾರೆ. ಅಲ್ಲಿನ ಜನರಿಗೆ ತಿಳಿದಿರುವ ಸಸ್ಯದ ಸಾಮಾನ್ಯ ಹೆಸರು ಇದಾಗಿದೆ.[]

ಬ್ರಿಟಿಷ್ ಐಲ್‍ಗಳ ಹೊರಗೆ ಮೆಕ್ಕೆ ಜೋಳಕ್ಕಿರುವ ಸಾಮಾನ್ಯ ಪದವೆಂದರೆ "ಕಾರ್ನ್". ಇದು ಮೂಲತಃ ಯಾವುದೇ ಏಕದಳ ಧಾನ್ಯಕ್ಕಿರುವ ಇಂಗ್ಲಿಷ್ ಪದವಾಗಿದೆ. ಉತ್ತರ ಅಮೆರಿಕಾದಲ್ಲಿ ಇದರ ಅರ್ಥವು 19ನೇ ಶತಮಾನದಿಂದ ಮೆಕ್ಕೆ ಜೋಳಕ್ಕೆ ಸೀಮಿತವಾಗಿದೆ. ಇದನ್ನು "ಇಂಡಿಯನ್ ಕಾರ್ನ್"ನಿಂದ ಪಡೆಯಲಾಗಿರುವುದರಿಂದ ಹೀಗೆ ಮಾಡಲಾಗಿದೆ.[] ಇಂಡಿಯನ್ ಕಾರ್ನ್ ಪದವು ಈಗ ನಿರ್ದಿಷ್ಟವಾಗಿ ಬಹು-ಬಣ್ಣದ "ಜಮೀನಿನ ಕಾರ್ನ್" (ಕಲ್ಲುಮೆಕ್ಕೆ ಜೋಳ) ಕೃಷಿ ಪ್ರಭೇದಗಳನ್ನು ಸೂಚಿಸುತ್ತದೆ.[]

ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಬಳಕೆಯಲ್ಲಿ, "ಮೆಕ್ಕೆ ಜೋಳ"ವನ್ನು ವಿಶ್ವವ್ಯಾಪಕವಾಗಿ ಬಳಸಲಾಗುತ್ತದೆ. ಭಾರಿ-ವ್ಯಾಪಾರ ಸನ್ನಿವೇಶಗಳಲ್ಲಿ "ಕಾರ್ನ್"ಅನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಯುಕೆ, ಆಸ್ಟ್ರೇಲಿಯಾ ಮತ್ತು ಇತರ ಇಂಗ್ಲಿಷ್-ಮಾತನಾಡುವ ರಾಷ್ಟ್ರಗಳಲ್ಲಿ "ಕಾರ್ನ್" ಪದವನ್ನು ಅಧಿಕವಾಗಿ ಅಡಿಗೆಯಲ್ಲಿ, ನಿರ್ದಿಷ್ಟವಾಗಿ ಪಾಪ್‌ಕಾರ್ನ್ ಮತ್ತು ಕಾರ್ನ್ ಫ್ಲೇಕ್‍ಗಳಂತಹ ಉತ್ಪನ್ನಗಳನ್ನು ಹೆಸರಿಸುವಾಗ ಬಳಸುತ್ತಾರೆ. "ಮೆಕ್ಕೆ ಜೋಳ" ಪದವನ್ನು ಕೃಷಿ ಮತ್ತು ವೈಜ್ಞಾನಿಕ ಉಲ್ಲೇಖಗಳಲ್ಲಿ ಉಪಯೋಗಿಸುತ್ತಾರೆ.[]

ದಕ್ಷಿಣ ಆಫ್ರಿಕಾದಲ್ಲಿ ಮೆಕ್ಕೆ ಜೋಳವನ್ನು ಸಾಮಾನ್ಯವಾಗಿ ಪೋರ್ಚುಗೀಸ್ ಪದ ಮಿಲ್ಹೊ ದಿಂದ ಪಡೆದ ಮೈಲೈ ಅಥವಾ ಮೀಲೈ ಎಂಬುದಾಗಿ ಸೂಚಿಸಲಾಗುತ್ತದೆ.[] ಮೈಲೈ-ಮೀಲ್ ಎಂಬುದು ಇದರ ಆಧಾರ ಪದವಾಗಿದೆ.

ರಚನೆ ಮತ್ತು ಶರೀರಕ್ರಿಯಾಶಾಸ್ತ್ರ

[ಬದಲಾಯಿಸಿ]
ಬಲಿತಿಲ್ಲದ ಶಲಾಕಾಗುಚ್ಛದೊಂದಿಗಿನ ಹೆಣ್ಣು ಪುಷ್ಟ ವಿನ್ಯಾಸ

ಇದೊಂದು ಏಕವಾರ್ಷಿಕ ಸಸ್ಯ. ಮೆಕ್ಕೆ ಜೋಳದ ಕಾಂಡಗಳು ತೋರ್ಕೆಗೆ ಬಿದಿರು ಮೆಳೆಗಳಂತೆ ಕಾಣುತ್ತವೆ ಮತ್ತು ಎಲೆಗಳು ಹುಟ್ಟುವ ಎರಡು ಗೆಣ್ಣುಗಳ ನಡುವಣ ಕಾಂಡದ ಭಾಗವು 20–30 ಸೆಂಟಿಮೀಟರ್‌ಗಳಷ್ಟಿರುತ್ತದೆ (8–12 ಇಂಚು). ಮೆಕ್ಕೆ ಜೋಳವು ಭಿನ್ನ ರೀತಿಯ ಬೆಳವಣಿಗೆಯನ್ನು ಹೊಂದಿರುತ್ತದೆ; ಕೆಳಗಿನ ಎಲೆಗಳು ಅಗಲವಾದ ಎಸಳುಗಳಂತಿದ್ದು, 50–100 ಸೆಂಟಿಮೀಟರ್‌ಗಳಷ್ಟು ಉದ್ದ ಮತ್ತು 5–10 ಸೆಂಟಿಮೀಟರ್‌ಗಳಷ್ಟು ಅಗಲವಿರುತ್ತವೆ (2–4 ಅಡಿ ಬೈ 2–4 ಇಂಚು); ಕಾಂಡಗಳು ಅನೇಕ ಗೆಣ್ಣುಗಳೊಂದಿಗೆ 2–3 ಮೀಟರ್‌ಗಳಷ್ಟು (7–10 ಅಡಿ) ಎತ್ತರಕ್ಕೆ ನೇರವಾಗಿರುತ್ತವೆ. ಪ್ರತಿಯೊಂದು ಗೆಣ್ಣು ಎಸಳು-ಎಲೆಗಳನ್ನು ಹೊಂದಿರುತ್ತದೆ. ಈ ಎಲೆಗಳ ಕೆಳಗೆ ಮತ್ತು ಕಾಂಡಕ್ಕೆ ಹತ್ತಿರದಲ್ಲಿ ಕದಿರುಗಳು ಬೆಳೆಯುತ್ತವೆ. ಅವು ಒಂದು ದಿನಕ್ಕೆ ಸುಮಾರು 3 ಮಿಲಿಮೀಟರ್‌ಗಳಷ್ಟು ಬೆಳೆಯುತ್ತವೆ.

ಗಿಡ ಕವಲೊಡೆಯದು. ಬುಡದ ಕೆಲವು ಗೆಣ್ಣುಗಳು ಮಣ್ಣಿನೊಳಗೆ ಹೊಕ್ಕು ಗಿಡಕ್ಕೆ ಆಧಾರವನ್ನು ಒದಗಿಸುತ್ತವೆ. ಬುಡಭಾಗದ ಗೆಣ್ಣುಗಳು ಮೇಲ್ಭಾಗದವಕ್ಕಿಂತ ಮೋಟಾದವೂ ದಪ್ಪವಾದವೂ ಆಗಿವೆ. ಎಲೆಯ ಬುಡ ಕವಚದಂತಿದೆ. ಇದು ಅಂತರಗೆಣ್ಣಿನ ಒಂದಷ್ಟು ಭಾಗವನ್ನು ಸುತ್ತುವರಿದಿದ್ದು ಅನಂತರ ಕಾಂಡದಿಂದ ಬೇರ್ಪಟ್ಟು ಎಲೆಯ ಅಲಗು ಭಾಗವಾಗಿ ಉದ್ದ ಬೆಳೆಯುತ್ತದೆ. ಎಲೆಯ ಅಲಗು ಮತ್ತು ಬುಡ ಸೇರುವಲ್ಲಿ ಪೊರೆಯಂಥ ಲಿಗ್ಯೂಲ್ ಉಂಟು. ಎಲೆಯ ಅಲಗು ಉದ್ದನೆಯ ಚಪ್ಪಟೆ ರಚನೆ. ತುದಿಯೆಡೆಗೆ ಸಾಗಿದಂತೆ ಕಿರಿದುಗೊಳ್ಳುತ್ತ ಬರುತ್ತದೆ. ಇದರ ಮೇಲ್ಮೈ ಸಣ್ಣ ಕೂದಲುಗಳಿಂದ ಕೂಡಿದೆ. ಎಲೆಯ ಉದ್ದಕ್ಕೂ ಚೆನ್ನಾಗಿ ಕಾಣುವ ಮಧ್ಯ ನರ ಉಂಟು. ಅಲಗಿನ ಅಂಚು ಕೊಂಚ ಒರಟು ಹಾಗೂ ಎಲೆಯ ಬುಡಭಾಗದೆಡೆ ಅಂಕುಡೊಂಕಾಗಿದೆ.

ಮುಸುಕಿನ ಜೋಳದಲ್ಲಿ ಗಂಡು ಹೆಣ್ಣು ಹೂಗಳು ಪ್ರತ್ಯೇಕ ಮಂಜರಿಗಳಲ್ಲಿ ರೂಪುಗೊಳ್ಳುತ್ತವೆ. ಗಂಡು ಹೂಗೊಂಚಲು ಗಿಡದ ತುದಿಯಲ್ಲೂ ಹೆಣ್ಣು ಹೂಗೊಂಚಲು ಗಿಡದ ಮಧ್ಯೆ ಅಥವಾ ಬುಡದಲ್ಲಿ ಇರುವ ಎಲೆಯ ಕಕ್ಷದಲ್ಲೂ ಸ್ಥಿತವಾಗಿವೆ. ಗಂಡು ಗೊಂಚಲು ಅನೇಕ ಕವಲುಗಳುಳ್ಳ ಪ್ಯಾನಿಕಲ್ ಎಂಬ ಬಗೆಯದು. ಇದರಲ್ಲಿ ನೆಟ್ಟಗೆ ಬೆಳೆಯುವ ಪ್ರಧಾನ ಅಕ್ಷ ಮತ್ತು ಇದರಿಂದ ಹೊರಟು ಆಚೀಚೆ ಬಾಗಿರುವ ಕವಲುಗಳಿವೆ. ಎರಡರ ಮೇಲೂ ಒಂಟಿ ಇಲ್ಲವೆ ಎರಡು ಸಾಲುಗಳಲ್ಲಿ ಜೋಡಿ ಗಂಡು ಹೂಗಳಿರುವುವು. ಪ್ರತಿಯೊಂದು ಗಂಡು ಹೂವಿನಲ್ಲಿ 3 ಪುಂಕೇಸರಗಳಿವೆ.

ಈ ಕದಿರುಗಳು ಹೆಣ್ಣು ಪುಷ್ಪ ವಿನ್ಯಾಸಗಳಾಗಿವೆ. ಇವು ಪ್ರಧಾನ ಕಾಂಡದ ಮೇಲೆ ಎಲೆಯ ಕಕ್ಷದಲ್ಲಿ ಕಾಣಿಸಿಕೊಳ್ಳುತ್ತವೆ. ಇವು ಅನೇಕ ಎಲೆಗಳ ಪದರಗಳಲ್ಲಿ ಬಿಗಿಯಾಗಿ ಮುಚ್ಚಲ್ಪಟ್ಟಿರುತ್ತವೆ. ಆದ್ದರಿಂದ ಕಾಂಡಕ್ಕೆ ಹತ್ತಿರದಲ್ಲಿದ್ದು ಕದಿರಿನ ಕೊನೆಯಲ್ಲಿ ಎಲೆ ಸುರುಳಿಯ ತಿಳಿ ಹಳದಿ ಎಳೆಗಳು ಹೊರಕ್ಕೆ ಬರುವವರೆಗೆ ಅವು ಸುಲಭವಾಗಿ ಹೊರಕ್ಕೆ ಕಾಣಿಸಿಕೊಳ್ಳುವುದಿಲ್ಲ. ಇವು ಉದ್ದನೆಯ ನಯವಾದ ದಾರದಂಥ ಶಲಾಕೆಗಳು. ಈ ಎಳೆಗಳು ನೀಳವಾದ ಶಲಾಕಾಗ್ರಗಳು. ಅವು ಕೂದಲಿನ ಕಟ್ಟಿನಂತೆ, ಮೊದಲು ಹಸಿರು ನಂತರ ಕೆಂಪು ಅಥವಾ ಹಳದಿ ಬಣ್ಣದಲ್ಲಿ ಕಾಣುತ್ತವೆ. ಇಂಥ ನೂರಾರು ಶಲಾಕೆಗಳು ಹೊಗೊಂಚಲಿನ ಮೇಲ್ತುದಿಯಿಂದ ಹೊರ ಚಾಚಿಕೊಂಡಿರುತ್ತದೆ. ಇವನ್ನು ಒಟ್ಟಾಗಿ 'ರೇಷ್ಮೆ' (ಸಿಲ್ಕ್) ಎಂದು ಕರೆಯುವುದಂಟು. ಪ್ರತಿಯೊಂದು ಹೆಣ್ಣು ಹೂವಿನಲ್ಲಿ ಒಂದೇ ಒಂದು ಅಂಡಕವುಂಟು. ಮೇವಿಗಾಗಿ ಮಾಡುವ ನಾಟಿಯು ಮತ್ತಷ್ಟು ಒತ್ತಾಗಿರುತ್ತದೆ ಹಾಗೂ ಕದಿರುಗಳ ಪ್ರಮಾಣವು ಕಡಿಮೆಯಾಗಿರುತ್ತದೆ ಮತ್ತು ಸಸ್ಯದ ಭಾಗಗಳು ಹೆಚ್ಚಾಗಿರುತ್ತವೆ. ಕೆಲವು ಪ್ರಭೇದದ ಮೆಕ್ಕೆ ಜೋಳಗಳನ್ನು ಅನೇಕ ಹೆಚ್ಚುವರಿ ಕದಿರುಗಳನ್ನು ಉತ್ಪಾದಿಸುವುದಕ್ಕಾಗಿ ಬೆಳೆಸಲಾಗುತ್ತದೆ. ಇವು "ಬೇಬಿ ಕಾರ್ನ್"ಗಳ ಮೂಲವಾಗಿವೆ. ಇವನ್ನು ಏಷ್ಯಾದ ಅಡುಗೆಯಲ್ಲಿ ಸಸ್ಯಾಹಾರವಾಗಿ ಬಳಸುತ್ತಾರೆ.

ಮೆಕ್ಕೆ ಜೋಳವು ಹೂಬಿಡಲು ದೀರ್ಘ-ರಾತ್ರಿ ಬೇಕಾಗುವ ಒಂದು ಐಚ್ಛಿಕ ಸಸ್ಯವಾಗಿದೆ ಹಾಗೂ ಅದು ಒಗ್ಗಿಕೊಂಡ ವಾತಾವರಣದಲ್ಲಿ ಕೆಲವು ಬೆಳೆಯುವ ಉಷ್ಣಾಂಶಮಾನ ದಿನಗಳು > 50 °F (10 °C)ನಲ್ಲಿ ಹೂ ಬಿಡುತ್ತದೆ.[] ಮೆಕ್ಕೆ ಜೋಳವು ಹೂ ಬಿಡುವ ಮುನ್ನ ಕಳೆಯಬೇಕಾದ ದಿನಗಳ ಸಂಖ್ಯೆಯ ಮೇಲೆ ದೀರ್ಘ ರಾತ್ರಿಗಳು ಹೊಂದಿರುವ ಪ್ರಭಾವದ ಪ್ರಮಾಣವು ಸಸ್ಯವರ್ಣಕ ವ್ಯವಸ್ಥೆಯಿಂದ ಆನುವಂಶಿಕವಾಗಿ ಸೂಚಿತ ಮತ್ತು ನಿಯಂತ್ರಿತವಾಗಿರುತ್ತದೆ.[] ದ್ಯುತಿಪ್ರತಿಕ್ರಿಯೆಯು ಉಷ್ಣವಲಯದ ತಳಿಗಳಲ್ಲಿ ವಿಚಿತ್ರವಾಗಿರಬಹುದು. ಹೆಚ್ಚಿನ ಅಕ್ಷಾಂಶ ಪ್ರದೇಶಗಳಿಗೆ ವಿಶಿಷ್ಟವಾಗಿರುವ ದೀರ್ಘ ದಿನಗಳು ಸಸ್ಯಗಳಿಗೆ ಹೆಚ್ಚು ಉದ್ದ ಬೆಳೆಯುವುದಕ್ಕೆ ಬಿಡುತ್ತವೆ. ಇದರಿಂದ ಅವುಗಳಿಗೆ ಹಿಮದಿಂದ ಸಾಯುವುದಕ್ಕಿಂತ ಮೊದಲು ಕಾಳುಗಳನ್ನು ಉತ್ಪಾದಿಸಲು ಸಾಕಷ್ಟು ಸಮಯ ಇರುವುದಿಲ್ಲ. ಆದರೆ, ಈ ಗುಣಲಕ್ಷಣಗಳು ಜೈವಿಕ ಇಂಧನಗಳಿಗಾಗಿ ಉಷ್ಣವಲಯದ ಮೆಕ್ಕೆ ಜೋಳವನ್ನು ಬಳಸುವುದಕ್ಕೆ ಉಪಯುಕ್ತ ಎಂಬುದನ್ನು ತೋರಿಸಿಕೊಡುತ್ತವೆ.[೧೦]

ಕಾಂಡಗಳು, ಕದಿರುಗಳು ಮತ್ತು ಶಲಾಕಾಗುಚ್ಛಗಳು
ಗಂಡು ಹೂವುಗಳು

ಕಾಂಡದ ತುದಿಯು ತೆನೆಯಲ್ಲಿ ಕೊನೆಯಾಗುತ್ತದೆ. ತೆನೆಯು ಗಂಡು ಹೂವುಗಳ ಪುಷ್ಪ ವಿನ್ಯಾಸವಾಗಿದೆ. ತೆನೆಯಲ್ಲೂ ಮುಖ್ಯ ಅಕ್ಷವೊಂದಿದ್ದು ಅದರ ಮೇಲೆ ಅನೇಕ ಸಾಲುಗಳಲ್ಲಿ ಜೊತೆ ಜೊತೆಯಾಗಿ ಸ್ಥಿತವಾಗಿರುವ ಹೆಣ್ಣು ಹೂಗಳು ಇವೆ. ಪ್ರತಿಯೊಂದು ಜೋಡಿಯಲ್ಲೂ ಒಂದು ಹೂ ಮಾತ್ರ ಫಲವಂತವಾಗಿರುತ್ತದೆ. ತೆನೆಯು ಬೆಳೆದಾಗ ಮತ್ತು ಪರಿಸ್ಥಿತಿಯು ಯೋಗ್ಯ ರೀತಿಯಲ್ಲಿ ಬಿಸಿಯಾಗಿ ಶುಷ್ಕವಾಗಿದ್ದಾಗ, ತೆನೆಯ ಮೇಲಿರುವ ಪರಾಗ ಕೋಶಗಳು ಒಡೆದುಕೊಂಡು ಪರಾಗಗಳನ್ನು ಬಿಡುಗಡೆ ಮಾಡುತ್ತವೆ. ಮೆಕ್ಕೆ ಜೋಳದ ಪರಾಗವು ವಾಯುಫಲಿತ ವಾಗಿದೆ (ಗಾಳಿಯಿಂದ ಹರಡುತ್ತದೆ). ಇದರ ಅತ್ಯಧಿಕ ನೆಲೆಗೊಳಿಸುವ ವೇಗದಿಂದಾಗಿ ಹೆಚ್ಚಿನ ಪರಾಗಗಳು ಕೆಲವು ಮೀಟರ್‌ಗಳೊಳಗಾಗಿ ತೆನೆಯಲ್ಲಿ ಬೀಳುತ್ತವೆ. ಪ್ರತಿಯೊಂದು ಶಲಾಕಾಗುಚ್ಛವು ಪರಾಗಸ್ಪರ್ಶಕ್ಕೊಳಗಾಗಿ ಮೆಕ್ಕೆ ಜೋಳದ ಒಂದು ಕಾಳನ್ನು ಉತ್ಪಾದಿಸಬಹುದು. ನಿಷೇಚನ ಕ್ರಿಯೆ ಮುಗಿದ ಅನಂತರ ರೇಷ್ಮೆಗಳೆಲ್ಲ ಬಾಡಿ ಉದುರಿ ಹೋಗುತ್ತವಲ್ಲದೆ ಇಡೀ ಅಂಡಾಶಯ ಕ್ಯಾರಿಯಾಪ್ಸಿಸ್ ಎಂಬ ಹೆಸರಿನ ಫಲ (ಕಾಳು) ಆಗಿ ರೂಪುಗೊಳ್ಳುತ್ತದೆ. ತೆನೆಯುದ್ದಕ್ಕೂ ಈ ಕಾಳುಗಳು ಸಾಲಾಗಿ ದಂತಪಂಕ್ತಿಯಂತೆ ಜೋಡಣೆಗೊಂಡಿರುವುವು. ಕಾಳುಗಳ ಮೇಲ್ಮೆ ಗುಂಡಾಗಿ ನಯವಾಗಿರಬಹುದು, ಸುಕ್ಕುಗಟ್ಟಿರಬಹುದು ಇಲ್ಲವೆ ಒಂದೆಡೆಯಲ್ಲಿ ಗುಳಿಯಂತೆ ಕಾಣುವ ತಗ್ಗಿನಿಂದ ಕೂಡಿರಬಹುದು. ಬೀಜಗಳ ಒಳಗಿನ ಭ್ರೂಣಾಹಾರ ಗಟ್ಟಿಯಾಗಿರಬಹುದು ಅಥವಾ ಹಿಟ್ಟಿನಂತೆ ಮೆತುವಾಗಿರಬಹುದು. ಅದರ ಬಣ್ಣ ಕೂಡ ಬಿಳಿ, ಹಳದಿ, ಕೆಂಪು ಊದಾ ಹೀಗೆ ವೈವಿಧ್ಯಮಯವಾಗಿರುತ್ತದೆ. ಭ್ರೂಣಾಹಾರದಲ್ಲಿ ಪ್ರೋಟೀನು ಹಾಗೂ ಪಿಷ್ಟ ಇವು ಹೆಚ್ಚಿನ ಮೊತ್ತದಲ್ಲಿವೆ. ಭ್ರೂಣಭಾಗದಲ್ಲಿ ಕಾಳಿನ ತೂಕದ ಶೇಕಡಾ 6ರಷ್ಟು ಒಂದು ಬಗೆಯ ತೈಲವುಂಟು. ಎಳೆಯ ಕದಿರುಗಳನ್ನು ಜೊಂಡು ಮತ್ತು ಶಲಾಕಾಗುಚ್ಛಗಳೊಂದಿಗೆ ಹಸಿಯಾಗಿಯೇ ಸೇವಿಸಬಹುದು. ಆದರೆ ಸಸ್ಯವು ಬೆಳೆದಂತೆ (ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ) ಜೊಂಡು ಗಟ್ಟಿಯಾಗುತ್ತದೆ ಮತ್ತು ಶಲಾಕಾಗುಚ್ಛಗಳು ಒಣಗಿ ತಿನ್ನಲು ಯೋಗ್ಯವಾಗಿರುವುದಿಲ್ಲ. ಬೆಳೆಯುವ ಅವಧಿಯ ಕೊನೆಯಲ್ಲಿ ಕಾಳುಗಳು ಒಣಗಿ, ಅವುಗಳನ್ನು ಮೊದಲು ಕುದಿಯುವ ನೀರಿನಲ್ಲಿ ಬೇಯಿಸದೆ ಜಗಿಯಲು ಕಷ್ಟವಾಗಿರುತ್ತದೆ. ಅಭಿವೃದ್ಧಿಹೊಂದಿದ ರಾಷ್ಟ್ರಗಳಲ್ಲಿ ಆಧುನಿಕ ವ್ಯವಸಾಯ ತಂತ್ರಜ್ಞಾನಗಳು ಸಾಮಾನ್ಯವಾಗಿ ಸಸ್ಯಗಳನ್ನು ದಟ್ಟವಾಗಿ ನೆಡುವುದನ್ನು ಅವಲಂಬಿಸಿರುತ್ತವೆ, ಅವು ಪ್ರತಿ ಕಾಂಡಕ್ಕೆ ಒಂದು ದೊಡ್ಡ ಕದಿರನ್ನು ಉತ್ಪಾದಿಸುತ್ತವೆ.

ಬೀಜಗಳು

[ಬದಲಾಯಿಸಿ]

ಮೆಕ್ಕೆ ಜೋಳದ ಕಾಳು ಹುಲ್ಲುಗಳ ಮಾದರಿಯಲ್ಲಿ ಬೀಜದ ಹೊದಿಕೆಯೊಂದಿಗೆ ಸೇರಿಕೊಂಡಿರುವ ಹಣ್ಣಿನ ಬೀಜಕೋಶವೊಂದನ್ನು ಹೊಂದಿರುತ್ತದೆ. ಸಂಪೂರ್ಣ ಕಾಳನ್ನು ಬೀಜ ಎನ್ನಲಾಗುತ್ತದೆ. ರಚನೆಯಲ್ಲಿ ಜೊಂಡು ಸಮಷ್ಟಿಯ ಹಣ್ಣುಗಳನ್ನು ಹೋಲುತ್ತದೆ. ಅದರ ಹೊರತಾಗಿ ಪ್ರತ್ಯೇಕ ಹಣ್ಣುಗಳು (ಕಾಳುಗಳು) ಒಂದು ಗುಂಪಾಗಿ ಒಟ್ಟುಗೂಡುವುದಿಲ್ಲ. ಕಾಳುಗಳು ಬಟಾಣಿ ಗಾತ್ರದಲ್ಲಿರುತ್ತವೆ. ಅವು ಬಿಳಿ ತಿರುಳಿನಂತೆ ಪದಾರ್ಥದ ಸುತ್ತ ಕ್ರಮಬದ್ಧ ಸಾಲುಗಳಲ್ಲಿ ಅಂಟಿಕೊಂಡು ಕದಿರುಗಳಾಗುತ್ತವೆ. ಒಂದು ಕದಿರು 200 ರಿಂದ 400 ಕಾಳುಗಳನ್ನು ಹೊಂದಿರುತ್ತದೆ ಮತ್ತು 10–25 ಸೆಂಟಿಮೀಟರ್‌ಗಳಷ್ಟು (4–10 ಇಂಚುಗಳು) ಉದ್ದವಿರುತ್ತದೆ. ಅವು ಅನೇಕ ಬಣ್ಣಗಳಲ್ಲಿರುತ್ತವೆ: ಕಪ್ಪು, ನೀಲಿ-ಬೂದು, ನೇರಳೆ, ಹಸಿರು, ಕೆಂಪು, ಬಿಳಿ ಮತ್ತು ಹಳದಿ. ಹಿಟ್ಟಾಗಿ ಪುಡಿಮಾಡಿದಾಗ ಮೆಕ್ಕೆ ಜೋಳವು ಕಡಿಮೆ ಹೊಟ್ಟನ್ನು ಹೊಂದಿದ್ದು ಗೋಧಿಗಿಂತ ಹೆಚ್ಚು ಹಿಟ್ಟನ್ನು ನೀಡುತ್ತದೆ. ಆದರೆ ಇದು ಗೋಧಿಯಲ್ಲಿರುವ ಗ್ಲೂಟನ್ ಪ್ರೋಟೀನ್ಅನ್ನು ಹೊಂದಿರುವುದಿಲ್ಲ. ಆದ್ದರಿಂದ ಕಡಿಮೆ ಬೆಳೆಯುವ ಸಾಮರ್ಥ್ಯ ಮತ್ತು ಕೂಡಿಕೊಂಡಿರುವಿಕೆಯೊಂದಿಗೆ ಬೇಕ್ ಮಾಡಿದ ಪದಾರ್ಥವಾಗಿ ಬಳಸಲಾಗುತ್ತದೆ.

ಕದಿರಿನಲ್ಲಿ ಹೆಚ್ಚು ಶರ್ಕರ ಮತ್ತು ಪಿಷ್ಟವನ್ನು ಶೇಖರಿಸಿಕೊಂಡಿರುವ ಆನುವಂಶಿಕ ರೂಪಾಂತರವನ್ನು ತರಕಾರಿಯಾಗಿ ಬಳಸಲಾಗುತ್ತದೆ ಮತ್ತು ಇದನ್ನು ಸ್ವೀಟ್ ಕಾರ್ನ್ ಎಂದು ಕರೆಯುತ್ತಾರೆ.

ಬೆಳೆದಿಲ್ಲದ ಮೆಕ್ಕೆ ಜೋಳದ ಚಿಗುರು ಒಂದು ಪ್ರಬಲವಾದ ಪ್ರತಿಜೀವಕ ಅಂಶ DIMBOA (2,4-ಡಿಹೈಡ್ರೋಕ್ಸಿ-7-ಮೀಥಾಕ್ಸಿ-1,4-ಬೆಂಜಾಕ್ಸಜಿನ್-3-ಒನ್) ಅನ್ನು ಹೊಂದಿರುತ್ತದೆ. DIMBOA ಹೈಡ್ರೋಕ್ಸಮಿಕ್ ಆಮ್ಲಗಳ (ಬೆಂಜಾಕ್ಸಾಜಿನಾಯ್ಡ್‌ಗಳೆಂದೂ ಕರೆಯುತ್ತಾರೆ) ಗುಂಪಿಗೆ ಸೇರಿದ ಒಂದು ಅಂಶವಾಗಿದೆ. ಇದು ಕೀಟ, ರೋಗಕಾರಕ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳಂತಹ ಉಪದ್ರವಕಾರಿ ಕ್ರಿಮಿಗಳ ವಿರುದ್ಧ ನೈಸರ್ಗಿಕ ಪ್ರತಿರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. DIMBOA ಮೆಕ್ಕೆ ಜೋಳಕ್ಕೆ ಸಂಬಂಧಿತ ಹುಲ್ಲು ಜಾತಿಗಳಲ್ಲಿ, ನಿರ್ದಿಷ್ಟವಾಗಿ ಗೋಧಿಯಲ್ಲಿ, ಕಂಡುಬರುತ್ತದೆ. DIMBOAಅನ್ನು ಹೊಂದಿರದ ಮೆಕ್ಕೆ ಜೋಳದ ಪರಿವರ್ತಿತ ಜಾತಿಯು (bx) ಗಿಡಹೇನು ಮತ್ತು ಶಿಲೀಂಧ್ರಗಳ ದಾಳಿಗೆ ಒಳಗಾಗುವ ಸಂಭವ ಜಾಸ್ತಿ ಇರುತ್ತದೆ. DIMBOA ಬೆಳೆದಿಲ್ಲದ ಮೆಕ್ಕೆ ಜೋಳದಲ್ಲಿ ಯುರೋಪಿನ ಕೊರೆಯುವ ಕ್ರಿಮಿಗಳಿಗೂ (ಕ್ರ್ಯಾಂಬಿಡೆ ವಂಶ) ಪ್ರತಿರೋಧಕವಾಗಿ ಕೆಲಸ ಮಾಡುತ್ತದೆ. ಮೆಕ್ಕೆ ಜೋಳವು ಬೆಳೆದಂತೆ DIMBOA ಮಟ್ಟ ಮತ್ತು ಕೊರೆಯುವ ಕ್ರಿಮಿಗಳ ವಿರುದ್ಧದ ಪ್ರತಿರೋಧವು ಕ್ಷೀಣಿಸುತ್ತದೆ.

ಹೆಚ್ಚು ಆಳವಿಲ್ಲದ ಬೇರುಗಳಿಂದಾಗಿ ಮೆಕ್ಕೆ ಜೋಳವು ನಿರಾರ್ದ್ರತೆಗೆ ಈಡಾಗುತ್ತದೆ, ಮಣ್ಣಿನಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ಅನುಭವಿಸುತ್ತದೆ ಹಾಗೂ ಬಿರುಸಾದ ಗಾಳಿಗೆ ಬೇರುಸಹಿತ ಕಿತ್ತು ಬರುವ ಸಂಭವವಿರುತ್ತದೆ.[೧೧]

ಮೆಕ್ಕೆ ಜೋಳವನ್ನು ಆಹಾರವಾಗಿ ಬಳಸುವುದರಿಂದಾಗಬಹುದಾದ ಕೆಲವು ಅಪಾಯಗಳು

[ಬದಲಾಯಿಸಿ]

ಪೆಲಾಗ್ರ

[ಬದಲಾಯಿಸಿ]

ಸಾಂಪ್ರದಾಯಿಕವಾಗಿ ಅಮೆರಿಕಾದ ಸ್ಥಳೀಯರು ಬೆಳೆಸುತ್ತಿದ್ದ ಮೆಕ್ಕೆ ಜೋಳವನ್ನು ಇತರ ಕೆಲವರು ಬೆಳೆಯಲು ಆರಂಭಿಸಿದಾಗ, ಅದರ ಉತ್ಪಾದಕತೆಯಿಂದಾಗಿ ಅದು ಹೆಚ್ಚು ಉತ್ಸಾಹದ ಸ್ವಾಗತವನ್ನು ಪಡೆಯಿತು. ಆದರೆ ಮೆಕ್ಕೆ ಜೋಳವನ್ನು ಪ್ರಧಾನ ಆಹಾರವಾಗಿ ಬಳಸಿದೆಡೆಗಳಲ್ಲೆಲ್ಲಾ ವ್ಯಾಪಕವಾದ ಅಪೌಷ್ಟಿಕತೆಯ ಸಮಸ್ಯೆ ಎದುರಾಯಿತು. ಈ ರೀತಿಯ ಅಪೌಷ್ಟಿಕತೆಯು ಮೆಕ್ಕೆ ಜೋಳವು ಪ್ರಧಾನ ಆಹಾರವಾಗಿದ್ದ ಅಮೆರಿಕಾದ ಸ್ಥಳೀಯರಲ್ಲಿ ಸಾಮಾನ್ಯವಾಗಿ ಕಂಡುಬರದಿದ್ದುದು ಒಂದು ನಿಗೂಢ ವಿಷಯವಾಗಿತ್ತು.[೧೨]

ಸ್ಥಳೀಯ ಅಮೆರಿಕನ್ನರು ಮೆಕ್ಕೆ ಜೋಳವನ್ನು ಕ್ಷಾರ-ನೀರಿನಲ್ಲಿ ಅದ್ದಿಡುವುದನ್ನು ಬಹುಹಿಂದೆಯೇ ಕಲಿತಿದ್ದರು ಎಂಬುದನ್ನು ಅಂತಿಮವಾಗಿ ಕಂಡುಹಿಡಿಯಲಾಯಿತು. ಈ ಕ್ಷಾರವನ್ನು ಉತ್ತರ ಅಮೆರಿಕನ್ನರು ಬೂದಿಯಿಂದ ಮತ್ತು ಮೀಸೊಅಮೆರಿಕನ್ನರು ಸುಣ್ಣದಿಂದ (ಕ್ಯಾಲ್ಸಿಯಂ ಆಕ್ಸೈಡ್) ಮಾಡುತ್ತಿದ್ದರು. ಇದು B-ಜೀವಸತ್ವ ನಿಯಾಸಿನ್ಅನ್ನು ಬಿಡುಗಡೆ ಮಾಡುತ್ತದೆ. ಈ ಜೀವಸತ್ವದ ಕೊರತೆಯು ಪೆಲಾಗ್ರ ಎಂದು ಕರೆಯುವ ರೋಗವನ್ನು ಉಂಟುಮಾಡುತ್ತದೆ. ಈ ಕ್ಷಾರ ಕ್ರಿಯೆಯನ್ನು ನ್ಯಾಹ್ವಾಟ್ಲ್ (ಅಜ್ಟೆಕ್)ನಿಂದ ಪಡೆದ ಹೆಸರಿನಿಂದಾಗಿ: ನಿಕ್ಸ್‌ಟಮಲೈಸೇಶನ್ ಎಂದು ಕರೆಯಲಾಗುತ್ತದೆ.

ನಿಯಾಸಿನ್ ನ್ಯೂನ್ಯತೆಯ ಹೊರತಾಗಿ, ಪೆಲಾಗ್ರವು ಮೆಕ್ಕೆ ಜೋಳದಲ್ಲಿ ಲೈಸಿನ್ ಮತ್ತು ಟ್ರಿಪ್ಟೊಫಾನ್ ಎಂಬ ಎರಡು ಪ್ರಮುಖ ಅಮೈನೊ ಆಮ್ಲಗಳ ಅಭಾವದಿಂದ ಉಂಟಾಗುವ ಪ್ರೋಟೀನ್ ಕೊರತೆಯಿಂದಲೂ ಬರುತ್ತದೆ. ನಿಕ್ಸ್‌ಟಮಲೈಸೇಶನ್ ಕ್ರಿಯೆಯು ಸ್ವಲ್ಪ ವ್ಯಾಪ್ತಿಯವರೆಗೆ ಲೈಸಿನ್ ಮತ್ತು ಟ್ರಿಪ್ಟೊಫಾನ್ ಲಭ್ಯತೆಯನ್ನೂ ಹೆಚ್ಚಿಸುತ್ತದೆ. ಆದರೆ ಸ್ಥಳೀಯ ಅಮೆರಿಕನ್ನರು ಬಹು ಹಿಂದೆಯೇ ಅವರ ಮೆಕ್ಕೆ ಜೋಳದ ಬಳಕೆಯನ್ನು ಬೀನ್ಸ್ ಹಾಗೂ ಆಮರಾಂತ್ ಮತ್ತು ಚಿಯಾದಂತಹ ಇತರ ಪ್ರೋಟೀನ್ ಮೂಲಗಳೊಂದಿಗೆ ಸಮತೋಲನ ಮಾಡಿಕೊಳ್ಳುವುದನ್ನು ಕಲಿತಿದ್ದರು. ಅಲ್ಲದೆ ಅವರು ಸಾಮಾನ್ಯ ಪ್ರೋಟೀನ್ ಸಂಶ್ಲೇಷಣೆಗೆ ಸಂಪೂರ್ಣ ಪ್ರಮಾಣದ ಅಮೈನೊ ಆಮ್ಲಗಳನ್ನು ಪಡೆಯುವುದಕ್ಕಾಗಿ ಮಾಂಸ ಮತ್ತು ಮೀನುಗಳನ್ನೂ ಬಳಸುತ್ತಿದ್ದರು.

ಅಮೆರಿಕಾದಲ್ಲಿ ಸುಮಾರು ಸಾವಿರ ವರ್ಷಗಳಷ್ಟು ಕಾಲದಿಂದ ಪಡೆದ ಅವಶ್ಯಕ ವ್ಯಾವಸಾಯಿಕ ಜ್ಞಾನವಿಲ್ಲದೆ ಮೆಕ್ಕೆ ಜೋಳವನ್ನು ಸ್ಥಳೀಯರಲ್ಲದ ಅಮೆರಿಕನ್ನರು ಆಹಾರದಲ್ಲಿ ಬಳಸಲು ಆರಂಭಿಸಿದರಿಂದ, ಇತರ ಕೃಷಿಯಲ್ಲಿ ಮೆಕ್ಕೆ ಜೋಳದ ಅವಲಂಬನೆಯು ಹೆಚ್ಚು ದುರಂತವಾಗಿತ್ತು. 19ನೇ ಶತಮಾನದ ಉತ್ತರಾರ್ಧದಲ್ಲಿ ಪೆಲಾಗ್ರವು ದಕ್ಷಿಣ ಯು.ಎಸ್.ನ ಭಾಗಗಳಲ್ಲಿ ಸಾಂಕ್ರಾಮಿಕವಾಗಿ ಹಬ್ಬಿಕೊಂಡಿತು. ವೈದ್ಯಕೀಯ ಸಂಶೋಧಕರು ಇದರ ಮೂಲದ ಬಗ್ಗೆ ಎರಡು ತತ್ವಗಳನ್ನು ಪರ್ಯಾಲೋಚಿಸಿದ್ದಾರೆ: ಕೊರತೆ-ತತ್ವವು (ಅಂತಿಮವಾಗಿ ನಿಜವೆಂದು ತೋರಿಸಲಾದ) ಪೆಲಾಗ್ರವು ಕೆಲವು ಪೌಷ್ಟಿಕಾಂಶಗಳ ಕೊರತೆಯಿಂದ ಬರುತ್ತದೆ ಎಂಬುದನ್ನು ಆಧಾರವಾಗಿ ಗ್ರಹಿಸಿತು ಹಾಗೂ ಸೂಕ್ಷ್ಮಾಣು ಜೀವಿಗಳ ತತ್ವವು ಪೆಲಾಗ್ರವು ಸ್ಥಿರ ಕೀಟಗಳಿಂದ ಹರಡುವ ಸೂಕ್ಷ್ಮಾಣು ಜೀವಿಗಳಿಂದ ಬರುತ್ತದೆ ಎನ್ನುವುದನ್ನು ನಿಜವೆಂದು ಭಾವಿಸಿತು. 1914ರಲ್ಲಿ ಯು.ಎಸ್. ಸರಕಾರವು ಪೆಲಾಗ್ರದ ಸೂಕ್ಷ್ಮಾಣು ಜೀವಿಗಳ ತತ್ವವನ್ನು ಅಧಿಕೃತವಾಗಿ ಅನುಮೋದಿಸಿತು. ಆದರೆ ಕೆಲವು ವರ್ಷಗಳ ನಂತರ ಸಾಕ್ಷ್ಯಗಳು ಇದರ ವಿರುದ್ಧ ಹುಟ್ಟಿಕೊಂಡಿದರಿಂದ ಈ ಅನುಮೋದನೆಯನ್ನು ಹಿಂತೆಗೆದುಕೊಂಡಿತು. 1920ರ ಮಧ್ಯಂತರದಲ್ಲಿ ಪೆಲಾಗ್ರದ ಕೊರತೆ-ತತ್ವವು ವೈಜ್ಞಾನಿಕ ಒಮ್ಮತವನ್ನು ಪಡೆಯಿತು. ಈ ತತ್ವವು 1932ರಲ್ಲಿ ಪೆಲಾಗ್ರಕ್ಕೆ ನಿಯಾಸಿನ್ ಕೊರತೆಯು ಕಾರಣವೆಂಬುದನ್ನು ಕಂಡುಹಿಡಿದಾಗ ಪ್ರಮಾಣೀಕರಿಸಲ್ಪಟ್ಟಿತು.

ಕ್ಷಾರ ಕ್ರಿಯೆಯ ಮತ್ತು ಆಹಾರದ ವೈವಿಧ್ಯತೆಯ ಬಗ್ಗೆ ತಿಳಿದು, ಅದನ್ನು ಬಳಕೆಗೆ ತಂದ ನಂತರ ಪೆಲಾಗ್ರವು ನಿರ್ಮೂಲನಗೊಂಡಿತು. ಇದರ ಅಂತ್ಯಕ್ಕೆ ಅಧಿಕ ಲೈಸಿನ್ ಇರುವ ಮೆಕ್ಕೆ ಜೋಳದ ಅಭಿವೃದ್ಧಿ ಮತ್ತು ಹೆಚ್ಚು ಸಮತೋಲಿತ ಆಹಾರದ ಬಳಕೆಯೂ ಸಹ ಸಹಾಯ ಮಾಡಿದೆ.

ಅಲರ್ಜಿ

[ಬದಲಾಯಿಸಿ]

ಮೆಕ್ಕೆ ಜೋಳವು ಲಿಪಿಡ್ ವರ್ಗಾಯಿಸುವ ಪ್ರೋಟೀನ್ಅನ್ನು ಹೊಂದಿರುತ್ತದೆ. ಇದು ಬೇಯಿಸಿದ ನಂತರವೂ ಇರುವ ಜೀರ್ಣವಾಗದ ಪ್ರೋಟೀನ್ ಆಗಿದೆ. ಈ ಪ್ರೋಟೀನ್ ಮಾನವರಲ್ಲಿ ಮೆಕ್ಕೆ ಜೋಳದಿಂದ ಅಲರ್ಜಿ ಉಂಟಾಗುವಂತೆ ಮಾಡುತ್ತದೆ.[೧೩] ಈ ಅಲರ್ಜಿ ಪ್ರತಿಕ್ರಿಯೆಯು ಚರ್ಮದ ಮೇಲೆ ಸಣ್ಣ ಸಣ್ಣ ಕೆಂಪು ಗುಳ್ಳೆಗಳು ಏಳುವಂತೆ ಮಾಡುತ್ತದೆ, ಲೋಳೆ ಪೊರೆಗಳ ಊದಿಕೊಳ್ಳುವಿಕೆ ಅಥವಾ ನವೆ, ಭೇದಿ, ವಾಂತಿ, ಉಬ್ಬಸ ಮತ್ತು ಗಂಭೀರ ಪರಿಸ್ಥಿತಯಲ್ಲಿ ಅತಿಸಂವೇದನಶೀಲತೆಯನ್ನು ಉಂಟುಮಾಡುತ್ತದೆ. ಈ ಅಲರ್ಜಿಯು ಸಾಮಾನ್ಯ ಜನರಲ್ಲಿ ಎಷ್ಟು ಪ್ರಮಾಣದಲ್ಲಿರುತ್ತದೆ ಎಂಬುದು ಅಸ್ಪಷ್ಟವಾಗಿದೆ.

ತಳಿಶಾಸ್ತ್ರ

[ಬದಲಾಯಿಸಿ]
ಹೊಸ ಸ್ಥಳೀಯ ತಳಿಗಳನ್ನು ಬೆಳೆಸುವಾಗ ಆನುವಂಶಿಕ ವೈವಿಧ್ಯತೆಯನ್ನು ಸೇರಿಸಲು ಮೆಕ್ಕೆ ಜೋಳದ ಹೊಸ ಉಪಜಾತಿಗಳನ್ನು ಸಂಗ್ರಹಿಸಲಾಗುತ್ತದೆ.
ಎರಡು ಅಥವಾ ಹೆಚ್ಚು ಬಣ್ಣಗಳಿರುವ ಎಲೆಗಳುಳ್ಳ ಮೆಕ್ಕೆ ಜೋಳ ಕದಿರುಗಳು

ಅನೇಕ ರೀತಿಯ ಮೆಕ್ಕೆ ಜೋಳಗಳನ್ನು ಆಹಾರವಾಗಿ ಉಪಯೋಗಿಸಲಾಗುತ್ತದೆ. ಪ್ರತಿಯೊಂದು ಹೊಂದಿರುವ ಪಿಷ್ಟದ ಆಧಾರದಲ್ಲಿ ವಿವಿಧ ಉಪಜಾತಿಗಳಾಗಿ ವಿಂಗಡಿಸಲಾಗುತ್ತದೆ:

  • ಫ್ಲವರ್ ಕಾರ್ನ್ — ಜಿಯಾ ಮೇಸ್ ವೇರ್. ಅಮೈಲೇಸಿಯಾ
  • ಪಾಪ್‌ಕಾರ್ನ್ಜಿಯಾ ಮೇಸ್ ವೇರ್. ಎವರ್ಟಾ
  • ಡೆಂಟ್ ಕಾರ್ನ್ — ಜಿಯಾ ಮೇಸ್ ವೇರ್. ಇಂಡೆಂಟಟ
  • ಫ್ಲಿಂಟ್ ಕಾರ್ನ್ — ಜಿಯಾ ಮೇಸ್ ವೇರ್. ಇಂಡ್ಯುರಟ
  • ಸ್ವೀಟ್ ಕಾರ್ನ್ — ಜಿಯಾ ಮೇಸ್ ವೇರ್. ಸ್ಯಾಕರಟ ಮತ್ತು ಜಿಯಾ ಮೇಸ್ ವೇರ್. ರ್ಯುಗೋಸ
  • ವ್ಯಾಕ್ಸಿ ಕಾರ್ನ್ — ಜಿಯಾ ಮೇಸ್ ವೇರ್. ಸೆರಂಟಿನ
  • ಅಮೈಲೊಮೈಜ್ — ಜಿಯಾ ಮೇಸ್
  • ಪಾಡ್ ಕಾರ್ನ್ — ಜಿಯಾ ಮೇಸ್ ವೇರ್. ಟ್ಯುನಿಕೆಟ ಲ್ಯಾರನಗ ಎಕ್ಸ್ A. ಸೇಂಟ್ ಹಿಲ್.
  • ಸ್ಟ್ರೈಪ್ಡ್ ಮೆಕ್ಕೆ ಜೋಳ — ಜಿಯಾ ಮೇಸ್ ವೇರ್. ಜ್ಯಾಪೋನಿಕ

ಭಾರತದಲ್ಲಿ: ಮುಸುಕಿನ ಜೋಳದಲ್ಲಿ ಹಲವಾರು ತಳಿಗಳಿದ್ದು, ಭಾರತದ ವಾಯುಗುಣ, ಮಣ್ಣು ಮತ್ತು ಗಿಡಗಳ ಗಾತ್ರ, ಇಳುವರಿ, ರೋಗನಿರೋಧಕ ಶಕ್ತಿ ಮುಂತಾದ ಗುಣಗಳನ್ನು ಅವಲಂಬಿಸಿ, ಸಂಕರ ಪ್ರಯೋಗಗಳ ಮೂಲಕ ವೃದ್ಧಿಸಲಾದ ನೂರಾರು ತಳಿಗಳನ್ನು ಕಾಣಬಹುದು. ಇವುಗಳ ಪೈಕಿ ಕೆಲವು ಇಂತಿವೆ: ಗಂಗಾ ಹೈಬ್ರಿಡ್-1, ಗಂಗಾ ಹೈಬ್ರಿಡ್ 101, ರಣಜಿತ್ ಹೈಬ್ರಿಡ್, ಡೆಕನ್ ಹೈಬ್ರಿಡ್, ಗಂಗಾ ಸಫೇದ್ ಹೈಬ್ರಿಡ್ 2, ಗಂಗಾ ಹೈಬ್ರಿಡ್ 5, ಡೆಕನ್ 101, ಆಂಬರ್ ಕಾಂಪೋಸಿಟ್, ಕಿಸ್‌ನ್, ಜವಹರ್, ವಿಕ್ರಮ್, ಸೋನ, ವಿಜಯ್, ಶಕ್ತಿ ಇತ್ಯಾದಿ.

ಈ ವಿಂಗಡನೆಯನ್ನು ಕಳೆದ 60 ವರ್ಷಗಳಿಂದೀಚೆಗೆ ಇನ್ನಷ್ಟು ಮಾಹಿತಿಯ ಆಧಾರದಲ್ಲಿ ಬಹು-ವರ್ಗೀಕರಣಗಳಾಗಿ ಬದಲಾಯಿಸಲಾಗಿದೆ. ಫಸಲಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಸ್ಯಗಳ ವಿಶೇಷ ಲಕ್ಷಣಗಳಿಂದ ದೃಢವಾದ ಆರಂಭಿಕ ವರ್ಗೀಕರಣಕ್ಕೆ ಸೇರಿಸಲಾಯಿತು, ನಂತರ ತಳೀಯ, ಜೀವಕೋಶಶಾಸ್ತ್ರೀಯ, ಪ್ರೋಟೀನ್ ಮತ್ತು ಡಿಎನ್ಎ ಆಧಾರಗಳನ್ನೂ ಸೇರಿಸಲಾಯಿತು. ಈಗ ವರ್ಗಗಳೆಂದರೆ - ಆಕಾರಗಳು, ಕುಲಗಳು, ವಂಶದ ಸಂಕೀರ್ಣಗಳು ಮತ್ತು ಇತ್ತೀಚಿನ ವಿಭಾಗಗಳು.

ಮೆಕ್ಕೆ ಜೋಳವು 10 ವರ್ಣತಂತುಗಳನ್ನು (n=10) ಹೊಂದಿದೆ. ವರ್ಣತಂತುಗಳ ಒಟ್ಟು ಉದ್ದ 1500 ಸೆಂಟಿಮೀಟರ್. ಕೆಲವು ಮೆಕ್ಕೆ ಜೋಳದ ವರ್ಣತಂತುಗಳು "ವರ್ಣತಂತುವಿನ ಉಬ್ಬು (ಕ್ರೋಮಸೋಮಲ್ ನಾಬ್)" ಎನ್ನುವುದನ್ನು ಹೊಂದಿರುತ್ತವೆ. ಇವು ಗಾಢ ಬಣ್ಣವನ್ನು ನೀಡುವ ಪುನರಾವರ್ತನೆಯನ್ನೊಳಗೊಂಡ ವಿವಿಧ ವರ್ಣದ ಅಂಶಗಳಾಗಿವೆ. ಈ ಪ್ರತಿಯೊಂದು ಉಬ್ಬು ಮೆಕ್ಕೆ ಜೋಳ ಮತ್ತು ಟಿಯೋಸಿಂಟ್ ಎರಡು ಜಾತಿಗಳಲ್ಲೂ ಬಹುರೂಪಿಗಳಾಗಿರುತ್ತವೆ.

ಬಾರ್ಬರಾ ಮ್ಯಾಕ್‌ಕ್ಲಿಂಟಾಕ್ ಈ ಉಬ್ಬು ಗುರುತನ್ನು 1983ರಲ್ಲಿ ಶರೀರವಿಜ್ಞಾನ ಅಥವಾ ಔಷಧ ವೈದ್ಯಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಯನ್ನು ಗೆದ್ದಾಗ ಅವಳ "ಹಾರುವ ಜೀನ್"ಗಳ ಟ್ರ್ಯಾನ್ಸ್‌ಪಾಸನ್ಅನ್ನು ಸಮರ್ಥಿಸಲು ಬಳಸಿಕೊಂಡಳು. ಮೆಕ್ಕೆ ಜೋಳವು ತಳಿವಿಜ್ಞಾನ ಮತ್ತು ವಿಕಸನದ ಜೀವಶಾಸ್ತ್ರಕ್ಕೆ ಇಂದೂ ಒಂದು ಪ್ರಮುಖ ಮಾದರಿ ಸಸ್ಯವಾಗಿದೆ.[೧೪]

USDA ಅಗ್ರಿಕಲ್ಚರಲ್ ರಿಸರ್ಚ್ ಸರ್ವಿಸ್‍ನಿಂದ ನಡೆಸಲ್ಪಡುತ್ತಿರುವ ಮತ್ತು ಅರ್ಬಾನ-ಚ್ಯಾಂಪೇನ್‌ನ ಯೂನಿವರ್ಸಿಟಿ ಆಫ್ ಇಲಿನಾಯ್‍ನ ಡಿಪಾರ್ಟ್‌ಮೆಂಟ್ ಆಫ್ ಕ್ರಾಪ್ ಸೈನ್ಸಸ್‌ನಲ್ಲಿರುವ ಮೈಜ್ ಜೆನೆಟಿಕ್ಸ್ ಕೊ ಆಪರೇಶನ್ ಸ್ಟಾಕ್ ಸೆಂಟರ್, ಮೆಕ್ಕೆ ಜೋಳ ಪರಿವರ್ತಿತಗಳ ಸಂಗ್ರಹ ಕೇಂದ್ರವಾಗಿದೆ. ಒಟ್ಟು ಸಂಗ್ರಹವು ಹೆಚ್ಚುಕಡಿಮೆ 80,000 ಮಾದರಿಗಳನ್ನು ಹೊಂದಿದೆ. ಈ ಭಾರಿ ಸಂಗ್ರಹವು ನೂರಾರು ಹೆಸರಿಸಿದ ತಳಿಗಳನ್ನು ಮತ್ತು ಇದಕ್ಕೆ ಹೆಚ್ಚುವರಿಯಾಗಿ ತಳಿ ಸಂಯುಕ್ತಗಳನ್ನು ಮತ್ತು ಇತರೆ ಆನುವಂಶಿಕ ರೂಪಾಂತರಗಳನ್ನು ಒಳಗೊಂಡಿದೆ. ಅಲ್ಲಿ ಸುಮಾರು 1000 ವರ್ಣತಂತುವಿನ ವಿಕೃತಿಗಳು (ಉದಾ. ಸ್ಥಾನಾಂತರಣ ಮತ್ತು ಕ್ರಮವ್ಯತ್ಯಯ) ಮತ್ತು ಅಪಸಾಮಾನ್ಯ ಸಂಖ್ಯೆಯ ವರ್ಣತಂತುಗಳ (ಉದಾ. ಟೆಟ್ರಾಪ್ಲಾಯ್ಡ್‌ಗಳು) ಸಂಗ್ರಹವು ಇದೆ. ಮೆಕ್ಕೆ ಜೋಳ ಪರಿವರ್ತಿತ ಸಂಗ್ರಹಗಳ ಬಗ್ಗೆ ವಿವರಿಸುವ ತಳೀಯ ಮಾಹಿತಿ ಮತ್ತು ಮೆಕ್ಕೆ ಜೋಳ ತಳಿಗಳ ಬಗೆಗಿನ ಅಸಂಖ್ಯಾತ ಇತರ ಮಾಹಿತಿಯನ್ನು ಮೈಜ್ ಜೆನೆಟಿಕ್ಸ್ ಆಂಡ್ ಜೀನಾಮಿಕ್ಸ್ ಡೇಟಾಬೇಸ್ ಮೈಜ್GDB ಅಲ್ಲಿ ಪಡೆಯಬಹದು.[೧೫]

2005ರಲ್ಲಿ U.S. ನ್ಯಾಷನಲ್ ಸೈನ್ಸ್ ಫೌಂಡೇಶನ್ (NSF), ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (USDA) ಮತ್ತು ಡಿಪಾರ್ಟ್ಮೆಂಟ್ ಆಫ್ ಎನರ್ಜಿ (DOE), B73 ಮೆಕ್ಕೆ ಜೋಳ ಜೀನೋಮ್ಅನ್ನು ಅನುಕ್ರಮಗೊಳಿಸಲು ಒಕ್ಕೂಟವೊಂದನ್ನು ಸ್ಥಾಪಿಸಿದವು. ಪರಿಣಾಮವಾಗಿ DNA ಅನುಕ್ರಮ ಮಾಹಿತಿಯು ತಕ್ಷಣ ಜೀನೋಮ್-ಅನುಕ್ರಮದ ಒಂದು ಸಾರ್ವಜನಿಕ ಭಂಡಾರ ಜೀನ್‍‌ಬ್ಯಾಂಕ್‌ನಲ್ಲಿ ಸೇರಿಕೊಂಡಿತು. ಅನುಕ್ರಮಗಳು ಮತ್ತು ಜೀನೋಮ್ ವಿವರಣೆಗಳು ಯೋಜನೆಯಿರುವಷ್ಟು ದಿನ ಯೋಜನೆಯ ಅಧಿಕೃತ ಸೈಟ್ MaizeSequence.org. ನಲ್ಲಿ ಲಭ್ಯವಿರುವಂತೆ ಮಾಡಲಾಯಿತು.

ಮೆಕ್ಕೆ ಜೋಳ ಜೀನೋಮ್‌ನ ಆರಂಭಿಕ ಅನುಕ್ರಮಗೊಳಿಸುವಿಕೆಯು 2008ರಲ್ಲಿ ಪೂರ್ಣಗೊಂಡಿತು.[೧೬] 2009ರ ನವೆಂಬರ್ 20ರಲ್ಲಿ ಈ ಒಕ್ಕೂಟವು ಅದರ ಅನುಕ್ರಮಗೊಳಿಸುವ ವಿಶೇಷ ಚಟುವಟಿಕೆಗಳ ಫಲಿತಾಂಶಗಳನ್ನು ಸೈನ್ಸ್ ನಲ್ಲಿ ಪ್ರಕಟಗೊಳಿಸಿತು.[೧೭] 85%ನಷ್ಟು ಟ್ರ್ಯಾನ್ಸ್‌ಪಾಸನ್‌ಗಳಿಂದ ಸಂಯೋಜಿತವಾಗಿರುವ ಜೀನೋಮ್ 32,540 ಜೀನ್‌ಗಳನ್ನು ಹೊಂದಿರುತ್ತದೆ (ಹೋಲಿಕೆಯಿಂದ, ಮಾನವನ ಜೀನೋಮ್ ಸುಮಾರು 2.9 ಶತಕೋಟಿ ಅಂಗಮೂಲಗಳನ್ನು ಮತ್ತು 26,000 ಜೀನ್‌ಗಳನ್ನು ಹೊಂದಿರುತ್ತದೆ).

ಒಂದು ಟ್ರಿಪ್ಸಾಕಮ್ ಹುಲ್ಲು (ದೊಡ್ಡದು) ಮತ್ತು ಒಂದು ಟಿಯೋಸಿಂಟ್ (ಸಣ್ಣದು)

ಮೀಸೊಅಮೆರಿಕದಲ್ಲಿ ಮೆಕ್ಕೆ ಜೋಳದ ನಿರ್ದಿಷ್ಟ ಮೂಲದ ಬಗ್ಗೆ ಅನೇಕ ಊಹೆಗಳಿವೆ:[೧೮]

  1. ಇದು ಮೆಕ್ಸಿಕನ್ ವಾರ್ಷಿಕ ಟಿಯೊಸಿಂಟ್‍ನ, ಜಿಯಾ ಮೇಸ್ ಪ್ರಭೇದ. ಪಾರ್ವಿಗ್ಲುಮಿಸ್ , ನೇರ ಒಗ್ಗಿಸುವಿಕೆಯಾಗಿರಬಹುದು. ಈ ಟಿಯೋಸಿಂಟ್ ಆಗ್ನೇಯ ಮೆಕ್ಸಿಕೊದ ಬಲ್ಸಾಸ್ ನದಿ ಕಣಿವೆಯ ಸ್ಥಳೀಯ ಬೆಳೆಯಾಗಿದೆ ಹಾಗೂ ಇದರ 12%ನಷ್ಟು ಆನುವಂಶಿಕ ಅಂಶವನ್ನು ಜಿಯಾ ಮೇಸ್ ಪ್ರಭೇದ. ಮೆಕ್ಸಿಕಾನ ದಿಂದ ಅಂತಃಪ್ರವೇಶದ ಮೂಲಕ ಪಡೆಯಲಾಗಿದೆ.
  2. ಇದನ್ನು ಸಣ್ಣ ಒಗ್ಗಿಸಿದ ಮೆಕ್ಕೆ ಜೋಳ (ನಿಸರ್ಗ ಸಹಜ ಸ್ಥಿತಿಯ ಮೆಕ್ಕೆ ಜೋಳದಿಂದ ಸ್ವಲ್ಪವಾಗಿ ಬದಲಾಯಿಸಲಾದ) ಮತ್ತು ಲಕ್ಸುರಿಯಾಂಟೆಸ್ ವಿಭಾಗದ ಟಿಯೋಸಿಂಟ್ Z. ಲಕ್ಸುರಿಯಾನ್ಸ್ ಅಥವಾ Z. ಡಿಪ್ಲೊಪೆರೆನ್ನಿಸ್ ಗಳ ಮಧ್ಯೆ ಮಿಶ್ರ ತಳಿ ಇಳಿಸುವುದರಿಂದ (ಸಂಕರೀಕರಣ) ಪಡೆದಿರಬಹುದು.
  3. ಇದು ನಿಸರ್ಗ ಸಹಜ ಸ್ಥಿತಿಯ ಮೆಕ್ಕೆ ಜೋಳದ ಅಥವಾ ಟಿಯೋಸಿಂಟ್‌ನ ಎರಡು ಅಥವಾ ಅದಕ್ಕಿಂತ ಹೆಚ್ಚು ಹೊಂದಿಸುವಿಕೆಗಳಿಗೆ ಒಳಗಾಗಿರಬಹುದು.
  4. ಇದನ್ನು Z. ಡಿಪ್ಲೊಪೆರೆನ್ನಿಸ್ ಅನ್ನು ಟ್ರಿಪ್ಸ್ಯಾಕಮ್ ಡ್ಯಾಕ್ಟಿಲಾಯ್ಡ್ ಗಳೊಂದಿಗೆ ಸಂಕರೀಕರಣ ಮಾಡುವುದರಿಂದ ಪಡೆದಿರಬಹುದು. ("ಟಿಯೋಸಿಂಟ್" ಪದವು ಜೀನಸ್ ಜಿಯಾ ದಲ್ಲಿನ ಜಿಯಾ ಮೇಸ್ ಪ್ರಭೇದ. ಮೇಸ್ ಅನ್ನು ಹೊರತುಪಡಿಸಿ ಉಳಿದ ಎಲ್ಲ ಜಾತಿಗಳನ್ನು ಮತ್ತು ಉಪಜಾತಿಗಳನ್ನು ವಿವರಿಸುತ್ತದೆ.) 1930ರ ಉತ್ತರಾರ್ಧದಲ್ಲಿ ಪಾಲ್ ಮ್ಯಾಂಜೆಲ್ಸ್‌ಡಾರ್ಫ್‌ ಒಗ್ಗಿಸಿದ ಮೆಕ್ಕೆ ಜೋಳವು ತಿಳಿಯದ ನಿಸರ್ಗ ಸಹಜ ಸ್ಥಿತಿಯ ಮೆಕ್ಕೆ ಜೋಳ ಮತ್ತು ಸಂಬಂಧಿತ ಜೀನಸ್ ಟ್ರಿಪ್ಸ್ಯಾಕಮ್ ಜಾತಿಯ ನಡುವಿನ ಸಂಕರೀಕರಣದ ಫಲಿತಾಂಶವಾಗಿದೆ ಎಂದು ಸೂಚಿಸಿದ್ದಾನೆ. ಮ್ಯಾಂಜೆಲ್ಸ್‌ಫಾರ್ಡ್‌ನ ಮಾದರಿಯನ್ನು ಮತ್ತು ಮೇಲೆ ಪಟ್ಟಿಮಾಡಿದುದರಲ್ಲಿ ನಾಲ್ಕನೆಯದನ್ನು ಅಲ್ಲಗಳೆಯುವ ಮೂಲಕ ಆಧುನಿಕ ಜೀನ್ ಪರೀಕ್ಷೆಯು ಮೆಕ್ಕೆ ಜೋಳ ಮೂಲದಲ್ಲಿನ ಟ್ರಿಪ್ಸ್ಯಾಕಮ್‌ನ (ಗಾಮ ಹುಲ್ಲು) ಪಾತ್ರವನ್ನು ನಿರಾಕರಿಸಿದೆ.
ಗ್ಯುಯಿಲ ನ್ಯಾಕ್ವಿಟ್ಜ್ ಕೇವ್ - ಮೆಕ್ಕೆ ಜೋಳದ ಅವಶೇಷಗಳ ಅತ್ಯಂತ ಹಳೆಯ ಸ್ಥಳ

ಮೊದಲ ಮಾದರಿಯನ್ನು ನೋಬೆಲ್ ಪ್ರಶಸ್ತಿ ವಿಜೇತ ಜಾರ್ಜ್ ಬೀಡಲ್ 1939ರಲ್ಲಿ ಪ್ರಸ್ತಾಪಿಸಿದ್ದಾನೆ. ಇದು ಪ್ರಾಯೋಗಿಕ ಬೆಂಬಲವನ್ನು ಹೊಂದಿದ್ದರೂ, ಅನೇಕ ಸಮಸ್ಯೆಗಳನ್ನು ವಿವರಿಸಲಿಲ್ಲ, ಅವುಗಳಲ್ಲಿ ಕೆಲವು:

  1. ಜಿಯಾ ವಿಭಾಗದ ಜಾತಿಯ ಭಾರಿ ವೈವಿಧ್ಯತೆಯು ಹೇಗೆ ಹುಟ್ಟಿಕೊಂಡಿದೆ,
  2. ಕ್ರಿ.ಪೂ. 3500–2700ರ ಸಣ್ಣ ಪುರಾತತ್ವಶಾಸ್ತ್ರದ ಜೀವಿಗಳನ್ನು ಟಿಯೋಸಿಂಟ್‌ನಿಂದ ಹೇಗೆ ಪಡೆಯಲಾಗಿದೆ, ಮತ್ತು
  3. ಹೊಂದಿಸುವಿಕೆಯು ಹೇಗೆ ಟಿಯೋಸಿಂಟ್ ಅಥವಾ ಮೆಕ್ಕೆ ಜೋಳಗಳ ಅವಶೇಷಗಳನ್ನು ಉಳಿಸದೆ ಟಿಯೋಸಿಂಟಾಯ್ಡ್ ವಿಶೇಷ ಲಕ್ಷಣಗಳೊಂದಿಗೆ ಕ್ರಿ.ಪೂ. 1100ರವರೆಗೆ ನಡೆದಿರಬಹುದು.

ಮೆಕ್ಕೆ ಜೋಳದ ಒಗ್ಗಿಸುವಿಕೆಯು ಸಂಶೋಧಕರು, ಪುರಾತತ್ವಶಾಸ್ತ್ರಜ್ಞರು, ತಳಿವಿಜ್ಞಾನಿಗಳು, ಸಸ್ಯವಿಜ್ಞಾನಿಗಳು, ಭೂಗೋಳಶಾಸ್ತ್ರಜ್ಞರು ಮೊದಲಾದವರ ಆಸಕ್ತಿಯ ವಿಷಯವಾಗಿದೆ. ಈ ಕ್ರಿಯೆಯು 7,500ರಿಂದ 12,000ರಷ್ಟು ವರ್ಷಗಳ ಹಿಂದೆಯೇ ಆರಂಭವಾಗಿದೆ ಎಂದು ಕೆಲವರು ಹೇಳುತ್ತಾರೆ. 1950ರಿಂದ 1970ರವರೆಗಿನ ಸಂಶೋಧನೆಗಳು ಮೂಲತಃ ಓಕ್ಸಾಕ ಮತ್ತು ಜ್ಯಾಲಿಸ್ಕೊ ಮಧ್ಯದ ಪ್ರಸ್ಥಭೂಮಿಯಲ್ಲಿ ಕಂಡುಬಂದ ಮೆಕ್ಕೆ ಜೋಳದ ಒಗ್ಗಿಸುವಿಕೆಯ ವಿಷಯದ ಮೇಲೆ ಕೇಂದ್ರೀಕರಿಸಿದೆ, ಏಕೆಂದರೆ ಮೆಕ್ಕೆ ಜೋಳದ ಅತ್ಯಂತ ಪುರಾತನ ಉದಾಹರಣೆಗಳು ಅಲ್ಲಿ ಕಂಡುಬಂದಿರುವುದು. 2009ರಲ್ಲಿ ಪ್ರಕಟವಾದ ಪುರಾತತ್ವಶಾಸ್ತ್ರದ ಮತ್ತು ಸಸ್ಯಶಾಸ್ತ್ರದ ಅಧ್ಯಯನಗಳು ಕನಿಷ್ಠ 8,700 ವರ್ಷಗಳ ಹಿಂದಿನ ಬಲ್ಸಾಸ್ ನದಿ ಕಣಿವೆಯ ತಗ್ಗು ಪ್ರದೇಶವನ್ನು ಸೂಚಿಸುತ್ತವೆ.[೧೯] ಕ್ರಾಪ್ ವೈಲ್ಡ್ ರಿಲೇಟಿವ್ ಟಿಯೋಸಿಂಟ್, ಬಲ್ಸಾಸ್ ನದಿ ಪ್ರದೇಶದಲ್ಲಿ ಬೆಳೆಯುವ ಆಧುನಿಕ ಮೆಕ್ಕೆ ಜೋಳವನ್ನು ಹೋಲುತ್ತದೆ. ಲ್ಯಾಟಿನ್ ಅಮೆರಿಕಾದ ಆರಂಭಿಕ ಪರಾಗ ಅವಶೇಷಗಳು ದಕ್ಷಿಣ ಮೆಕ್ಸಿಕೊ ಮತ್ತು ಮೇಲಿನ ಕೇಂದ್ರ ಅಮೆರಿಕಾದ ಉಷ್ಣವಲಯದಿಂದ ಹಿಡಿದು ಲ್ಯಾಗುನ ಮಾರ್ಟಿನೆಜ್‌ವರೆಗಿನ ಕೊಳಗಳ ಕೆಸರಿನಲ್ಲಿ ಕಂಡುಬಂದಿವೆ ಹಾಗೂ ಇದು ರೇಡಿಯೊಕಾರ್ಬನ್ ಕಾಲಗಣನೆಯ ಸುಮಾರು 4,700 ವರ್ಷಗಳಷ್ಟು ಹಿಂದಿನದಾಗಿವೆ. ಆರಂಭಿಕ ಮೆಕ್ಕೆ ಜೋಳ ಕದಿರುಗಳ ಪುರಾತತ್ವಶಾಸ್ತ್ರದ ಅವಶೇಷಗಳು ಓಕ್ಸಾಕ ಕಣಿವೆಯ ಗ್ಯುಲ ನ್ಯಾಕ್ವಿಟ್ಜ್ ಕೇವ್‌‌ನಲ್ಲಿ ಕಂಡುಬಂದಿವೆ. ಇವು ಸುಮಾರು 6,250 ವರ್ಷಗಳಷ್ಟು ಹಿಂದಿನ ದಿನಾಂಕವನ್ನು ತೋರಿಸುತ್ತವೆ; ಪ್ಯುಯೆಬ್ಲಾದ ಟೆಹ್ವಕ್ಯಾನ್ ಹತ್ತಿರದ ಗುಹೆಗಳಲ್ಲಿ ಕಂಡುಬಂದ ಅತ್ಯಂತ ಪುರಾತನ ಕದಿರುಗಳು ಕ್ರಿ.ಪೂ. 2750ರಷ್ಟು ಹಿಂದಿನದಾಗಿವೆ. ಕ್ರಿ.ಪೂ. 1100ರವರೆಗೆ ಕದಿರಿನ ರಚನೆಯಲ್ಲಿ ಯಾವುದೇ ಬದಲಾವಣೆಗಳೇ ಕಂಡುಬಂದಿಲ್ಲ. ಇದರ ನಂತರ ಮೆಕ್ಸಿಕನ್ ಗುಹೆಗಳ ಕದಿರುಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿವೆ: ಮೆಕ್ಕೆ ಜೋಳದ ವೈವಿಧ್ಯತೆಯು ಶೀಘ್ರವಾಗಿ ಹೆಚ್ಚಾಯಿತು ಮತ್ತು ಪುರಾತತ್ವಶಾಸ್ತ್ರದ ಟಿಯೋಸಿಂಟ್ ಮೊದಲು ಸಂಗ್ರಹವಾಯಿತು.

ಲೈಚ್ಟೆಂಸ್ಟೈನ್‍‌ನ ಮೆಕ್ಕೆ ಜೋಳದ ಪ್ರದೇಶ

ಬಹುಶಃ ಕ್ರಿ.ಪೂ 1500ರಲ್ಲಿ ಮೆಕ್ಕೆ ಜೋಳವು ವ್ಯಾಪಕವಾಗಿ ಮತ್ತು ಶೀಘ್ರವಾಗಿ ಹರಡಲು ಆರಂಭವಾಯಿತು. ಇದನ್ನು ಹೊಸ ಕೃಷಿಯಲ್ಲಿ ಬಳಕೆಗೆ ತಂದುದರಿಂದ, ಹೊಸ ಉಪಯೋಗಗಳು ಅಭಿವೃದ್ಧಿಗೊಂಡವು ಮತ್ತು ಅವುಗಳ ತಯಾರಿಗಾಗಿ ಸಿದ್ಧತೆಯನ್ನು ಒದಗಿಸಲು ಹೊಸ ಪ್ರಭೇದಗಳನ್ನು ಆರಿಸಲಾಯಿತು. ಮೆಕ್ಕೆ ಜೋಳವು ಹೆಚ್ಚಿನ ಹಿಂದಿನ-ಕೊಲಂಬಿಯದ ಉತ್ತರ ಅಮೆರಿಕ, ಮೀಸೊಅಮೆರಿಕ, ದಕ್ಷಿಣ ಅಮೆರಿಕ ಮತ್ತು ಕ್ಯಾರಿಬಿಯನ್‍ನ ಬಳಕೆಯ ಪ್ರಮುಖ ಆಹಾರವಾಗಿತ್ತು. ಮೀಸೊಅಮೆರಿಕಾದ ನಾಗರಿಕತೆಯು ಮೆಕ್ಕೆ ಜೋಳದ ಜಮೀನಿನ ಬೆಳೆಯಿಂದ ಹೆಚ್ಚು ಪ್ರಬಲಗೊಂಡಿತು; ಅದನ್ನು ಬೆಳೆಸುವ ಮೂಲಕ, ಅದರ ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯವು ಹೆಚ್ಚಿತು ಹಾಗೂ ಅದು ಅವರ ಆಹಾರದ ಮೇಲೆ ಪರಿಣಾಮ ಬೀರಿತು. ಮೆಕ್ಕೆ ಜೋಳವು ಮೀಸೊಅಮೆರಿಕಾದ ಜನರ ಗುರುತನ್ನು ರೂಪಿಸಿತು. ಕ್ರಿ.ಶ. 1ನೇ ಸಹಸ್ರವರ್ಷದಲ್ಲಿ ಮೆಕ್ಕೆ ಜೋಳ ಕೃಷಿಯು ಮೆಕ್ಸಿಕೊದಿಂದ ಯು.ಎಸ್. ನೈಋತ್ಯ ಭಾಗದವರೆಗೆ ಹಾಗೂ ಒಂದು ಸಹಸ್ರವರ್ಷದ ನಂತರ ಯು.ಎಸ್. ಈಶಾನ್ಯ ಭಾಗಕ್ಕೆ ಮತ್ತು ಆಗ್ನೇಯ ಕೆನಡಾದವರೆಗೆ ಹರಡಿತು. ಸ್ಥಳೀಯ ಅಮೇರಿಕನ್ನರು ಹೊಸ ಬೆಳೆಗಾಗಿ ದೊಡ್ಡ ಕಾಡು ಮತ್ತು ಹುಲ್ಲುಗಾವಲು ಪ್ರದೇಶಗಳನ್ನು ತೆರವುಗೊಳಿಸಿದರಿಂದ ಭೂದೃಶ್ಯವು ರೂಪಾಂತರಗೊಂಡಿತು.

ಅದರ ಒಗ್ಗಿಸುವಿಕೆಯನ್ನು ಯಾವುದು ತ್ವರಿತಗೊಳಿಸಿತು ಎಂಬುದು ಅಸ್ಪಷ್ಟವಾಗಿದೆ ಏಕೆಂದರೆ ನಿಸರ್ಗ ಸಹಜ ಸ್ಥಿತಿಯ ಮೆಕ್ಕೆ ಜೋಳದ ತಿನ್ನಲು ಯೋಗ್ಯವಾದ ಭಾಗವು ತುಂಬಾ ಸಣ್ಣದಾಗಿದೆ ಮತ್ತು ಪ್ರತಿಯೊಂದು ಕಾಳು ತುಂಬಾ ಗಟ್ಟಿಯಾದ ಎರಡು-ಪದರದ ಒಂದು ರಚನೆಯಿಂದ ಆವರಿಸಲ್ಪಟ್ಟಿದರಿಂದ ನೇರವಾಗಿ ತಿನ್ನಲು ಕಷ್ಟಕರವಾಗಿದೆ. ಟಿಯೋಸಿಂಟ್‌ನ ಕಾಳುಗಳನ್ನು ಆಧುನಿಕ ಪಾಪ್‌ಕಾರ್ನ್‌ನಂತೆ ಮಾನವನ ಬಳಕೆಗಾಗಿ ಹುರಿದು "ಅರುಳು ಮಾಡಲಾಗುತ್ತದೆ" ಎಂದು ಜಾರ್ಜ್ ಬೀಡಲ್ ಸಮರ್ಥಿಸಿದನು. ಪರಿಣಾಮಕಾರಿ ಕೃಷಿಗಾಗಿ ಹೆಚ್ಚು ಒತ್ತಾಗಿರುವ ದೊಡ್ಡ ಕದಿರುಗಳನ್ನು ಉತ್ಪತ್ತಿ ಮಾಡಲು ಆಯ್ದ ತಳಿ-ಸಂವರ್ಧನೆಯ ಅನೇಕ ಪೀಳಿಗೆಗಳನ್ನು ತೆಗೆದುಕೊಂಡಿರಬಹುದು ಎಂದು ಕೆಲವರು ಹೇಳುತ್ತಾರೆ. ಟಿಯೋಸಿಂಟ್ ಮತ್ತು ಆಧುನಿಕ ಮೆಕ್ಕೆ ಜೋಳದ ಪರಸ್ಪರ ತಳಿ ಮಾಡುವಿಕೆಯಿಂದ ಮಾಡಿದ ಮಿಶ್ರ ತಳಿಗಳ ಅಧ್ಯಯನಗಳು ಈ ಹೇಳಿಕೆಗಳು ಸರಿಯಾದುದಲ್ಲ ಎಂದು ಸೂಚಿಸಿವೆ.

2005ರಲ್ಲಿ USDA ಫೋರೆಸ್ಟ್ ಸರ್ವಿಸ್‍ನ ಸಂಶೋಧನೆಯು, 500 ರಿಂದ 1,000 ವರ್ಷಗಳ ಹಿಂದೆ ಬೆಳವಣಿಗೆಯಾದ ಮೆಕ್ಕೆ ಜೋಳದ ಕೃಷಿಯನ್ನು ಇಂದು ಪೂರ್ವ ಅಮೆರಿಕ ಸಂಯುಕ್ತ ಸಂಸ್ಥಾನವು ಪರಿಸರದ ಬದಲಾವಣೆಗಳಿಗೆ ತುಂಬಾ ಸೂಕ್ಷ್ಮಗ್ರಾಹಿಯಾಗಿರುವ ಸಿಹಿನೀರಿನ ಚಿಪ್ಪು ಜೀವಿಗಳನ್ನು ಕ್ಷೀಣಿಸಲು ಬಳಸಿಕೊಂಡಿದೆ ಎಂದು ಸೂಚಿಸಿದೆ.[೨೦]

ಉತ್ಪಾದನಾ ಪ್ರಮಾಣಗಳು ಮತ್ತು ವಿಧಾನಗಳು

[ಬದಲಾಯಿಸಿ]
2005ರ ಮೆಕ್ಕೆ ಜೋಳದ ಉತ್ಪತ್ತಿ
2009ರ ಅವಧಿಯಲ್ಲಿ ಐಯೋವದ ಜೋನ್ಸ್ ಕೌಂಟಿಯಲ್ಲಿ ಕಟಾವು ಮಾಡಲಾದ ಮೆಕ್ಕೆ ಜೋಳ

ಮೆಕ್ಕೆ ಜೋಳವನ್ನು ಪ್ರಪಂಚದಾದ್ಯಂತ ವ್ಯಾಪಕವಾಗಿ ಬೆಳೆಸಲಾಗುತ್ತಿದೆ ಹಾಗೂ ಪ್ರತಿ ವರ್ಷವೂ ಇತರ ಧಾನ್ಯಕ್ಕಿಂತ ಹೆಚ್ಚು ಭಾರದ ಮೆಕ್ಕೆ ಜೋಳವನ್ನು ಉತ್ಪತ್ತಿ ಮಾಡಲಾಗುತ್ತಿದೆ. ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದ ಒಟ್ಟು ಬೆಳೆಯ ಸುಮಾರು ಅರ್ಧದಷ್ಟನ್ನು (~42.5%) ಉತ್ಪಾದಿಸುತ್ತದೆ; ಇತರ ಹೆಚ್ಚು ಉತ್ಪತ್ತಿ ಮಾಡುವ ರಾಷ್ಟ್ರಗಳೆಂದರೆ - ಚೀನಾ, ಬ್ರೆಜಿಲ್, ಮೆಕ್ಸಿಕೊ, ಅರ್ಜೆಂಟೈನಾ, ಭಾರತ ಮತ್ತು ಫ್ರಾನ್ಸ್. 2007ರಲ್ಲಿ ಇದರ ಪ್ರಪಂಚದಾದ್ಯಂತದ ಒಟ್ಟು ಉತ್ಪಾದನೆಯು ಸುಮಾರು 800 ದಶಲಕ್ಷ ಟನ್‍ಗಳಷ್ಟಿತ್ತು. ಇದು ಭತ್ತ (~650 ದಶಲಕ್ಷ ಟನ್‍ಗಳು) ಅಥವಾ ಗೋಧಿಗಿಂತ (~600 ದಶಲಕ್ಷಟನ್‍ಗಳು) ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ. 2007ರಲ್ಲಿ ಪ್ರಪಂಚದಾದ್ಯಂತ ಸುಮಾರು 150 ದಶಲಕ್ಷ ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಮೆಕ್ಕೆ ಜೋಳವನ್ನು ನಾಟಿ ಮಾಡಲಾಯಿತು, ಇದು 4970.9 ಕಿಲೋಗ್ರಾಂ/ಹೆಕ್ಟೇರು ಫಸಲನ್ನು ನೀಡಿತು. ಉತ್ಪಾದನೆಯು ಪ್ರಪಂಚದ ಕೆಲವು ಪ್ರದೇಶಗಳಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದೆ; ಐಯೋವದ 2009ರ ಉತ್ಪಾದನೆಯ ಮುಂದಾಲೋಚನೆಯು 11614 kg/ha ಆಗಿತ್ತು.[೨೧] ಕಳೆದ ಕೆಲವು ದಶಕಗಳಿಂದ "ಮೆಕ್ಕೆ ಜೋಳ ಬೆಳೆಯ ಸಂಭಾವ್ಯತೆಯು ಹೆಚ್ಚಾಗಿದೆ ಎಂಬುದನ್ನು ಬೆಂಬಲಿಸುವ ಸಾಕ್ಷ್ಯಾಧಾರವು ಅಸಮಂಜಸವಾಗಿದೆ".[೨೨]

2007ರ ಪ್ರಮುಖ ಹತ್ತು ಮೆಕ್ಕೆ ಜೋಳ ಉತ್ಪಾದಕರು
ರಾಷ್ಟ್ರ ಉತ್ಪಾದನೆ (ಟನ್ಗಳು) ಟಿಪ್ಪಣಿಗಳು
 ಅಮೇರಿಕ ಸಂಯುಕ್ತ ಸಂಸ್ಥಾನ 332,092,180
 ಚೀನಾ 151,970,000
 Brazil 51,589,721
 ಮೆಕ್ಸಿಕೋ 22,500,000 [F]
 ಅರ್ಜೆಂಟೀನ 21,755,364
 ಭಾರತ 16,780,000
 France 13,107,000
ಇಂಡೋನೇಷ್ಯಾಇಂಡೋನೇಷ್ಯಾ 12,381,561
 ಕೆನಡಾ 10,554,500
 ಇಟಲಿ 9,891,362
[49]ಪ್ರಪಂಚ 784,786,580 [A]
ಚಿಹ್ನೆ ಇಲ್ಲದಿರುವುದು = ಅಧಿಕೃತ ಚಿತ್ರಣ, P = ಅಧಿಕೃತ ಚಿತ್ರಣ, F = FAO ಅಂದಾಜು, * = ಅನಧಿಕೃತ/ಭಾಗಶಃ-ಅಧಿಕೃತ/ಪ್ರತಿಬಿಂಬಿತ ದತ್ತಾಂಶ, C = ಎಣಿಕೆಯ ಚಿತ್ರಣ A = ಒಟ್ಟು (ಇದರಲ್ಲಿ ಅಧಿಕೃತ, ಭಾಗಶಃ-ಅಧಿಕೃತ ಅಥವಾ ಅಂದಾಜಿನ ಚಿತ್ರಣಗಳು ಸೇರಿರಬಹುದು);
ಮೂಲಾಧಾರ: ಫುಡ್ ಆಂಡ್ ಅಗ್ರಿಕಲ್ಚರಲ್ ಆರ್ಗನೈಜೇಶನ್ ಆಫ್ ಯುನೈಟೆಡ್ ನೇಷನ್ಸ್: ಇಕನಾಮಿಕ್ ಆಂಡ್ ಸೋಷಿಯಲ್ ಡಿಪಾರ್ಟ್ಮೆಂಟ್: ದ ಸ್ಟ್ಯಾಟಿಸ್ಟಿಕಲ್ ಡಿವಿಷನ್

ಭಾರತದಲ್ಲಿ

[ಬದಲಾಯಿಸಿ]

ಭಾರತದ ಸುಮಾರು 6 ಮಿಲಿಯನ್ ಹೆಕ್ಟೇರಿಗೂ ಹೆಚ್ಚು ಪ್ರದೇಶದಲ್ಲಿ ಮುಸುಕಿನ ಜೋಳದ ಬೆಳೆಯಿದ್ದು, ಈ ಧಾನ್ಯ ಅಕ್ಕಿ, ಬತ್ತ, ಜೋಳ ಮತ್ತು ಸೆಜ್ಜೆಗಳ ಅನಂತರದ ಸ್ಥಾನವನ್ನು ಪಡೆದಿದೆ. ಇದರ ಬೇಸಾಯಕ್ಕೆ ಪ್ರಸಿದ್ಧವಾದ ರಾಜ್ಯಗಳೆಂದರೆ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಗುಜರಾತ್, ಕರ್ನಾಟಕ, ಆಂಧ್ರಪ್ರದೇಶ, ಹಿಮಾಚಲಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರ. ಇತ್ತೀಚಿನ ವರ್ಷಗಳಲ್ಲಿ ಇದರ ಬೇಸಾಯ ಗಣನೀಯವಾಗಿ ಏರುತ್ತಿದೆ.

ಎಳೆಯ ಕಾಂಡಗಳು

ಶೀತವನ್ನು ಸಹಿಸಿಕೊಳ್ಳದ ಕಾರಣ ಮೆಕ್ಕೆ ಜೋಳವನ್ನು ಸಮಶೀತೋಷ್ಣವಲಯದಲ್ಲಿ ವಸಂತಕಾಲದಲ್ಲಿ ನಾಟಿ ಮಾಡಲಾಗುತ್ತದೆ. ಅದರ ಬೇರು ವ್ಯವಸ್ಥೆಯು ಸಾಮಾನ್ಯವಾಗಿ ಹೆಚ್ಚು ಆಳಕ್ಕೆ ಹೋಗುವುದಿಲ್ಲ. ಆದ್ದರಿಂದ ಸಸ್ಯವು ಮಣ್ಣಿನ ತೇವಾಂಶವನ್ನು ಅವಲಂಬಿಸಿರುತ್ತದೆ. C4 ಸಸ್ಯವಾಗಿ (C4 ಇಂಗಾಲ ಸ್ಥಿರೀಕರಣವನ್ನು ಬಳಸುವ ಸಸ್ಯ) ಮೆಕ್ಕೆ ಜೋಳವು ಸಣ್ಣ ಧಾನ್ಯ, ಆಲ್ಫಾಲ್ಫ(ಕುದುರೆ ಮೇವಿನ ಸೊಪ್ಪು) ಮತ್ತು ಸೋಯಬೀನ್‍ಗಳಂತಹ C3 ಸಸ್ಯಗಳಿಗಿಂತ (C3 ಇಂಗಾಲ ಸ್ಥಿರೀಕರಣವನ್ನು ಬಳಸುವ ಸಸ್ಯ) ಹೆಚ್ಚು ನೀರು-ಅವಶ್ಯಕವಾಗಿರುವ ಬೆಳೆಯಾಗಿದೆ. ಹೂವುಗಳು ಪರಾಗಸ್ಪರ್ಶಕ್ಕೆ ತಯಾರಾಗಿರುವಾಗ ಶಲಾಕಾಗುಚ್ಛಗಳ ಬೆಳವಣಿಗೆಯ ಸಂದರ್ಭದಲ್ಲಿ ಮೆಕ್ಕೆ ಜೋಳವು ನಿರಾರ್ದ್ರತೆಗೆ ಹೆಚ್ಚು ಸೂಕ್ಷ್ಮಗ್ರಾಹಿಯಾಗಿರುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಮೆಕ್ಕೆ ಜೋಳವು "ಜುಲೈ ನಾಲ್ಕರೊಳಗೆ ಮೊಣಕಾಲಿನಷ್ಟು ಉದ್ದಕ್ಕೆ ಬೆಳೆದರೆ" ಅದು ಉತ್ತಮವಾದ ಬೆಳೆಯೆಂದು ಸಾಂಪ್ರದಾಯಿಕವಾಗಿ ಹೇಳಲಾಗುತ್ತದೆ. ಆದರೆ ಆಧುನಿಕ ಮಿಶ್ರ ತಳಿಗಳು ಸಾಮಾನ್ಯವಾಗಿ ಈ ದರವನ್ನು ಮೀರುತ್ತವೆ. ಮೇವಿಗಾಗಿ ಬಳಸುವ ಮೆಕ್ಕೆ ಜೋಳವನ್ನು ಸಸ್ಯವು ಹಸಿರಾಗಿರುವಾಗಲೇ ಮತ್ತು ಕಾಳುಗಳು ಬಲಿಯುವುದಕ್ಕಿಂತ ಮೊದಲೇ ಕಟಾವು ಮಾಡಲಾಗುತ್ತದೆ. ಸ್ವೀಟ್ ಕಾರ್ನ್ಅನ್ನು ಕಾಳಿನಲ್ಲಿ "ಹಾಲು ತುಂಬಿಕೊಂಡಿರುವ ಹಂತ"ದಲ್ಲಿ, ಪರಾಗಸ್ಪರ್ಶದ ನಂತರ ಆದರೆ ಪಿಷ್ಟ ರಚನೆಯಾಗುವುದಕ್ಕಿಂತ ಮೊದಲು, ಬೇಸಿಗೆಯ ಉತ್ತರಾರ್ಧದ ಮತ್ತು ಆರಂಭಿಕ ಮಧ್ಯ-ಶರತ್ಕಾಲದ ನಡುವೆ ಕಟಾವು ಮಾಡಲಾಗುತ್ತದೆ. ಜಮೀನಿನ ಮೆಕ್ಕೆ ಜೋಳವನ್ನು ಕಾಳು ಚೆನ್ನಾಗಿ ಒಣಗುವುದಕ್ಕಾಗಿ ಶರತ್ಕಾಲದಲ್ಲಿ ತುಂಬಾ ದಿನಗಳವರೆಗೆ ಜಮೀನಿನಲ್ಲೇ ಬಿಡಲಾಗುತ್ತದೆ ಮತ್ತು ಕೆಲವೊಮ್ಮೆ ಚಳಿಗಾಲ ಅಥವಾ ಆರಂಭಿಕ ವಸಂತಕಾಲದವರೆಗೂ ಕಟಾವು ಮಾಡದೆ ಹಾಗೆಯೇ ಬಿಡಲಾಗುತ್ತದೆ. ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಬೇಕಾದ ಅವಶ್ಯಕತೆಯು ಆಫ್ರಿಕಾದ ಅನೇಕ ಭಾಗಗಳಲ್ಲಿ ಕಂಡುಬಂದಿದೆ. ಅಲ್ಲಿ ಮರುಕಳಿಸುವ ಶುಷ್ಕತೆಯು ನೀರಿನ ಬರವನ್ನು ಉಂಟುಮಾಡಿ, ಮೆಕ್ಕೆ ಜೋಳದ ಬೆಳೆಯನ್ನು ವಿಫಲಗೊಳಿಸುತ್ತಿದೆ.

ಹಗಲಿನ ಉಷ್ಣತೆ 190-920C ಇರುವಂಥ ಪ್ರದೆಶಗಳಲ್ಲಿ ಇದನ್ನು ಕೃಷಿಮಾಡಬಹುದು. ಅತಿಹೆಚ್ಚು ಉಷ್ಣತೆಯಾಗಲೀ ಕಡು ಚಳಿಯಾಗಲೀ ಇದರ ಬೆಳೆವಣಿಗೆಗೆ ಹಾನಿಕರ. ಅಂತೆಯೇ 25 ಸೆಂಮಿ.ಗೂ ಕಡಿಮೆ ಮಳೆ ಬೀಳುವ ಪ್ರದೇಶಗಳಿಂದ ಹಿಡಿದು 500 ಸೆಂಮೀಗೂ ಹೆಚ್ಚು ಮಳೆಯ ಪ್ರದೇಶಗಳಲ್ಲಿ ಇದನ್ನು ಬೆಳೆಯುವುದಿದೆ. ಭಾರತದಲ್ಲಿ ಇದನ್ನು ಮುಂಗಾರು ಬೆಳೆಯಾಗಿ ಜೂನ್-ಜುಲೈನಲ್ಲಿ ಬಿತ್ತಿ ಸೆಪ್ಟೆಂಬರ್-ನವಂಬರ್ ತಿಂಗಳಲ್ಲಿ ಕುಯ್ಲು ಮಾಡಲಾಗುತ್ತದೆ.

ಮೆಕ್ಕೆ ಜೋಳವನ್ನು ಸ್ಥಳೀಯ ಅಮೇರಿಕನ್ನರು ದಿಬ್ಬಗಳಲ್ಲಿ ಥ್ರೀ ಸಿಸ್ಟರ್ಸ್ ಎಂಬ ಸಂಕೀರ್ಣ ವ್ಯವಸ್ಥೆಯಲ್ಲಿ ನಾಟಿ ಮಾಡಿದರು. ಮೆಕ್ಕೆ ಜೋಳವು ಬೀನ್‌ಗಳಿಗೆ ಆಧಾರವನ್ನು ಒದಗಿಸಿತು ಹಾಗೂ ಬೀನ್‌ಗಳ ಮತ್ತು ಇತರ ದ್ವಿದಳ ಧಾನ್ಯ ಸಸ್ಯಗಳ ಬೇರುಗಳಲ್ಲಿ ವಾಸಿಸುವ ಸಾರಜನಕ-ಸ್ಥಿರೀಕರಿಸುವ ಬ್ಯಾಕ್ಟೀರಿಯಾದಿಂದ ಪಡೆದ ಸಾರಜನಕವನ್ನು ಬೀನ್‌ಗಳು ಒದಗಿಸಿದವು; ಜಜ್ಜಿ ಹಾಕಿದವುಗಳು ಕಳೆಗಳು ಬರದಂತೆ ನೆಲಕ್ಕೆ ಹೊದಿಕೆಯನ್ನು ಒದಗಿಸಿದವು ಮತ್ತು ಮಣ್ಣಿನ ಮೇಲೆ ತೆರೆಯಾಗಿ ಬಾಷ್ಪೀಕರಣವಾಗದ ಹಾಗೆ ತಡೆಗಟ್ಟಿದವು. ಈ ವಿಧಾನದ ಸ್ಥಾನವನ್ನು ಏಕ ಜಾತಿಯ ದಿಬ್ಬ-ಸಸ್ಯಗಾರಿಕೆಯು ಆಕ್ರಮಿಸಿಕೊಂಡಿತು. ಅದರಲ್ಲಿ 60–120 cm (2.0–3.9 ft) ಅಂತರವಿರುವ ಪ್ರತಿಯೊಂದು ದಿಬ್ಬದಲ್ಲಿ 3 ಅಥವಾ 4 ಬೀಜಗಳನ್ನು ಬಿತ್ತಲಾಗುತ್ತಿತ್ತು. ಈ ವಿಧಾನವನ್ನು ಇಂದೂ ಮನೆಯ-ತೋಟಗಾರರು ಬಳಸುತ್ತಿದ್ದಾರೆ. ನಂತರದ ವಿಧಾನವೆಂದರೆ ಚೆಕ್ಡ್ ಮೆಕ್ಕೆ ಜೋಳ. ಅದರಲ್ಲಿ ದಿಬ್ಬಗಳು ಪ್ರತಿ ದಿಕ್ಕುಗಳಲ್ಲಿ 40 ಇಂಚುಗಳಷ್ಟು ಅಂತರವನ್ನು ಹೊಂದಿದ್ದು, ಕೃಷಿಕರಿಗೆ ಎರಡು ದಿಕ್ಕುಗಳಲ್ಲಿ ಜಮೀನಿನ ಮೂಲಕ ಸಾಗುವಂತೆ ಅನುವು ಮಾಡಿಕೊಡುತ್ತವೆ. ಹೆಚ್ಚು ಶುಷ್ಕ ಜಮೀನಿನಲ್ಲಿ ಇದು ಬದಲಾಗುತ್ತದೆ. ನೀರನ್ನು ಶೇಖರಿಸಿಟ್ಟುಕೊಳ್ಳುವುದಕ್ಕಾಗಿ ಬೀಜಗಳನ್ನು 10–12 cm (3.9–4.7 in) ಆಳದ ನೇಗಿಲು ಸಾಲುಗಳಲ್ಲಿ ಹಾಕಲಾಗುತ್ತದೆ. ಆಧುನಿಕ ವಿಧಾನದಲ್ಲಿ ಮೆಕ್ಕೆ ಜೋಳವನ್ನು ಸಾಲುಗಳಲ್ಲಿ ನೆಡಲಾಗುತ್ತದೆ. ಇದು ಸಸ್ಯವು ಎಳತಾಗಿರುವಾಗಲೇ ಕಟಾವು ಮಾಡಲು ಅನುವು ಮಾಡಿಕೊಡುತ್ತದೆ. ಆದರೂ ಕೆಲವು ಸ್ಥಳೀಯ ಅಮೆರಿಕ ಮೀಸಲು ಪ್ರದೇಶಗಳಲ್ಲಿ ದಿಬ್ಬಗಳ-ವಿಧಾನವು ಇನ್ನೂ ಬಳಕೆಯಲ್ಲಿದೆ.

ಭಾರತದಲ್ಲಿ ಬಿತ್ತನೆ: ಮುಸುಕಿನ ಜೋಳಕ್ಕೆ ಆಳವಾದ, ನೀರು ಸುಲಭವಾಗಿ ಬಸಿದು ಹೋಗುವಂಥ ಗೋಡುಮಣ್ಣು ಒಳ್ಳೆಯದು. ಇದನ್ನು ಮಳೆ ಆಸರೆಯ ಬೆಳೆಯಾಗಿಯೊ ಇಲ್ಲವೆ ನೀರಾವರಿ ಮೂಲಕವೊ ಬೆಳೆಸುವುದಿದೆ. ಹೊಲದಲ್ಲಿ ನೇರವಾಗಿ ಕೂರಿಗೆಯಿಂದ ಬೀಜ ಬಿತ್ತಿ ಬೆಳೆಸಲಾಗುತ್ತದೆ. ಸಾಲಿನಿಂದ ಸಾಲಿಗೆ 45-75 ಸೆಂಮೀ, ಬೀಜದಿಂದ ಬೀಜಕ್ಕೆ 20-25 ಸೆಂಮೀ ಅಂತರವಿರುವಂತೆ ಬಿತ್ತುವುದೇ ಕ್ರಮ. ಬಿತ್ತಿದ 3-6 ದಿನಗಳಲ್ಲಿ ಬೀಜಗಳೂ ಮೊಳೆತು ಅನಂತರದ 2-3 ದಿನಗಳಲ್ಲಿ ನೆಲದಿಂದ ಮೇಲಕ್ಕೆ ಹಾಯುತ್ತವೆ. ಸಸಿಗಳ ಬೆಳೆವಣಿಗೆಗೆ ಯಥೇಚ್ಛ ನೀರು ಆವಶ್ಯಕ, ಆದರೆ ನೀರು ಹೆಚ್ಚು ಕಾಲ ನಿಲ್ಲಬಾರದು.

ಮುಸುಕಿನ ಜೋಳಕ್ಕೆ ಕೊಟ್ಟಿಗೆ ಗೊಬ್ಬರ ಹಾಗೂ ಕ್ಯಾಲ್ಸಿಯಮ್ ಅಮೋನಿಯಮ್ ನೈಟ್ರೇಟ್, ಸೂಪರ್ ಫಾಸ್ಫೇಟ್, ಮ್ಯೂರಿಯೇಟ್ ಆಫ್ ಪೊಟ್ಯಾಷ್, ಅಮೋನಿಯಮ್ ಸಲ್ಫೇಟ್, ಯೂರಿಯ ಮುಂತಾದ ರಾಸಾಯನಿಕ ಗೊಬ್ಬರಗಳ ಆವಶ್ಯಕತೆ ಇದೆ.

ಭಾರತದ ಕಟಾವು ಪ್ರದೇಶದಲ್ಲಿನ ಮೆಕ್ಕೆ ಜೋಳದ ರಾಶಿ

ಉತ್ತರ ಅಮೆರಿಕಾದಲ್ಲಿ, ಜಮೀನಿನಲ್ಲಿ ಇದನ್ನು ಸಾರಜನಕ-ಸ್ಥಿರೀಕರಣ ಮಾಡುವ ಬೆಳೆಯೊಂದಿಗೆ, ತಣ್ಣಗಿನ ವಾಯುಗುಣದಲ್ಲಿ ಹೆಚ್ಚಾಗಿ ಆಲ್ಫಾಲ್ಫದೊಂದಿಗೆ ಮತ್ತು ದೀರ್ಘಕಾಲದ ಬೇಸಿಗೆ ಇರುವೆಡೆಗಳಲ್ಲಿ ಸೋಯಬೀನ್‍ನೊಂದಿಗೆ ಎರಡು-ಬೆಳೆಗಳ ಸರದಿಯಲ್ಲಿ ಬೆಳೆಸಲಾಗುತ್ತದೆ. ಕೆಲವೊಮ್ಮೆ ಈ ಸರದಿಗೆ ಮೂರನೇ ಬೆಳೆ ಚಳಿಗಾಲದ ಗೋಧಿಯನ್ನು ಸೇರಿಸಲಾಗುತ್ತದೆ.

ಭಾರತದಲ್ಲಿ ಮುಸುಕಿನ ಜೋಳವನ್ನು ಶುದ್ಧ ಬೆಳೆಯಾಗಿ ಬೇಸಾಯ ಮಾಡುವುದೇ ವಾಡಿಕೆಯಾದರೂ ಕೆಲವೊಮೆ ಹೆಸರು, ಉದ್ದು, ಅಲಸಂದೆ ಮುಂತಾದ ದ್ವಿದಳಧಾನ್ಯಗಳನ್ನೊ, ಎಳ್ಳು, ಸೇಂಗ ಮುಂತಾದ ಎಣ್ಣೆ ಸಸ್ಯಗಳನ್ನೊ ಬೆಂಡೆ, ಈರುಳ್ಳಿ, ಗಜ್ಜರಿ ಇತ್ಯಾದಿ ತರಕಾರಿ ಸಸ್ಯಗಳನ್ನೊ ಅಕ್ಕಡಿ ಬೆಳೆಗಳನ್ನಾಗಿ ಕೃಷಿಮಾಡುವುದಿದೆ. ಕೆಲವೆಡೆ ಸೋಯಾ ಸಸ್ಯವನ್ನು, ಇನ್ನು ಕೆಲವೆಡೆ ಹತ್ತಿಯನ್ನು, ಮಹಾರಾಷ್ಟ್ರದ ಕೆಲವೆಡೆ ಕಬ್ಬನ್ನು ಈ ರೀತಿ ಮಿಶ್ರ ಬೆಳೆಯಾಗಿ ಬೆಳೆಸುವುದುಂಟು. ಮುಸುಕಿನ ಜೋಳ ಕುಯ್ಲಾದ ತರುವಾಯ ಗೋದಿ, ಬಾರ್ಲಿ, ಕಬ್ಬು, ಆಲೂಗಡ್ಡೆ, ಸಾಸುವೆ, ಕುಸುಬೆ ಮುಂತಾದ ಬೆಳೆಗಳನ್ನು ಹಾಕುವ ರೂಢಿಯೂ ಉಂಟು.

ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ಬೆಳೆಸುವ ಮೆಕ್ಕೆ ಜೋಳದ ಹೆಚ್ಚಿನ ಪ್ರಭೇದಗಳು ಮಿಶ್ರ ತಳಿಗಳಾಗಿವೆ. ಹೆಚ್ಚಾಗಿ ಪ್ರಭೇದಗಳಿಗೆ ಗ್ಲೈಫೋಸೇಟ್ಅನ್ನು ತಡೆದುಕೊಳ್ಳುವುದಕ್ಕಾಗಿ ಅಥವಾ ನೈಸರ್ಗಿಕ ಕ್ರಿಮಿಗಳಿಂದ ರಕ್ಷಣೆ ಒದಗಿಸುವುದಕ್ಕಾಗಿ ಆನುವಂಶಿಕ ಮಾರ್ಪಾಡುಗಳನ್ನು ಮಾಡಲಾಗುತ್ತದೆ. ಗ್ಲೈಫೋಸೇಟ್‌ (ವಾಣಿಜ್ಯ ಹೆಸರು ರೌಂಡಪ್) ಆನುವಂಶಿಕ ತಡೆದುಕೊಳ್ಳುವಿಕೆಯನ್ನು ಹೊಂದಿರುವ ಸಸ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸಸ್ಯಗಳನ್ನು ಸಾಯಿಸುವ ಒಂದು ಸಸ್ಯನಾಶಕವಾಗಿದೆ. ಈ ಆನುವಂಶಿಕ ತಡೆದುಕೊಳ್ಳುವಿಕೆಯು ನಿಸರ್ಗದಲ್ಲಿ ಅತಿ ವಿರಳವಾಗಿ ಕಂಡುಬರುತ್ತದೆ.

ಮಧ್ಯಪಶ್ಚಿಮ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಉತ್ತು ಅಥವಾ ಉಳದೆಯೇ ಕೃಷಿ ಮಾಡುವ ವಿಧಾನಗಳನ್ನು ಬಳಸಲಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ಉತ್ತು ಬೆಳೆಯುವ ವಿಧಾನದಲ್ಲಿ, ಜಮೀನನ್ನು ಒಮ್ಮೆ ಕೆಲವೊಮ್ಮೆ ಎರಡು ಬಾರಿ ಬೆಳೆಯನ್ನು ನೆಡುವ ಮೊದಲು ಅಥವಾ ಹಿಂದಿನ ಬೆಳೆಯ ಕಟಾವಿನ ನಂತರ ಕೃಷಿಗೆ ಬೇಕಾದ ಅಂಶಗಳಿಂದ ಮುಚ್ಚಲಾಗುತ್ತದೆ. ಈ ಜಮೀನಿನಲ್ಲಿ ಮೆಕ್ಕೆ ಜೋಳವನ್ನು ನೆಡಲಾಗುತ್ತದೆ ಮತ್ತು ಫಲೀಕರಿಸಲಾಗುತ್ತದೆ. ಬೀಜಗಳನ್ನು ಸಸ್ಯನಾಶಕಗಳನ್ನು ಬಳಸಿ ನಿಯಂತ್ರಿಸಲಾಗುತ್ತದೆ ಮತ್ತು ಬೆಳೆಯುವ ಅವಧಿಯಲ್ಲಿ ಜಮೀನನ್ನು ಉಳುವುದಿಲ್ಲ. ಈ ವಿಧಾನವು ಮಣ್ಣಿನಿಂದ ತೇವವು ಆವಿಯಾಗಿ ಹೋಗುವುದನ್ನು ಕಡಿಮೆ ಮಾಡಿ, ಬೆಳೆಗೆ ಹೆಚ್ಚು ತೇವಾಂಶವನ್ನು ಒದಗಿಸುತ್ತದೆ. ಹಿಂದಿನ ಪ್ಯಾರಾದಲ್ಲಿ ಸೂಚಿಸಿದ ವಿಧಾನಗಳು ಕಡಿಮೆ ಪ್ರಮಾಣದಲ್ಲಿ ಉತ್ತು ಮತ್ತು ಉಳದೆಯೇ ಮಾಡುವ ಕೃಷಿಯನ್ನು ಸಾಧ್ಯಗೊಳಿಸುತ್ತವೆ. ಬೀಜಗಳು ಅವುಗಳನ್ನು ಅಪೇಕ್ಷಣೀಯವಲ್ಲದವುಗಳಾಗಿ ಮಾಡುವ ತೇವಾಂಶ ಮತ್ತು ಪೋಷಕಾಂಶಕ್ಕಾಗಿ ಬೆಳೆಯೊಂದಿಗೆ ಪೈಪೋಟಿ ನಡೆಸುತ್ತವೆ.

ಮೆಕ್ಕೆ ಜೋಳದ ಕಾಳುಗಳು

ವಿಶ್ವ ಸಮರ IIರ ಮೊದಲು, ಉತ್ತರ ಅಮೆರಿಕಾದ ಹೆಚ್ಚಿನ ಮೆಕ್ಕೆ ಜೋಳವನ್ನು ಕೈಯಿಂದ ಕಟಾವು ಮಾಡಲಾಗುತ್ತಿತ್ತು (ಇದನ್ನು ಬೆಳೆಯುವ ಕೆಲವು ಇತರ ರಾಷ್ಟ್ರಗಳಲ್ಲಿ ಇಂದಿಗೂ ಇದು ಬಳಕೆಯಲ್ಲಿದೆ). ಇದಕ್ಕೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರ ಮತ್ತು ಸಂಬಂಧಿತ ಸಾಮಾಜಿಕ ಸಂದರ್ಭಗಳ ಅವಶ್ಯಕತೆ ಇರುತ್ತದೆ. ಕೆಲವು ಒಂದು ಮತ್ತು ಎರಡು-ಸಾಲಿನ ಯಾಂತ್ರಿಕ ಕೀಳುವವು ಬಳಕೆಯಲ್ಲಿದ್ದವು. ಆದರೆ ಮೆಕ್ಕೆ ಜೋಳ ಕುಯ್ಲೊಕ್ಕು ಯಂತ್ರವನ್ನು ಮಹಾಯುದ್ಧದವರೆಗೆ ಉಪಯೋಗಿಸಿಕೊಂಡಿರಲಿಲ್ಲ. ಕೈಯಿಂದ ಅಥವಾ ಯಾಂತ್ರಿಕ ಕೀಳುವವುಗಳಿಂದ ಪೂರ್ಣ ಕದಿರನ್ನು ಕೊಯ್ಲು ಮಾಡಲಾಗುತ್ತದೆ. ನಂತರ ಕದಿರಿನಿಂದ ಕಾಳುಗಳನ್ನು ತೆಗೆಯಲು ಒಂದು ಪ್ರತ್ಯೇಕ ಕಾರ್ಯ ಮೆಕ್ಕೆ ಜೋಳ ಶೆಲ್ಲರ್ ಅನ್ನು(ಬೀಜಗಳನ್ನು ಬಿಡಿಸುವುದು) ಮಾಡಲಾಗುತ್ತದೆ. ಮೆಕ್ಕೆ ಜೋಳದ ಪೂರ್ಣ ಕದಿರುಗಳನ್ನು ಹೆಚ್ಚಾಗಿ ಕಾರ್ನ್ ಕ್ರಿಬ್ (ಗಳಗೆ) ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಈ ಪೂರ್ಣ ಕದಿರುಗಳು ಕೆಲವು ಜಾನುವಾರುಗಳ ಆಹಾರದ ಸಮರ್ಥ ರೂಪವಾಗಿದೆ. ಕೆಲವು ಆಧುನಿಕ ಸಂಗ್ರಹಗಾರಗಳು ಮೆಕ್ಕೆ ಜೋಳವನ್ನು ಈ ವಿಧಾನದಲ್ಲಿ ಶೇಖರಿಸುತ್ತವೆ. ಹೆಚ್ಚಿನವರು ಜಮೀನಿನಿಂದ ಧಾನ್ಯವನ್ನು ಕಟಾವು ಮಾಡಿ, ಗುಡಾಣಗಳಲ್ಲಿ ಸಂಗ್ರಹಿಸಿಡುತ್ತಾರೆ. ಕುಯ್ಲೊಕ್ಕು ಯಂತ್ರವು (ಮೊನೆಗಳೊಂದಿಗೆ ಮತ್ತು ರಾಟೆಯ ಬದಲಿಗೆ ಲಟ್ಟನೆ ಮುರಿಯುವ ಉರುಳೆಗಳೊಂದಿಗೆ) ಮೆಕ್ಕೆ ಜೋಳದ ಕಾಂಡವನ್ನು ಕತ್ತರಿಸುವುದಿಲ್ಲ; ಇದು ಕಾಂಡವನ್ನು ಕೆಳಗೆ ಬೀಳಿಸುತ್ತದೆ. ಕಾಂಡವು ಕೆಳಕ್ಕೆ ಬಾಗಿ, ಕತ್ತರಿಸಲ್ಪಟ್ಟು ನೆಲದ ಮೇಲೆ ರಾಶಿಯಾಗಿ ಬೀಳುತ್ತವೆ. ಲಟ್ಟನೆ ಮುರಿಯುವ ಉರುಳೆಗಳು ಕಾಂಡವನ್ನು ಎಳೆಯುವಾಗ ಮೆಕ್ಕೆ ಜೋಳದ ಕದಿರು ತುಂಬಾ ದೊಡ್ಡದಾಗಿರುವುದರಿಂದ ಯಂತ್ರದ ಉದ್ದ ತೂತಿನ ಮಧ್ಯೆ ಸಾಗಿ ಹೋಗದೆ, ಕೇವಲ ಕದಿರು ಮತ್ತು ಸಿಪ್ಪೆ ಮಾತ್ರ ಯಂತ್ರದ ಮೂಲಕ ಹೋಗುತ್ತದೆ. ಕುಯ್ಲೊಕ್ಕು ಯಂತ್ರವು ಸಿಪ್ಪೆ ಮತ್ತು ಜೊಂಡನ್ನು ಬೇರ್ಪಡಿಸಿ ಕೇವಲ ಕಾಳುಗಳನ್ನು ಮಾತ್ರ ಸಂಗ್ರಹಿಸುತ್ತದೆ.

ಭಾರತದಲ್ಲಿ ಮುಸುಕಿನ ಜೋಳವನ್ನು ಧಾನ್ಯ, ಮೇವು ಇಲ್ಲವೇ ಸೈಲೇಜ್‌ಗಾಗಿ ಕಟಾವು ಮಾಡಲಾಗುತ್ತದೆ. ಬೀಜ ಬಿತ್ತಿದ 80-100 ದಿನಗಳ ತರುವಾಯ ಕುಯ್ಲಿಗೆ ಬರಲು 4-6 ತಿಂಗಳಾಗುವುದೂ ಉಂಟು. ತೆನೆಗಳು ಬಲಿತ ಮೇಲೆ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ, ಅನಂತರ ಕೋಲಿನಿಂದ ಬಡಿದು ಕಾಳುಗಳನ್ನು ಬಿಡಿಸಲಾಗುತ್ತದೆ. ಬಿತ್ತನೆಗಾಗಿ ಬೇಕಾದ ಕಾಳುಗಳನ್ನು ತೆನೆಗಳಿಂದ ಬಿಡಿಸದೆ ಹಾಗೆಯೇ ಒಣಗಿಸಿ ಇಡುವುದುಂಟು. ಕರ್ನಾಟಕದ ಕೆಲವೆಡೆ ತೆನೆಗಳ ನಿಷೇಚನವಾದ ತರುವಾಯ, ಗಿಡದ ತುದಿಗಳನ್ನು ಕತ್ತರಿಸಿ ಮೇವಿನ ರೂಪದಲ್ಲಿ ದನಗಳಿಗೆ ಕೊಡುವುದಿದೆ.

ತಳಿಗಳ ಮಾರ್ಪಾಡು

[ಬದಲಾಯಿಸಿ]

ತಳಿ ವಿಜ್ಞಾನದ ಪ್ರಕಾರ ಮಾರ್ಪಡಿಸಿದ (GM) ಮೆಕ್ಕೆ ಜೋಳವು ಕೆಲವು ವಾಣಿಜ್ಯದ-ದೃಷ್ಟಿಯಿಂದ ಬೆಳೆಸುವ GM ಬೆಳೆಗಳಲ್ಲಿ ಒಂದಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ 1997ರಿಂದ ಬೆಳೆದವುಗಳಲ್ಲಿ ಸುಮಾರು 80%ನಷ್ಟು US ಮೆಕ್ಕೆ ಜೋಳ ಬೆಳೆಯನ್ನು ಈಗ ತಳಿ ವಿಜ್ಞಾನದ ಪ್ರಕಾರ ಮಾರ್ಪಡಿಸಲಾಗಿದೆ. ಇದನ್ನು ವ್ಯಾಪಾರದ-ದೃಷ್ಟಿಯಿಂದ ದಕ್ಷಿಣ ಆಫ್ರಿಕಾದಲ್ಲಿ, ಸಣ್ಣ ಪ್ರಮಾಣದಲ್ಲಿ ಸ್ಪೇನ್, ಜೆಕ್ ರಿಪಬ್ಲಿಕ್, ಪೋರ್ಚುಗಲ್ ಮತ್ತು ಜರ್ಮನಿ ಮೊದಲಾದ ಕಡೆಗಳಲ್ಲಿಯೂ ಬೆಳೆಸಲಾಗುತ್ತದೆ.[]

ಉಪದ್ರವಕಾರಿಗಳು

[ಬದಲಾಯಿಸಿ]

ಕೀಟ ಪೀಡೆಗಳು

[ಬದಲಾಯಿಸಿ]
  • ಮೆಕ್ಕೆ ಜೋಳದ ಕದಿರಿನ ಹುಳು (ಹೆಲಿಕವರ್ಪಾ ಜಿಯಾ )
  • ಫಾಲ್ ಆರ್ಮಿವರ್ಮ್ (ಸ್ಪಾಡೊಪ್ಟೆರಾ ಫ್ರುಗಿಪರ್ಡಾ )
  • ಸಾಮಾನ್ಯ ಆರ್ಮಿವರ್ಮ್ (ಸ್ಯೂಡಲೆಟಿಯ ಯೂನಿಪಂಕ್ಟ)
  • ಕಾಂಡ ಕೊರೆಗ (ಪಪೈಮೆಮ ನೆಬ್ರಿಸ್ )
  • ಕದಿರು ಎಲೆ ಆಫಿಡ್ (ರೊಪ್ಯಾಲೊಸಿಫಮ್ ಮೈಡಿಸ್ )
  • ಯುರೋಪಿನ ಮೆಕ್ಕೆ ಜೋಳದ ಕೊರೆಗ (ಆಸ್ಟ್ರಿನಿಯಾ ನ್ಯೂಬಿಲಾಲಿಸ್ ) (ECB)
  • ಕಾರ್ನ್ ಸಿಲ್ಕ್‌ಫ್ಲೈ (ಆಕ್ಸೆಸ್ಟಾ ಸ್ಟಿಗ್ಮಾಟಿಸ್ )
  • ಕಡಿಮೆ ಕಾಂಡ ಕೊರೆಗ (ಎಲಾಸ್ಮೊಪಲ್ಪಸ್ ಲಿಗ್ನೋಸೆಲ್ಲಸ್ )
  • ಕಾರ್ನ್ ಡೆಲ್ಫಾಸಿಡ್ (ಪೆರೆಗ್ರಿನಸ್ ಮೈಡಿಸ್ )
  • ಪಶ್ಚಿಮ ಮೆಕ್ಕೆ ಜೋಳದ ಬೇರು ಹುಳು (ಡಯಾಬ್ರೋಟಿಕಾ ವರಿಜಿಫೆರ ಲಿಕೋಂಟೆ)
  • ನೈಋತ್ಯ ಮೆಕ್ಕೆ ಜೋಳದ ಕೊರೆಗ (ಡಯಾಟ್ರಿಯ ಗ್ರ್ಯಾಂಡಿಯೊಸೆಲ್ಲ )

ಮೆಕ್ಕೆ ಜೋಳವು ಯುರೋಪಿನ ಕಾರ್ನ್ ಕೊರೆಗದ ಪ್ರಭಾವಕ್ಕೆ ಒಳಗಾಗಿ ಅತಿ ಹೆಚ್ಚಿನ ಪ್ರಮಾಣದ ಬೆಳೆ ನಾಶವಾದುದರಿಂದ, ಬ್ಯಾಸಿಲ್ಲಸ್ ತುರಿಂಜಿಯೆನ್ಸಿಸ್ ಅನ್ನು ಸ್ರವಿಸುವ ಜೀವಾಂತರ ವಿಷವನ್ನು ಅಭಿವೃದ್ಧಿಗೊಳಿಸಲಾಯಿತು."Bt ಮೆಕ್ಕೆ ಜೋಳ"ವನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವ್ಯಾಪಕವಾಗಿ ಬೆಳೆಸಲಾಯಿತು ಮತ್ತು ಇದು ಯುರೋಪ್ನಲ್ಲಿ ಬಿಡುಗಡೆಯಾಗಲು ಒಪ್ಪಿಗೆಯನ್ನು ಪಡೆಯಿತು.

ಕೀಟಪಿಡುಗುಗಳ ಪೈಕಿ ಮುಖ್ಯವಾದುವು ಕಾಂಡಕೊರಕ (ಕೈಲೊಪಾರ್ಟೆಲಸ್) ಕೆಂಪು ಕಂಬಳಿಹುಳು (ಆಮ್‌ಸ್ಯಾಕ್ಟ ಮೂರಿಯೈ), ಪಿಂಕ್ ಕಾಂಡ ಕೊರಕ (ಸೆಸೇಮಿಯ ಇನ್‌ಫೆರನ್ಸ್), ಆರ್ಮಿವರ್ಮ್ (ಸಿರ್ಪಿಸ್ ಯೂನಿಪಂಕ್ಟ) ಮತ್ತು ಹಲವಾರು ಬಗೆಯ ಮಿಡತೆಗಳು, ಗೆದ್ದಲು, ಚಿಮ್ಮಂಡೆಗಳು, ನೊಣಗಳು.

ಕಾಯಿಲೆಗಳು

[ಬದಲಾಯಿಸಿ]
  • ಮೆಕ್ಕೆ ಜೋಳದ ಕಾಡಿಗೆ ರೋಗ ಅಥವಾ ಸಾಮಾನ್ಯ ಕಾಡಿಗೆ ರೋಗ (ಉಸ್ಟಿಲ್ಯಾಗೊ ಮೇಡಿಸ್ ): ಇದು ಒಂದು ಶಿಲೀಂಧ್ರದ ರೋಗ, ಮೆಕ್ಸಿಕೊದಲ್ಲಿ ಹ್ಯುಟ್ಲಕೋಚ್ ಎನ್ನುತ್ತಾರೆ, ಇದನ್ನು ಕೆಲವರು ಸವಿ ತಿನಿಸು ಎಂದೂ ಕರೆಯುತ್ತಾರೆ.
  • ಮೈಜ್ ಡ್ವಾರ್ಫ್ ಮೊಸಾಯಿಕ್ ವೈರಸ್
  • ಸ್ಟೆವಾರ್ಟ್ಸ್ ವಿಲ್ಟ್ (ಪ್ಯಾಂಟೋಯಿಯ ಸ್ಟೆವಾರ್ಟಿ )
  • ಸಾಮಾನ್ ಶಿಲೀಂಧ್ರ ರೋಗ (ಪ್ಯುಸಿನಿಯ ಸಾರ್ಘೈ )
  • ಗಾಸ್ಸಸ್ ವಿಲ್ಟ್ (ಕ್ಲ್ಯಾವಿಬ್ಯಾಕ್ಟರ್ ಮಿಚಿಗನೀಸ್ )
  • ಗ್ರೇ ಲೀಫ್ ಸ್ಪಾಟ್
  • ಮಾಲ್ ಡಿ ರಿಯೊ ಕ್ವಾರ್ಟೊ (MRCV)
  • ಕಾಂಡ ಮತ್ತು ಕದಿರು ಕೊಳೆರೋಗ

ಎಲೆಗಳಿಗೆ ತಗಲುವ ಬೂಷ್ಟು ರೋಗಗಳ ಪೈಕಿ ಲೀಫ್ ಬ್ಲೈಟ್ (ಹೆಲ್ಮಿಂತೊಸ್ಪೋರಿಯಮ್ ಟರ್ಸಿಕಮ್ ಮತ್ತು ಹೆಲ್ಮಿಂತೊಸ್ಪೋರಿಯಮ್ ಮೇಯ್ಡಿಸ್), ಲೀಫ್ ಸ್ಪಾಟ್ (ಸರ್ಕೊಸ್ಪೊರ ಸೋರ್ಗೈ), ಬ್ರೌನ್ ಸ್ಪಾಟ್ (ಫೈಸೊಡರ್ಮ ಮೇಯ್ಡಿಸ್), ರಸ್ಟ್ (ಪಕ್ಸೀನಿಯ ಸೋರ್ಗೈ), ಡೌನಿ ಮಿಲ್ ಡ್ಯೂ (ಸ್ಕ್ಲೀರೋ ಸ್ಪೊರ ಪ್ರಭೇದಗಳು), ಮುಖ್ಯವಾಗಿವೆ. ಪಿತಿಯಮ್ ಅಫನಿಡರ್ಮೇಟಮ್ ಎಂಬುದರಿಂದ ಬರುವ ಕಾಂಡ ಕೊಳೆ ರೋಗಗಳ ಪೈಕಿ ಪ್ರಧಾನನವಾದ್ದು. ಡಿಪ್ಲೋಡಿಯ ತೆನೆರೋಗ (ಡಿಪ್ಲೋಡಿಯಜೀಯಿ), ಜಿಬರೆಲ್ಲ ತೆನೆ ಕೊಳೆರೋಗ (ಜಿಬರೆಲ್ಲ ಜೀಯಿ), ಸ್ಮಟ್ (ಯುಸ್ಟಿಲ್ಯಾಗೊ ಮೇಯ್ಡಿಸ್-ಕಾಡಿಗೆ) ಮುಂತಾದವು ತೆನೆಗಳಿಗೆ ಹಾನಿಯುಂಟುಮಾಡುವ ರೋಗಗಳು.

ಬಳಕೆಗಳು (ಉಪಯೋಗಗಳು)

[ಬದಲಾಯಿಸಿ]
ಮೆಕ್ಕೆ ಜೋಳದ ಕದಿರುಗಳ ಕಂತೆ ಅಥವಾ ಕಟ್ಟುಗಳು, ಒಂದು ಸಾಂಪ್ರದಾಯಿಕ ಕಟಾವು ಮಾಡುವ ಅಭ್ಯಾಸ.
ಒಣಗಿದ ಮೆಕ್ಕೆ ಜೋಳದ ಕಣ, ಮುಸುಕಿನ ಜೋಳದ ತರಿ ಎಂದೂ ಕರೆಯಲಾಗುತ್ತದೆ, ಇದನ್ನು ಮೆಕ್ಸಿಕನ್ ಅಡುಗೆಯಲ್ಲಿ ಬಳಸುತ್ತಾರೆ.

ಮೆಕ್ಕೆ ಜೋಳ ಮತ್ತು ಮೆಕ್ಕೆಜೋಳದ ಹಿಟ್ಟು (ಒಣಗಿದ ಮೆಕ್ಕೆ ಜೋಳದ ಪುಡಿ) ಪ್ರಪಂಚದ ಹೆಚ್ಚಿನ ಪ್ರದೇಶಗಳಲ್ಲಿ ಪ್ರಧಾನ ಆಹಾರವಾಗಿದೆ. ಭಾರತದ ಒಟ್ಟು ಉತ್ಪನ್ನದ ಶೇಕಡಾ 80-90 ರಷ್ಟು ಹೀಗೆ ಆಹಾರವಾಗಿ ಬಳಕೆಯಾಗುತ್ತದೆ. ಮೆಕ್ಕೆ ಜೋಳದ ಹಿಟ್ಟನ್ನು ಅನೇಕ ಕಡೆಗಳಲ್ಲಿ ಅಂಬಲಿ ಮಾಡಲಾಗುತ್ತದೆ: ಇಟಲಿಯಲ್ಲಿ ಪೊಲೆಂಟ (ಮೆತ್ತನೆಯ ಅಂಬಲಿ), ಬ್ರೆಜಿಲ್ನಲ್ಲಿ ಆಂಗ್ಯು, ರೊಮೇನಿಯಾದಲ್ಲಿ ಮ್ಯಾಮಲಿಗ, ಯು.ಎಸ್.ನಲ್ಲಿ ಮಶ್ ಅಥವಾ ಆಫ್ರಿಕಾದಲ್ಲಿ ಸಾದ್ಜ, ನ್ಶಿಮ, ಉಗಾಲಿ ಮತ್ತು ಮಿಯಾಲೈ ಪ್ಯಾಪ್. ಮೆಕ್ಕೆಜೋಳದ ರೊಟ್ಟಿ ಮತ್ತು ಇತರ ಬೇಕರಿ-ಉತ್ಪನ್ನಗಳನ್ನು ತಯಾರಿಸಲು ಗೋಧಿ ಹಿಟ್ಟಿನ ಬದಲಿಗೆ ಮೆಕ್ಕೆ ಜೋಳದ ಹಿಟ್ಟನ್ನೂ ಬಳಸಲಾಗುತ್ತದೆ. ಮಾಸವು (ಮೆಕ್ಕೆಜೋಳದ ಹಿಟ್ಟನ್ನು ಸುಣ್ಣದ ನೀರಿನೊಂದಿಗೆ ಬೆರೆಸುವುದು) ಟೋರ್ಟಿಲ್ಲಾ(ಚಪ್ಪಟೆ ರೊಟ್ಟಿ), ಅಟೋಲ್ ಮತ್ತು ಮೆಕ್ಸಿಕನ್ ಆಹಾರದ ಇತರ ತಿನಿಸುಗಳಲ್ಲಿ ಬಳಸುವ ಪ್ರಮುಖ ಪದಾರ್ಥವಾಗಿದೆ.

ಇದರಿಂದ ಮೈದಾ, ರವೆ, ಗಂಜಿಗಳನ್ನೂ ತಯಾರಿಸಲಾಗುತ್ತಿದೆ. ಇಡೀ ತೆನೆಯನ್ನು ಸುಟ್ಟು ಇಲ್ಲವೇ ಕುಟ್ಟಿ ತಿನ್ನುವುದು ಸರ್ವಸಾಮಾನ್ಯ. ಆಫ್ರಿಕದ ನೈಜೀರಿಯದಲ್ಲಿ ಇದರ ಹಿಟ್ಟಿನಿಂದ ಓಜಿ ಎಂಬ ಖಾದ್ಯ ವಸ್ತುವನ್ನು ತಯಾರಿಸಲಾಗುತ್ತದೆ. ಹಾಗೆ ಪೂರ್ವ ಆಫ್ರಿಕದ ಕೆಲವೆಡೆ ಇದರಿಂದ ಉಗಾಲೆ, ಚಿಂಗ ಎಂಬ ಗಂಜಿಯಂಥ ಆಹಾರವನ್ನು ಮಾಡುವುದುಂಟು.

ಪಾಪ್‌ಕಾರ್ನ್‌ಗಳು ಕೆಲವು ಪ್ರಭೇದಗಳ ಕಾಳುಗಳಾಗಿವೆ, ಇವನ್ನು ಬಿಸಿ ಮಾಡಿದಾಗ ಸಿಡಿದು, ಮೆದುವಾದ ಚೂರುಗಳಾಗುತ್ತವೆ. ಇದನ್ನು ಲಘು ಆಹಾರವಾಗಿ ತಿನ್ನಬಹುದು. ಸ್ವಲ್ಪ-ಗಟ್ಟಿಯಾದ ಕಾಳುಗಳನ್ನು ಹೊಂದಿರುವ ಮೆಕ್ಕೆ ಜೋಳದ ಜೊಂಡನ್ನು ಸುಟ್ಟು ಅದರ ಮೇಲೆ, ಕತ್ತರಿಸಿದ-ಈರುಳ್ಳಿಯನ್ನು ಉಪ್ಪಿನೊಂದಿಗೆ ಎಣ್ಣೆಯಲ್ಲಿ ಫ್ರೈ ಮಾಡಿ ಹದಗೊಳಿಸಿದ ಮಿಶ್ರಣವನ್ನು ಸವರಿ ವಿಯೆಟ್ನಾಂನಲ್ಲಿ ಹೆಚ್ಚಾಗಿ ಲಘು ಆಹಾರವಾಗಿ ತಿನ್ನುತ್ತಾರೆ. ಮಕ್ಕಿ ದಿ ರೋಟಿ ಎಂಬ ಹುಳಿಹಿಡಿಸದ ರೊಟ್ಟಿ ಭಾರತ ಮತ್ತು ಪಾಕಿಸ್ಥಾನದ ಪಂಜಾಬ್ ಪ್ರದೇಶದಲ್ಲಿ ಹೆಚ್ಚು ಜನಪ್ರಿಯವಾದ ಬ್ರೆಡ್ ಆಗಿದೆ.

ಚಿಚ ಮತ್ತು "ಚಿಚ ಮೊರಾಡ" (ನೇರಳೆ ಬಣ್ಣದ ಚಿಚ) ಗಳು ನಿರ್ದಿಷ್ಟ ಪ್ರಕಾರದ ಮೆಕ್ಕೆ ಜೋಳದಿಂದ ಮಾಡಲಾಗುವ ಪಾನೀಯಗಳು. ಚಿಚವು ಹುದುಗಿಸಿದ ಮತ್ತು ಆಲ್ಕಹಾಲಿನ ಪಾನೀಯವಾಗಿದೆ ಹಾಗೂ ಚಿಚ ಮೊರಾಡವು ಪೆರುವಿನಲ್ಲಿ ಸಾಮಾನ್ಯವಾಗಿ ಕುಡಿಯುವ ಮಾದಕವಿಲ್ಲದ ಪಾನೀಯವಾಗಿದೆ.

ಕಾರ್ನ್ ಫ್ಲೇಕ್‍ಗಳು ಉತ್ತರ ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್‌ನಲ್ಲಿ ಬೆಳಗಿನ ಉಪಾಹಾರದಲ್ಲಿ ಬಳಸುವ ಸಾಮಾನ್ಯ ತಿಂಡಿಯಾಗಿದೆ ಮತ್ತು ಇದು ಪ್ರಪಂಚದಾದ್ಯಂತದ ಇತರ ರಾಷ್ಟ್ರಗಳಲ್ಲೂ ಕಂಡುಬರುತ್ತದೆ.

ಮೆಕ್ಕೆ ಜೋಳವನ್ನು ತರಿಯಾಗಿಯೂ ತಯಾರಿಸಬಹುದು. ಅದರಲ್ಲಿ ಕಾಳುಗಳನ್ನು ನಿಕ್ಸ್‌ಟಮಲೈಸೇಶನ್ ಎನ್ನುವ ಕ್ರಿಯೆಯಲ್ಲಿ ಲೈ (ಯಾವುದೇ ಕ್ಷಾರ ದ್ರಾವಣ) ಯಲ್ಲಿ ನೆನೆಸಿಡಲಾಗುತ್ತದೆ; ಅಥವಾ ಗ್ರಿಟ್ಸ್ (ಓಟ್ಸ್ ತರಿ), ಇದು ಒರಟಾಗಿರುವ ಪುಡಿಮಾಡಿದ ತರಿಯಾಗಿದೆ. ಸ್ಯಾಗಮಿಟೆ ಎಂದು ಕರೆಯಲ್ಪಡುತ್ತಿದ್ದ ಸ್ಥಳೀಯ ಅಮೇರಿಕನ್ನರಿಂದ ಮೊದಲು ತಯಾರಿಸಲ್ಪಟ್ಟ ಇದನ್ನು ಆಗ್ನೇಯ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಾಮಾನ್ಯ ಆಹಾರವಾಗಿ ಬಳಸುತ್ತಾರೆ.

ಬ್ರೆಜಿಲ್‌ನ ಸಿಹಿತಿಂಡಿ ಕ್ಯಾಂಜಿಕಾವನ್ನು ಮೆಕ್ಕೆ ಜೋಳದ ಕಾಳುಗಳನ್ನು ಸಿಹಿ ಹಾಲಿನಲ್ಲಿ ಬೇಯಿಸಿ ತಯಾರಿಸುತ್ತಾರೆ.

ಕತ್ತರಿಸಿದ ಸ್ವೀಟ್ ವೈಟ್ ಕಾರ್ನ್

ಮೆಕ್ಕೆ ಜೋಳವನ್ನು ಬಲಿಯದ ಸ್ಥಿತಿಯಲ್ಲೂ ಅಂದರೆ ಕಾಳುಗಳು ಸಂಪೂರ್ಣವಾಗಿ ಬೆಳೆದು ಮತ್ತೂ ಮೃದುವಾಗಿರುವಾಗಿರುವಾಗಲೂ ಕಟಾವು ಮಾಡಿ, ಬಳಸಲಾಗುತ್ತದೆ. ಬಲಿಯದ ಮೆಕ್ಕೆ ಜೋಳವು ರುಚಿಕರವಾಗಿರಬೇಕಾದರೆ ಅದನ್ನು ಬೇಯಿಸಬೇಕು; ಪೂರ್ಣ ಕದಿರುಗಳನ್ನು ಬೇಯಿಸಿ ಅಥವಾ ಸುಟ್ಟು, ಜೊಂಡಿನ ಮೇಲಿರುವ ಕಾಳುಗಳನ್ನು ಮಾತ್ರ ತಿನ್ನಲಾಗುತ್ತದೆ. ಅಂತಹ ಜೊಂಡಿನ ಮೆಕ್ಕೆಜೋಳವು ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಯುನೈಟೆಡ್ ಕಿಂಗ್ಡಮ್ ಮತ್ತು ದಕ್ಷಿಣ ಅಮೆರಿಕಾದ ಕೆಲವು ಭಾಗಗಳಲ್ಲಿ ಸಾಮಾನ್ಯ ಆಹಾರ ಪದಾರ್ಥವಾಗಿದೆ. ಆದರೆ ಕೆಲವು ಯುರೋಪಿನ ರಾಷ್ಟ್ರಗಳಲ್ಲಿರುವುದರ ಬಗ್ಗೆ ವಾಸ್ತವಿಕವಾಗಿ ತಿಳಿದಿಲ್ಲ. ಬೇಯಿಸಿದ ಬಲಿಯದ ಕಾಳುಗಳನ್ನು ಜೊಂಡಿನಿಂದ ಕಿತ್ತು, ವಿಶೇಷ ಭಕ್ಷ, ಸಲಾಡ್, ಖಾದ್ಯಾಲಂಕಾರ ಇತ್ಯಾದಿಗಳಲ್ಲಿ ತರಕಾರಿಯಾಗಿ ನೀಡಲಾಗುತ್ತದೆ. ಹಸಿ ಬಲಿಯದ ಕಾಳುಗಳನ್ನು ಜೊಂಡಿನಿಂದ ತುರಿದು, ಮೆಕ್ಕೆ ಜೋಳದ ಪ್ಯೂರೀ, ಟಮಾಲಿ, ಪಮೋನ್ಹಾಸ್, ಕ್ಯೂರಾ, ಕೇಕ್, ಐಸ್ ಕ್ರೀಂ ಮೊದಲಾದ ವಿವಿಧ ರೀತಿಯ ಬೇಯಿಸಿದ ತಿನಿಸುಗಳಲ್ಲಿ ಬಳಸಲಾಗುತ್ತದೆ. ಹೆಚ್ಚು ಶರ್ಕರ ಮತ್ತು ಕಡಿಮೆ ಪಿಷ್ಟವನ್ನು ಹೊಂದಿರುವ ಒಂದು ತಳೀಯ ಉಪಜಾತಿಯಾದ ಸ್ವೀಟ್‌ಕಾರ್ನ್ಅನ್ನು ಸಾಮಾನ್ಯವಾಗಿ ಬಲಿಯದ ಸ್ಥಿತಿಯಲ್ಲಿ ಉಪಯೋಗಿಸಲಾಗುತ್ತದೆ.

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಾಮಾನ್ಯವಾಗಿ ಕರೆಯುವ, ಜೊಂಡಿನ ಮೆಕ್ಕೆಜೋಳವನ್ನು 19ನೇ ಶತಮಾನದ ಆರಂಭದಲ್ಲಿ ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಬಡ, ಬರಿಗಾಲಿನ "ಬಿಸಿ ಮೆಕ್ಕೆಜೋಳ ಮಾರುವ ಹುಡುಗಿಯರು" ಮಾರಾಟಕ್ಕಾಗಿ ಹೊತ್ತುಕೊಂಡು ತಿರುಗುತ್ತಿದ್ದರು. ಇಂದು ಇದು ದೊಡ್ಡ ನಗರಗಳಲ್ಲಿ ಹಾಟ್-ಡಾಗ್ ಬಂಡಿ, ಚ್ಯೂರೊ ಹೊರೆಗಾಡಿ ಮತ್ತು ಹಣ್ಣಿನ ಅಂಗಡಿಗಳಲ್ಲಿ ಕಂಡುಬರುತ್ತದೆ.[೨೩]

Sweetcorn, yellow, raw
(seeds only)
ಪೌಷ್ಟಿಕಾಂಶದ ಮೌಲ್ಯ 100 g (3.5 oz)
ಶಕ್ತಿ360 kJ (86 kcal)
19.02 g
ಸಕ್ಕರೆ3.22 g
ನಾರು ಪದಾರ್ಥ2.7 g
1.18 g
3.22 g
ಟ್ರೈಪ್ಟೊಫಾನ್0.023 g
ಥಿಯನೈನ್0.129 g
ಐಸೊಲೂಸಿನ್0.129 g
ಲೂಸಿನ್0.348 g
ಲೈಸಿನ್0.137 g
ಮೆಥಿಯನೈನ್0.067 g
ಸಿಸ್ಟೈನ್0.026 g
ಫೆನಿಲಲಾನೈನ್0.150 g
ಥೈರೋಸಿನ್0.123 g
ವಾಲೈನ್0.185 g
ಅರ್ಜಿನೈನ್0.131 g
ಹಿಸ್ಟಿಡೈನ್0.089 g
ಅಲಾನೈನ್0.295 g
ಅಸ್ಫಾರ್ಟಿಕ್ ಆಸಿಡ್0.244 g
ಗ್ಲುಟಮಿಕ್ ಆಸಿಡ್0.636 g
ಗ್ಲೈಸಿನ್0.127 g
ಪ್ರೊಲಿನ್0.292 g
ಸೆರಿನ್0.153 g
ವಿಟಮಿನ್‌(ಅನ್ನಾಂಗ)ಗಳುಪ್ರಮಾಣ %DV
ಎ ಅನ್ನಾಂಗ
1%
9 μg
644 μg
ಥಯಾಮಿನ್
17%
0.200 mg
ಬಿ ಅನ್ನಾಂಗ (ನಯಾಸಿನ್)
11%
1.700 mg
ಬಿ ಅನ್ನಾಂಗ (ಫೊಲೆಟ್)
12%
46 μg
ಸಿ ಅನ್ನಾಂಗ
8%
6.8 mg
ಖನಿಜಗಳುಪ್ರಮಾಣ %DV
ಕಬ್ಬಿಣ
4%
0.52 mg
ಮೆಗ್ನೀಸಿಯಂ
10%
37 mg
ಪೊಟಾಸಿಯಂ
6%
270 mg
ಇತರೆಪ್ರಮಾಣ
ನೀರು75.96 g

One ear of medium size (6-3/4" to 7-1/2" long)
maize has 90 grams of seeds
  • ಘಟಕ
  • μg = ಮೈಕ್ರೋಗ್ರಾಮ್ • mg = ಮಿಲಿಗ್ರಾಮ್
  • IU = ಅಂತರರಾಷ್ಟ್ರೀಯ ಮಾನದಂಡ
Percentages are roughly approximated using US recommendations for adults.
Source: USDA FoodData Central

ಮೆಕ್ಕೆ ಜೋಳವು ಪಿಷ್ಟದ ಒಂದು ಮುಖ್ಯ ಮೂಲವಾಗಿದೆ. ಕಾರ್ನ್‌ಸ್ಟಾರ್ಚ್‌ (ಮೆಕ್ಕೆ ಜೋಳದ ಹಿಟ್ಟು) ಮನೆಯ ಅಡುಗೆಯಲ್ಲಿ ಮತ್ತು ಅನೇಕ ಕೈಗಾರೀಕರಿಸಿದ ಆಹಾರ ಉತ್ಪನ್ನಗಳಲ್ಲಿ ಬಳಸುವ ಒಂದು ಪ್ರಮುಖ ಅಂಶವಾಗಿದೆ. ಮೆಕ್ಕೆ ಜೋಳವು ಅಡುಗೆ ಎಣ್ಣೆಯ (ಕಾರ್ನ್ ಎಣ್ಣೆ) ಮತ್ತು ಮೆಕ್ಕೆ ಜೋಳದ ಗ್ಲ್ಯೂಟನ್‌ನ ಮುಖ್ಯ ಮೂಲವೂ ಆಗಿದೆ. ಕಾಳಿನ ಮೊಳಕೆ (ಜರ್ಮ್) ಕಾರ್ನ್ ಎಣ್ಣೆ ಎಂಬ ತೈಲದ ಒಳ್ಳೆಯ ಆಕರ. ಇದನ್ನು ವಿಟಮಿನ್ನುಗಳ ವಾಹಕ ಸಾಮಗ್ರಿ ಮುಂತಾಗಿ ಬಳಸಲಾಗುತ್ತದೆ. ಅಲ್ಲದೆ ಇದನ್ನು ಲಿನ್‌ಸೀಡ್ ಎಣ್ಣೆಯೊಂದಿಗೆ ಬೆರೆಸಿ ವಾರ್ನಿಷ್‌ಗಳ ತಯಾರಿಕೆಗೂ ಚರ್ಮ ಹದಗಾರಿಕೆಗೂ ಅಥವಾ ಹಾಗೆಯೇ ಸಾಬೂನು ತಯಾರಿಕೆಗೂ ಉಪಯೋಗಿಸುವುದುಂಟು. ಮೆಕ್ಕೆ ಜೋಳದ ಪಿಷ್ಟವನ್ನು ಜಲವಿಭಜಿಸಿ, ಎಂಜೈಮಿಕವಾಗಿ ಸಂಸ್ಕರಿಸಿ ಪಾನಕಗಳನ್ನು, ವಿಶೇಷವಾಗಿ ಹೆಚ್ಚಿನ ಫ್ರಕ್ಟೋಸ್ ಇರುವ ಸಿಹಿಯಾದ ಕಾರ್ನ್ ಸಿರಪ್ಅನ್ನು, ತಯಾರಿಸಲಾಗುತ್ತದೆ; ಅಲ್ಲದೆ ಇದನ್ನು ಹುದುಗಿಸಿ, ತೊಟ್ಟಿಕ್ಕಿಸಿ ಧಾನ್ಯದ ಆಲ್ಕೋಹಾಲ್ಅನ್ನು ಉತ್ಪಾದಿಸಲಾಗುತ್ತದೆ. ಮೆಕ್ಕೆ ಜೋಳದಿಂದ ಮಾಡಿದ ಧಾನ್ಯಗಳ ಆಲ್ಕೋಹಾಲ್ ಸಾಂಪ್ರದಾಯಿಕವಾಗಿ ಬರ್ಬನ್ ವಿಸ್ಕಿಯ ಮೂಲವಾಗಿದೆ. ಮೆಕ್ಕೆ ಜೋಳವನ್ನು ಕೆಲವೊಮ್ಮೆ ಬಿಯರ್ನಲ್ಲಿ ಪಿಷ್ಟದ ಮೂಲವಾಗಿ ಬಳಸಲಾಗುತ್ತದೆ.

ಇದರ ಕಾಂಡವನ್ನು ಹೊದಿಕೆ ಕಾಗದ, ರಟ್ಟು ಮುಂತಾದವುಗಳ ತಯಾರಿಕೆಗೆ ಬಳಸುವುದುಂಟು. ಕಾಳು ಬೇರ್ಪಡಿಸಿದ ಉಳಿದ ತೆನೆಯಿಂದ ಫರ್‌ಫ್ಯುರಾಲ್ ಪಡೆಯಬಹುದು.

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಮಾನವನ ಬಳಕೆಗಾಗಿ ಉಪಯೋಗಿಸುವ ಮೆಕ್ಕೆ ಜೋಳದ ಪ್ರಮಾಣವು ರಾಷ್ಟ್ರದಲ್ಲಿ ಬೆಳೆಯುವುದರಲ್ಲಿ ಸುಮಾರು 1/40ನೇ ಪ್ರಮಾಣವನ್ನು ಒಳಗೊಳ್ಳುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ಮೆಕ್ಕೆ ಜೋಳವನ್ನು ಹೆಚ್ಚಾಗಿ ಜಾನುವಾರುಗಳ ಆಹಾರಕ್ಕಾಗಿ ಬೆಳೆಸಲಾಗುತ್ತದೆ. ಅಲ್ಲಿ ಅದನ್ನು ಮೇವು, ಹಗೇವಿನಲ್ಲಿ ಕೂಡಿಟ್ಟ ಹಸಿರು ಹುಲ್ಲು (ಕತ್ತರಿಸಿದ ಹಸಿರು ಮಕ್ಕೆ ಜೋಳದ ಕಾಂಡಗಳನ್ನು ಹುದುಗಿಸುವ ಮೂಲಕ ತಯಾರಿಸಿದ) ಅಥವಾ ಧಾನ್ಯವಾಗಿ ಜಾನುವಾರುಗಳಿಗೆ ನೀಡುತ್ತಾರೆ. ಮೆಕ್ಕೆ ಜೋಳದ ಹಿಟ್ಟು ನಾಯಿ ಆಹಾರದಂತಹ ಕೆಲವು ವಾಣಿಜ್ಯ-ದೃಷ್ಟಿಯಿಂದ ಸಾಕುವ ಪ್ರಾಣಿಗಳ ಆಹಾರ ಉತ್ಪನ್ನಗಳಲ್ಲಿ ಬಳಸುವ ಒಂದು ಪ್ರಮುಖ ಘಟಕವಾಗಿದೆ.

ಮೆಕ್ಕೆ ಜೋಳವನ್ನು "ಡಫ್ ಬಾಲ್"ಗಳೆಂದು ಕರೆಯಲ್ಪಡುವ ಮೀನುಗಳನ್ನು ಆಕರ್ಷಿಸುವ ಆಹಾರವಾಗಿಯೂ ಬಳಸಲಾಗುತ್ತದೆ. ಇದು ವಿಶೇಷವಾಗಿ ಯುರೋಪ್ನ ಸಿಹಿನೀರಿನ ಮೀನುಗಾರಿಕೆಯಲ್ಲಿ ಜನಪ್ರಿಯವಾಗಿದೆ.

ರಾಸಾಯನಿಕಗಳು ಮತ್ತು ಔಷಧಗಳು

[ಬದಲಾಯಿಸಿ]

ಮೆಕ್ಕೆ ಜೋಳದ ಪಿಷ್ಟವನ್ನು ಪ್ಲ್ಯಾಸ್ಟಿಕ್, ಫ್ಯಾಬ್ರಿಕ್, ಅಂಟು ಮತ್ತು ಇತರ ರಾಸಾಯನಿಕ ಉತ್ಪನ್ನಗಳಾಗಿಯೂ ತಯಾರಿಸಲಾಗುತ್ತದೆ.

ಮೆಕ್ಕೆ ಜೋಳದ ಹಿಟ್ಟು ಬಟ್ಟೆಗೆ ಹಾಕುವ ಗಂಜಿ, ಡೆಕ್ಸ್‌ಟ್ರೋಸ್, ಪುಡಿಂಗ್, ಕೆಲವು ತೆರನ ಪ್ರಸಾಧನ ಸಾಮಗ್ರಿಗಳು ಮುಂತಾದ ವಸ್ತುಗಳ ತಯಾರಿಕೆಗೆ ಒದಗುತ್ತದೆ.

ಕಾರ್ನ್ ಸಿಲ್ಕ್ ಎಂದು ಹೇಳಲಾಗುವ ಹೆಣ್ಣು ಮೆಕ್ಕೆ ಜೋಳ ಹೂವುಗಳ ಶಲಾಕಾಗ್ರಗಳನ್ನು ಮೂಲಿಕೆ ಪೂರಕಗಳಾಗಿ ಮಾರಾಟ ಮಾಡಲಾಗುತ್ತದೆ.

ಮೆಕ್ಕೆ ಜೋಳವನ್ನು ತೇವಗೊಳಿಸಿ ಬೀಸಿ ಪುಡಿಮಾಡುವ ಕ್ರಿಯೆಯಲ್ಲಿ ದೊರೆಯುವ ಅತಿ ಹೆಚ್ಚು ನೀರಿನಾಂಶವನ್ನು ಹೊಂದಿರುವ ಉಪಉತ್ಪನ್ನ ಕಾರ್ನ್ ಸ್ಟೀಪ್ ಲಿಕರ್‌ಅನ್ನು ವ್ಯಾಪಕವಾಗಿ ಜೀವ ರಾಸಾಯನಿಕ ಕೈಗಾರಿಕೆ ಮತ್ತು ಸಂಶೋಧನೆಗಳಲ್ಲಿ ಅನೇಕ ಪ್ರಕಾರದ ಸೂಕ್ಷ್ಣ್ಮಾಣುಜೀವಿಗಳನ್ನು ಬೆಳಸಲು ಮಾಧ್ಯಮವಾಗಿ ಬಳಸಲಾಗುತ್ತದೆ.[೨೪]

ಜೈವಿಕ ಇಂಧನ

[ಬದಲಾಯಿಸಿ]

"ಆಹಾರದ ಮೆಕ್ಕೆ ಜೋಳ"ವನ್ನು ಹೆಚ್ಚಾಗಿ ಬಿಸಿ ಮಾಡಲು ಬಳಸುತ್ತಾರೆ; ವಿಶೇಷಿಕರಿಸಿದ ಮೆಕ್ಕೆಜೋಳದ ಒಲೆಗಳು (ಮರದ ಸ್ಟೌವ್‍ಗಳಂತೆ) ಲಭ್ಯವಿವೆ. ಇವು ಉಷ್ಣವನ್ನು ಉತ್ಪತ್ತಿ ಮಾಡಲು ಆಹಾರದ ಮೆಕ್ಕೆ ಜೋಳ ಅಥವಾ ಮರದ ಸಣ್ಣ ಉಂಡೆಗಳನ್ನು ಬಳಸಿಕೊಳ್ಳುತ್ತವೆ. ಮೆಕ್ಕೆ ಜೋಳ ಜೊಂಡುಗಳನ್ನೂ ಸಹ ಜೀವರಾಶಿ ಇಂಧನ ಮೂಲವಾಗಿ ಉಪಯೋಗಿಸಲಾಗುತ್ತದೆ. ಮೆಕ್ಕೆ ಜೋಳವು ಹೆಚ್ಚು ಕಡಿಮೆ ಅಗ್ಗವಾಗಿದೆ. ಮೆಕ್ಕೆ ಜೋಳ ಕಾಳುಗಳನ್ನು ಇಂಧನವಾಗಿ ಬಳಸುವ ಮನೆಯಲ್ಲಿ-ಬಿಸಿ ಮಾಡುವ ಕುಲುಮೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವು ಒಂದು ದೊಡ್ಡ ಲಾಳಿಕೆ ತೊಟ್ಟಿಯನ್ನು ಹೊಂದಿರುತ್ತವೆ. ಈ ತೊಟ್ಟಿಯು ಒಂದೇ ಗಾತ್ರದ ಮೆಕ್ಕೆ ಜೋಳ ಕಾಳುಗಳನ್ನು (ಅಥವಾ ಮರದ ಸಣ್ಣ ಉಂಡೆಗಳು ಅಥವಾ ಚೆರಿ ಗುಂಡಿಗಳು) ಬೆಂಕಿಗೆ ಹಾಕುತ್ತದೆ.

ಮೆಕ್ಕೆ ಜೋಳವನ್ನು ಹೆಚ್ಚಾಗಿ ಎಥನಾಲ್ ಇಂಧನದ ಉತ್ಪತ್ತಿಯಲ್ಲಿ ಪೂರಕ ಸಾಮಾಗ್ರಿಯಾಗಿ ಬಳಸಲಾಗುತ್ತದೆ. ಎಥನಾಲ್ ಇಂಧನವನ್ನು ಮೋಟಾರು ವಾಹನಗಳಲ್ಲಿ ಬಳಸುವಾಗ ಹೊರಹೊಮ್ಮುವ ಮಲಿನಕಾರಿಗಳ ಪ್ರಮಾಣವನ್ನು ಕಡಿಮೆ ಮಾಡುವುದಕ್ಕಾಗಿ ಇದರೊಂದಿಗೆ ಗ್ಯಾಸೋಲಿನ್ಅನ್ನು ಮಿಶ್ರಮಾಡಲಾಗುತ್ತದೆ. ಮಧ್ಯ 2007ರಲ್ಲಿ ಇಂಧನದ ಬೆಲೆಯು ಏರಿದ್ದರಿಂದ, ಎಥನಾಲ್‌ನ ಬೇಡಿಕೆಯು ಹೆಚ್ಚಿತು. ಇದರಿಂದಾಗಿ ಮೆಕ್ಕೆ ಜೋಳಕ್ಕಾಗಿ ಕೃಷಿಕರು ಹೆಚ್ಚಿನ ದರವನ್ನು ಪಡೆದರು. ಇದು 2007ರ ಫಸಲನ್ನು ಆಧುನಿಕ ಇತಿಹಾಸದಲ್ಲೇ ಕೃಷಿಕರಿಗೆ ಹೆಚ್ಚು ಲಾಭ ತಂದುಕೊಟ್ಟ ಮೆಕ್ಕೆ ಜೋಳದ ಬೆಳೆಯಾಗಿ ಮಾಡಿತು. ಇಂಧನ ಮತ್ತು ಮೆಕ್ಕೆ ಜೋಳದ ನಡುವಿನ ಸಂಬಂಧದಿಂದಾಗಿ, ಈ ಬೆಳೆಗಾಗಿ ಪಾವತಿಸುವ ದರಗಳು ಈಗ ಎಣ್ಣೆಯ ಬೆಲೆಯನ್ನು ಹಿಂಬಾಲಿಸಿ ಹೋಗುತ್ತಿವೆ.

ಮೆಕ್ಕೆ ಜೋಳವನ್ನು ಜೈವಿಕ ಇಂಧನದ ಉತ್ಪಾದನೆಗಾಗಿ ಬಳಸುವುದರಿಂದ ಆಹಾರದ ದರವು ಸ್ವಲ್ಪ ಮಟ್ಟಿಗೆ ಪ್ರಭಾವಕ್ಕೊಳಗಾಗುತ್ತದೆ. ಸಾಗಣೆ, ಉತ್ಪಾದನೆ ಮತ್ತು ಮಾರಾಟ ಖರ್ಚುಗಳು (80%) ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಆಹಾರದ ದರದ ಅತಿ ದೊಡ್ಡ ಭಾಗವಾಗಿವೆ. ಹೆಚ್ಚಿನ ಇಂಧನ ಖರ್ಚುಗಳು ಈ ಖರ್ಚುಗಳ ಮೇಲೆ ಪ್ರಭಾವ ಬೀರುತ್ತವೆ, ವಿಶೇಷವಾಗಿ ಸಾಗಣೆ. ಆಹಾರದ ದರಗಳು ಏರಿಕೆಯಾಗುವುದು ಮುಖ್ಯವಾಗಿ ಹೆಚ್ಚಿನ ಇಂಧನ ಖರ್ಚುಗಳಿಂದಾಗಿ ಎಂದು ಗ್ರಾಹಕರು ಕಂಡುಕೊಂಡಿದ್ದಾರೆ. ಜೈವಿಕ ಇಂಧನವು ಇತರ ಆಹಾರ ಬೆಳೆಗಳ ದರಗಳ ಮೇಲೆ ನೇರವಾದ ಪ್ರಭಾವವನ್ನು ಹೊಂದಿಲ್ಲ. ಜೈವಿಕ ಇಂಧನದ ಉತ್ಪತ್ತಿಗಾಗಿ ಮೆಕ್ಕೆ ಜೋಳದ ಬಳಕೆಯು ಮೆಕ್ಕೆ ಜೋಳದ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಅದರ ದರವನ್ನೂ ಅಧಿಕಗೊಳಿಸುತ್ತದೆ. ಇದು ಕೃಷಿ ಮಾಡುವ ಎಕರೆ ಪ್ರದೇಶಗಳು ಇತರ ಆಹಾರದ ಬೆಳೆಗಳಿಂದ ಮೆಕ್ಕೆ ಜೋಳದ ಉತ್ಪತ್ತಿಯೆಡೆಗೆ ಬದಲಾಗುವಂತೆ ಮಾಡುತ್ತದೆ. ಇದು ಇತರ ಆಹಾರ ಬೆಳೆಗಳ ಪೂರೈಕೆಯನ್ನು ಕಡಿಮೆ ಮಾಡಿ, ಅವುಗಳ ದರವನ್ನು ಹೆಚ್ಚಿಸುತ್ತದೆ.[೨೫][೨೬]

2007ರಲ್ಲಿ ಜರ್ಮನಿಯ ನ್ಯೂಮುಂಸ್ಟರ್‌ನ ಹತ್ತಿರ ಇರುವ ವ್ಯವಸಾಯ-ಆಧಾರಿತ ಮೆಕ್ಕೆ ಜೋಳದ ಮೇವು ಸಂಗ್ರಾಹಕ. ಸಂಗ್ರಾಹಕದ ತುದಿಯಲ್ಲಿರುವ ಊದಬಹುದಾದ ಜೈವಿಕ ಅನಿಲ ಹಿಡಿದಿಟ್ಟುಕೊಳ್ಳುವ ಹಸಿರು ಸಾಧನ

ಮೆಕ್ಕೆ ಜೋಳವನ್ನು ಜರ್ಮನಿಯಲ್ಲಿ ಜೈವಿಕ ಅನಿಲ ಸ್ಥಾವರಗಳಿಗೆ ಪೂರಕ ಸಾಮಾಗ್ರಿಯಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಲ್ಲಿ ಮೆಕ್ಕೆ ಜೋಳವನ್ನು ಕೊಯ್ಲು ಮಾಡಿ, ಚೂರು ಚೂರು ಮಾಡಿ, ಹಗೇವಿಯಲ್ಲಿ ಕೂಡಿಟ್ಟು, ನಂತರ ಅದನ್ನು ಜೈವಿಕ ಅನಿಲ ಸ್ಥಾವರಗಳಿಗೆ ಕಳುಹಿಸಲಾಗುತ್ತದೆ.

ಜೀವರಾಶಿ ಅನಿಲೀಕರಣ ವಿದ್ಯುತ್ ಸ್ಥಾವರವೊಂದು ಆಸ್ಟ್ರಿಯಾದ ಬರ್ಗೆನ್‌ಲ್ಯಾಂಡ್ ಗ್ಯುಸಿಂಗ್ ಹತ್ತಿರದ ಸ್ಟ್ರೆಮ್‌ನಲ್ಲಿ 2005ರಲ್ಲಿ ಸ್ಥಾಪನೆಗೊಂಡಿತು. ಫಿಸ್ಚರ್ ಟ್ರಾಪ್ಸಚ್ ವಿಧಾನದ ಮೂಲಕ ಜೈವಿಕ ಅನಿಲದಿಂದ ಡೀಸೆಲ್ಅನ್ನು ತಯಾರಿಸುವ ಸಂಶೋಧನೆಗಳು ನಡೆಯುತ್ತಿವೆ.

ಮೋಟಾರು ವಾಹನಗಳ ಇಂಧನದ ಆಕ್ಟೇನ್ ದರವನ್ನು ಹೆಚ್ಚಿಸಲು, ಮಲಿನಕಾರಿಗಳನ್ನು ಕಡಿಮೆ ಮಾಡಲು ಮತ್ತು ಪೆಟ್ರೋಲಿಯಂ ಬಳಕೆಯನ್ನು ತಗ್ಗಿಸಲು ಗ್ಯಾಸೊಲಿನ್‍ನಲ್ಲಿ (ಗ್ಯಾಸೊಹಾಲ್) ಎಥನಾಲ್ಅನ್ನು ಕಡಿಮೆ ಪ್ರಮಾಣದಲ್ಲಿ (10% ಅಥವಾ ಅದಕ್ಕಿಂತ ಕಡಿಮೆ) ಬಳಸಲಾಗುತ್ತದೆ. (ಇಂದಿನ ದಿನಗಳಲ್ಲಿ "ಜೈವಿಕ ಇಂಧನ"ವೆಂದು ಕರೆಯಲಾಗುವ ಇದು ಮಾನವನ ಇಂಧನದ ಹೊಸ ಮೂಲಗಳ ಅವಶ್ಯಕತೆಯ ಬಗ್ಗೆ ತೀವ್ರವಾದ ವಿವಾದವನ್ನು ಸೃಷ್ಟಿಸಿದೆ. ಮತ್ತೊಂದೆಡೆಯಲ್ಲಿ, ಮೀಸೊಅಮೆರಿಕದಲ್ಲಿ ಹುಟ್ಟಿದಂತಹ ಕೆಲವು ನಾಗರಿಕತೆಗಳ ವೈಶಿಷ್ಟ್ಯವಾಗಿರುವ ಕೃಷಿ ಮತ್ತು ಆಹಾರ ಪದ್ಥತಿಯನ್ನು ಲ್ಯಾಟಿನ್ ಅಮೆರಿಕಾದಂತಹ ಪ್ರದೇಶಗಳಲ್ಲಿ ನಿರ್ವಹಿಸಬೇಕು; 2008ರ ಜನವರಿಯಲ್ಲಿ, NAFTAದ ವ್ಯಾಪಾರ ಒಪ್ಪಂದಗಳಲ್ಲಿ ಮೆಕ್ಕೆ ಜೋಳದ ಪ್ರವೇಶವು ಈ ವಿವಾದವನ್ನು ಹೆಚ್ಚಿಸಿತು. ಇದು ಜಮೀನಿನಲ್ಲಿನ ಕಾರ್ಮಿಕರ ಕೆಟ್ಟ ಪರಿಸ್ಥಿತಿಯನ್ನು ಪರಿಗಣಿಸಿದ್ದರಿಂದ ಮತ್ತು ಮುಖ್ಯವಾಗಿ ಈ ಸಂಗತಿಯಿಂದಾಗಿ ಈ ವಿವಾದವು ಹೆಚ್ಚಿತು - "ಮೆಕ್ಕೆ ಜೋಳವನ್ನು ಬೆಳೆಸುವ ಕೃಷಿಕರು ಬಹು-ದಶಲಕ್ಷ ಡಾಲರ್ ಅನುದಾನಗಳನ್ನು ಮತ್ತು ಇತರ ಸರಕಾರಿ ಬೆಂಬಲವನ್ನು ಪಡೆಯುವ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಮೆಕ್ಕೆ ಜೋಳವನ್ನು ಆಮದು ಮಾಡಿಕೊಳ್ಳಲು NAFTA ಅವಕಾಶ ಮಾಡಿಕೊಟ್ಟಿತು. (...) OXFAM UKಯ ಪ್ರಕಾರ, NAFTA ಪ್ರಭಾವಕ್ಕೊಳಗಾದ ಮೆಕ್ಕೆ ಜೋಳದ ದರವು ಮೆಕ್ಸಿಕೊದಲ್ಲಿ 1994ರಿಂದ 2001ರವರೆಗಿನ ಅವಧಿಯಲ್ಲಿ 70%ನಷ್ಟು ಇಳಿಯಿತು. ಅಲ್ಲದೆ ಅನೇಕ ಕೃಷಿ ಉದ್ಯೋಗಗಳೂ ಕಡಿಮೆಯಾದವು: 1993ರಲ್ಲಿ 8.1 ದಶಲಕ್ಷವಿದ್ದುದು 2002ರಲ್ಲಿ 6.8 ದಶಲಕ್ಷಕ್ಕೆ ಇಳಿಯಿತು. ಕೆಲಸವಿಲ್ಲದವರಲ್ಲಿ ಹೆಚ್ಚಿನವರು ಸಣ್ಣ-ಪ್ರಮಾಣದ ಮೆಕ್ಕೆ ಜೋಳ ಬೆಳೆಗಾರರು.").[೨೭] U.S.ನ ಉತ್ತರ ಅಕ್ಷಾಂಶ ಪ್ರದೇಶಗಳಲ್ಲಿ ಮಾನವನ ಅಥವಾ ಪ್ರಾಣಿಗಳ ಬಳಕೆಗಾಗಿಯಲ್ಲದೆ ಜೈವಿಕ ಇಂಧನಕ್ಕಾಗಿ ಉಷ್ಣವಲಯದ ಮೆಕ್ಕೆ ಜೋಳ Archived 2009-06-01 ವೇಬ್ಯಾಕ್ ಮೆಷಿನ್ ನಲ್ಲಿ. ದ ಪರಿಚಯಿಸುವಿಕೆಯು ಇದನ್ನು ಕಡಿಮೆ ಮಾಡಬಹುದು.

2017ರೊಳಗೆ 35 ಶತಕೋಟಿ ಗ್ಯಾಲನ್‌ಗಳಷ್ಟು ಜೈವಿಕ ಇಂಧನವನ್ನು ಉತ್ಪಾದಿಸಬೇಕೆಂಬ ಗುರಿ ಹೊಂದಿದೆ ಎಂದು U.S. ಫೆಡರಲ್ ಸರಕಾರವು ಘೋಷಸಿದರಿಂದಾಗಿ, ಎಥನಾಲ್ ಉತ್ಪಾದನೆಯು 2010ರೊಳಗೆ 7 ಶತಕೋಟಿ ಗ್ಯಾಲನ್‌ಗಳಷ್ಟಾಗಬಹುದು. ಈ ಪ್ರಮಾಣವು 2006ರಲ್ಲಿದ್ದ 4.5 ಶತಕೋಟಿಗಿಂತ ಹೆಚ್ಚಾಗಿದೆ. ಇದು U.S.ನಲ್ಲಿ ಮೆಕ್ಕೆ ಜೋಳದ ಬೇಡಿಕೆಯೊಂದಿಗಿನ ಎಥನಾಲ್‌ನ ಪಾಲನ್ನು 22.6 ಶೇಕಡಾವಾರಿಗಿಂತ 36.1 ಶೇಕಡಾವಾರಿಗೆ ಹೆಚ್ಚಿಸುತ್ತದೆ.[೨೮]

ಅಲಂಕಾರಿಕ ಮತ್ತು ಇತರ ಬಳಕೆಗಳು

[ಬದಲಾಯಿಸಿ]

ಕೆಲವು ಪ್ರಕಾರದ ಸಸ್ಯಗಳನ್ನು ಸಂದರ್ಭಾನುಸಾರವಾಗಿ ಆಲಂಕಾರಿಕ ಬಳಕೆಗಾಗಿ ಉದ್ಯಾನದಲ್ಲಿ ಬೆಳೆಸಲಾಗುತ್ತದೆ. ಇದಕ್ಕೆ ವೈವಿಧ್ಯಗೊಳಿಸಿದ ಮತ್ತು ಎರಡು ಅಥವಾ ಹೆಚ್ಚು ಬಣ್ಣಗಳಿರುವ ಎಲೆಗಳುಳ್ಳ ಹಾಗೂ ಬಣ್ಣಯುಕ್ತ ಕದಿರುಗಳಿರುವ ಸಸ್ಯಗಳನ್ನು ಬಳಸಲಾಗುತ್ತದೆ. ಹೆಚ್ಚುವರಿಯಾಗಿ, 31 ft (9.4 m) ಉದ್ದಕ್ಕೆ ಬೆಳೆಯುವ ಅಥವಾ 24 inches (60.96 centimetres) ಉದ್ದದ ಕದಿರುಗಳನ್ನು ಹೊಂದಿರುವ ಗಾತ್ರ-ಶ್ರೇಷ್ಠತೆಯಿರುವ ಪ್ರಭೇದಗಳು ಶತಮಾನದಷ್ಟು ಕಾಲ ಜನಪ್ರಿಯವಾಗಿದ್ದವು.[೨೯][೩೦]

ಮೆಕ್ಕೆ ಜೋಳದ ಜೊಂಡನ್ನು ತೂತು ಮಾಡಿ, ದುಬಾರಿ ಧೂಮಪಾನದ ಕೊಳವೆಗಳಾಗಿ ಮಾಡಬಹುದು. ಇದನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1869ರಲ್ಲಿ ಮೊದಲು ತಯಾರಿಸಲಾಯಿತು.

ಮೆಕ್ಕೆ ಜೋಳದ ಒಂದು ವಿಶೇಷವಾದ ಬಳಕೆಯೆಂದರೆ ಪ್ರವಾಸಿಗರ ಆಕರ್ಷಣೆಯಾಗಿ ಕಾರ್ನ್ ಮೇಜ್ (ಅಥವಾ ಮೈಜ್ ಮೇಜ್(ಮೆಕ್ಕೆ ಜೋಳದ ದಿಗ್ಭ್ರಮೆ) )ಅನ್ನು ರಚಿಸುವುದು. ಈ ಮೈಜ್ ಮೇಜ್‌‌ನ ಯೋಚನೆಯನ್ನು ಮೊದಲು ಮಾಡಿದವನು ಯಥೇಚ್ಛವಾಗಿ ಆಧುನಿಕ ಮೇಜ್‌‌ಗಳನ್ನು ವಿನ್ಯಾಸಗೊಳಿಸಿದ ಆಂಡ್ರಿಯನ್ ಫಿಶರ್. ಇವನು ಅಮೇರಿಕನ್ ಮೇಜ್ ಕಂಪೆನಿಯೊಂದಿಗೆ 1993ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಮೇಜ್‌‌ ಒಂದನ್ನು ರಚಿಸಿದನು. ಸಾಂಪ್ರದಾಯಿಕ ಮೇಜ್‌ಗಳನ್ನು ಸಾಮಾನ್ಯವಾಗಿ ಯೂ ಮರದ ಬೇಲಿಗಳನ್ನು ಬಳಸಿ ಬೆಳೆಯಲಾಗುತ್ತದೆ. ಆದರೆ ಇವು ಬಲಿಯಲು ಅನೇಕ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮೆಕ್ಕೆ ಜೋಳದ ಶೀಘ್ರ ಬೆಳವಣಿಗೆಯು ಬೆಳೆಯುವ ಅವಧಿಯ ಆರಂಭದಲ್ಲಿ GPSಅನ್ನು ಬಳಸಿಕೊಂಡು ಮೇಜ್ಅನ್ನು ಸ್ಥಾಪಿಸಲು ಮತ್ತು ಬೇಸಿಗೆಯ ಆರಂಭದೊಳಗೆ ಮೆಕ್ಕೆ ಜೋಳವು ವೀಕ್ಷಕನ ದೃಷ್ಟಿರೇಖೆಯಷ್ಟು ಉದ್ದವಾಗಿ ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ಕೆನಡಾ ಮತ್ತು U.S.ನಲ್ಲಿ, ಇದು ಅನೇಕ ಕೃಷಿ ಸಮುದಾಯಗಳಲ್ಲಿ ಬಹಳ ಜನಪ್ರಿಯವಾಗಿದೆ.

ಮಕ್ಕಳ ಆಟದಲ್ಲಿ ಮರಳ-ಪೆಟ್ಟಿಗೆಯಂತಹ ಆವರಣದಲ್ಲಿ ಮರಳಿನ ಬದಲಿಗೆ ಮೆಕ್ಕೆ ಜೋಳ ಕಾಳುಗಳನ್ನು ಬಳಸಲಾಗುತ್ತದೆ.[೩೧]

ಮೆಕ್ಕೆ ಜೋಳವು ಇತರ ಏಕದಳ ಧಾನ್ಯದ ಸಸ್ಯಗಳಿಗಿಂತ ಹೆಚ್ಚು ಭೂಮಿಯ ಮೇಲಿನ ಭಾಗವನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಮೇವಾಗಿ ಬಳಸಬಹುದು. ಒಣಗಿಸುವುದಕ್ಕಿಂತ ಹಗೇವಿಗೆ ಹಾಕುವುದರಿಂದ ಮತ್ತು ಹುದುಗಿಸುವುದರಿಂದ ಇದು ಹೆಚ್ಚು ಜೀರ್ಣಸಾಧ್ಯತೆ ಮತ್ತು ಸ್ವಾದಿಷ್ಟತೆಯನ್ನು ಹೊಂದಿರುತ್ತದೆ.

ವ್ಯಾಪಾರದ ಸರಕಾಗಿ ಮೆಕ್ಕೆ ಜೋಳ

[ಬದಲಾಯಿಸಿ]

ಮೆಕ್ಕೆ ಜೋಳವನ್ನು ಬಂಡವಾಳ ಹೂಡುವವರು ಮತ್ತು ದರ ಊಹಿಸುವವರು ವ್ಯಾಪಾರ ಮಾಡಬಲ್ಲ ಸರಕಾಗಿ ಕೊಂಡುಕೊಳ್ಳುತ್ತಾರೆ ಮತ್ತು ಮಾರಾಟ ಮಾಡುತ್ತಾರೆ. ಇದನ್ನು ಕಾರ್ನ್ ಫ್ಯೂಚರ್ಸ್ ಕಾಂಟ್ರ್ಯಾಕ್ಟ್(ಮೆಕ್ಕೆ ಜೋಳದ ಭವಿಷ್ಯದ ಒಪ್ಪಂದ) ಎಂದು ಕರೆಯಲಾಗುತ್ತದೆ. ಕಾರ್ನ್ ಫ್ಯೂಚರ್ಸ್ ಕಾಂಟ್ರ್ಯಾಕ್ಟ್‌ಗಳನ್ನು (CBOT) ಷಿಕಾಗೋ ಬೋರ್ಡ್ ಆಫ್ ಟ್ರೇಡ್‌ನಲ್ಲಿ ಟಿಕರ್ ಚಿಹ್ನೆ C ಯಡಿಯಲ್ಲಿ ವ್ಯಾಪಾರ ಮಾಡಲಾಗುತ್ತದೆ. ಅವುಗಳನ್ನು ಪ್ರತಿ ವರ್ಷ ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್ ಮತ್ತು ಡಿಸೆಂಬರ್‌ನಲ್ಲಿ ವಿತರಣೆ ಮಾಡಲಾಗುತ್ತದೆ.[೩೨]

U.S. ಬಳಕೆ ವಿಭಜನೆ

[ಬದಲಾಯಿಸಿ]

USDAಯ ವರ್ಲ್ಡ್ ಅಗ್ರಿಕಲ್ಚರಲ್ ಸಪ್ಲೈ ಆಂಡ್ ಡಿಮ್ಯಾಂಡ್ ಎಸ್ಟಿಮೇಟ್ಸ್ ರಿಪೋರ್ಟ್‌ನ ಪ್ರಕಾರ, 12.1 ಶತಕೋಟಿ ಬುಷಲ್(ಕೊಳಗ) 2008 U.S. ಮೆಕ್ಕೆ ಜೋಳ ಬೆಳೆಯ ವಿಭಜನೆಯು ಈ ಕೆಳಗಿನಂತಿದೆ.[೩೩]

  • 5.25 ಶತಕೋಟಿ ಬುಷಲ್ - ಜಾನುವಾರು ಆಹಾರ
  • 3.65 ಶತಕೋಟಿ ಬುಷಲ್ - ಎತನಾಲ್ ಉತ್ಪಾದನೆ
  • 1.85 ಶತಕೋಟಿ ಬುಷಲ್ - ರಫ್ತು
  • 943 ದಶಲಕ್ಷ ಬುಷಲ್ - ಪಿಷ್ಟ, ಕಾರ್ನ್ ಎಣ್ಣೆ, ಸಿಹಿ ತಿಂಡಿಗಳ (HFCS ಇತ್ಯಾದಿ) ಉತ್ಪಾದನೆ
  • 327 ದಶಲಕ್ಷ ಬುಷಲ್ - ಮಾನವ ಬಳಕೆ - ಓಟ್ಸ್ ತರಿ, ಮೆಕ್ಕೆ ಜೋಳದ ಹೂವು, ಮೆಕ್ಕೆ ಜೋಳದ ಹಿಟ್ಟು, ಪಾನೀಯ ಆಲ್ಕೊಹಾಲ್

ಕಲೆಯಲ್ಲಿ

[ಬದಲಾಯಿಸಿ]
ಬಂಗಾರ ಬಣ್ಣದ ಮೆಕ್ಕೆ ಜೋಳ.ಮೋಕ್ ಸಂಸ್ಕೃತಿ ಕ್ರಿ.ಶ. 300, ಪೆರುವಿನ ಲಿಮಾದ ಲ್ಯಾಕ್ರೊ ಮ್ಯೂಸಿಯಂ
ಮೆಕ್ಕೆ ಜೋಳದ ಕದಿರಿನಂತೆ ಬಣ್ಣ ನೀಡಿದ ಮಿನ್ನೆಸೊಟದ ರೋಚೆಸ್ಟರ್‌ನ ನೀರಿನ ಗೋಪುರ.

ಮೆಕ್ಕೆ ಜೋಳವು ಕೊಲಂಬಿಯನ್ನರ-ಮುಂಚಿನ ಯುಗದಿಂದ ಆಂಡೆಸ್ನ ಪ್ರಮುಖ ಬೆಳೆಯಾಗಿದೆ. ಉತ್ತರ ಪೆರುವಿನ ಮೋಕ್ ಸಂಸ್ಕೃತಿಯು ಮಣ್ಣು, ನೀರು ಮತ್ತು ಬೆಂಕಿಯಿಂದ ಮಣ್ಣಿನ ಪಾತ್ರೆಗಳನ್ನು ಮಾಡುತ್ತಿದ್ದರು. ಈ ಕುಂಬಾರಿಕೆಗಳು ಪೂಜ್ಯ ವಸ್ತುಗಳಾಗಿದ್ದವು. ಅವನ್ನು ವಿಶೇಷ ಆಕಾರಗಳಲ್ಲಿ ರಚಿಸಲಾಗುತ್ತಿತ್ತು ಮತ್ತು ಮುಖ್ಯ ವಿಷಯಗಳನ್ನು ಸೂಚಿಸಲು ಬಳಸುತ್ತಿದ್ದರು. ಮೆಕ್ಕೆ ಜೋಳವನ್ನು ಮಾನವ ರೂಪದಲ್ಲಿ ಮತ್ತು ನೈಸರ್ಗಿಕವಾಗಿ ಸೂಚಿಸಲಾಗುತ್ತಿತ್ತು.[೩೪]

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಸ್ಥಳೀಯ ಕೃಷಿಯ ಉತ್ಪನ್ನ ಮತ್ತು ಸಂಸ್ಕೃತಿಯನ್ನು ಆಚರಿಸುವ ಉದ್ದೇಶವನ್ನು ಹೊಂದಿದ್ದಾಗ ಮೆಕ್ಕೆ ಜೋಳವನ್ನೇ ತಾತ್ಕಾಲಿಕ ವಾಸ್ತುಶಿಲ್ಪೀಯ ವಿವರಣೆಯಾಗಿ ಬಳಸಲಾಗುತ್ತದೆ. ಈ ಬಳಕೆಯ ಒಂದು ಪ್ರಸಿದ್ಧ ಉದಾಹರಣೆಯೆಂದರೆ ದಕ್ಷಿಣ ಡಕೋಟದ ಮಿಟ್ಚೆಲ್‌ನ ಕಾರ್ನ್ ಪ್ಯಾಲೇಸ್. ಇದರಲ್ಲಿ ವಿನ್ಯಾಸವನ್ನು ಮಾಡಲು ಬಣ್ಣಯುಕ್ತ ಮೆಕ್ಕೆ ಜೋಳದ ಜೊಂಡನ್ನು ಬಳಸಲಾಗುತ್ತದೆ, ಅದು ವಾರ್ಷಿಕವಾಗಿ ಮತ್ತೆ ಬಳಕೆಯಾಗುತ್ತದೆ.

ಎರಡು ಬಲಿತ ಜೊಂಡುಗಳನ್ನು ಹೊಂದಿರುವ ಒಂದು ಮೆಕ್ಕೆ ಜೋಳದ ಕಾಂಡವನ್ನು 1993ರಲ್ಲಿ ಟಂಕಿಸಲಾದ ಕ್ರೊಯಟಿಯನ್ 1 ಲಿಪ ನಾಣ್ಯದ ಹಿಂಭಾಗದಲ್ಲಿ ಚಿತ್ರಿಸಲಾಗಿದೆ.[೩೫]

ಇವನ್ನೂ ಗಮನಿಸಿ

[ಬದಲಾಯಿಸಿ]

ಟಿಪ್ಪಣಿಗಳು ಮತ್ತು ಆಕರಗಳು

[ಬದಲಾಯಿಸಿ]
  1. ೧.೦ ೧.೧ "ಆರ್ಕೈವ್ ನಕಲು". Archived from the original on 2010-05-27. Retrieved 2010-06-04.
  2. ಮ‌ೂಲಗಳು: E. ಲೆವಿಸ್ ಸ್ಟರ್ಟೆವೆಂಟ್, 1894 ಬುಲೆಟಿನ್ ಆಫ್ ದ ಟಾರ್ರೆ ಬೊಟಾನಿಕಲ್ ಕ್ಲಬ್ , ಸಂಪುಟ 21, ಲ್ಯಾಂಕಸ್ಟರ್, PA ಆಗಸ್ಟ್ 20, ಮೆಕ್ಕೆ ಜೋಳದ ಬಗೆಗಿನ ಸಂ. 8 ಟಿಪ್ಪಣಿಗಳು, ಪುಟ 1.
  3. "ಮೆಕ್ಕೆ ಜೋಳ". ದ ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಶನರಿ - ಆನ್‌ಲೈನ್ ಆವೃತ್ತಿ ಡಿಸೆಂಬರ್ 2007 2007ರ ಡಿಸೆಂಬರ್ 16ರಲ್ಲಿ ಪುನಃಸೇರಿಸಲಾಗಿದೆ.[೧]
  4. OED, "ಕಾರ್ನ್", II, 3
  5. "ಕಾರ್ನ್". ದ ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಶನರಿ' - ಆನ್‌ಲೈನ್ ಆವೃತ್ತಿ 1989. 2007ರ ಡಿಸೆಂಬರ್ 16ರಲ್ಲಿ ಪುನಃಸೇರಿಸಲಾಗಿದೆ.[೨]
  6. ಆಸ್ಟ್ರೇಲಿಯಾದಲ್ಲಿನ ಬೆಳೆಗಾರರ ಉದ್ಯಮ ಸಂಸ್ಥೆ ಎಂದರೆ ಮೈಜ್ ಅಸೋಸಿಯೇಶನ್ ಆಫ್ ಆಸ್ಟ್ರೇಲಿಯಾ. ಉದಾಹರಣೆಗಾಗಿ, ಸರಕಾರಿ ಕೃಷಿ ಸಂಸ್ಥೆಗಳು ಮತ್ತು CSIROನಂತಹ ಸಂಶೋಧನಾ ಸಂಸ್ಥೆಗಳು "ಮೆಕ್ಕೆ ಜೋಳ"ವನ್ನು ಬಳಸಿಕೊಳ್ಳುತ್ತಿವೆ. ಈ ಬಳಕೆಯು ಆಫ್ರಿಕಾದ ಇಂಗ್ಲಿಷ್-ಮಾತನಾಡುವ ರಾಷ್ಟ್ರಗಳಲ್ಲಿ ಪುನರಾವರ್ತಿಸಿದೆ. ಉದಾಹರಣೆಗಾಗಿ, 1990ರಲ್ಲಿನ ಅದರ ನಶಿಸುವಿಕೆಯವರೆಗೆ, ಕೀನ್ಯಾವು ಕೀನ್ಯಾ ಮೈಜ್ ಕಾನ್ಸೋರ್ಟಿಯಮ್ ಆಂಡ್ ಮೈಜ್ ಬ್ರೀಡರ್ಸ್ ನೆಟ್ವರ್ಕ್, ನೈಜೀರಿಯಾವು ನ್ಯಾಷನಲ್ ಮೈಜ್ ಅಸೋಸಿಯೇಶನ್ ಆಫ್ ನೈಜೀರಿಯಾ, ಜಿಂಬಾವ್ವೆಯು ಜಿಂಬಾವ್ವೆ ಸೀಡ್ ಮೈಜ್ ಅಸೋಸಿಯೇಶನ್ ಮತ್ತು ದಕ್ಷಿಣ ಆಫ್ರಿಕಾವು ಮೈಜ್ ಬೋರ್ಡ್ಅನ್ನು ಹೊಂದಿದ್ದವು. ಬುರುಂದಿ, ಉಗಾಂಡ, ಬೋಟ್‌ಸ್ವಾನ, ಘಾನ ಮೊದಲಾದ ಕಡೆಗಳ ಕೃಷಿ ಮತ್ತು ಕೃಷಿಕರ ಒಕ್ಕೂಟಗಳು UKಯಲ್ಲಿನ ಸಂಬಂಧಿತ ಉದ್ಯಮ ಸಂಸ್ಥೆಗಳಂತೆ ಇದನ್ನು "ಮೆಕ್ಕೆ ಜೋಳ" ಎಂದು ಕರೆಯುತ್ತವೆ. ಭಾರತದಲ್ಲಿ ಇಂಡಿಯನ್ ಮೈಜ್ ಡಿವಲಪ್ಮೆಂಟ್ ಅಸೋಸಿಯೇಶನ್ ಇದೆ. ಇದನ್ನು ಸಾಮಾನ್ಯವಾಗಿ, ಅಲ್ಲದಿದ್ದರೆ ಆದ್ಯತೆ ಕೊಟ್ಟು, FAOನಲ್ಲಿ ಮತ್ತು ಇತರ ಅಂತಾರಾಷ್ಟ್ರೀಯ ಕೃಷಿ ಸಂಸ್ಥೆಗಳಲ್ಲಿ 'ಮೆಕ್ಕೆ ಜೋಳ' ಎಂದು ಕರೆಯಲಾಗುತ್ತದೆ.
  7. http://dictionary.reference.com/browse/mielie
  8. ಮ‌ೂಲಗಳು: ಕೊಲಿಗ್ಯಾಡೊ 1975, ಸ್ಯಾಲಮಿನಿ 1985, ಪೋಯ್ತಿಗ್ 1994, ಪ್ಯಾಲಿವಾಲ್ 2000.
  9. P.V. ನೆಲ್ಸನ್ 1985.
  10. "ಟ್ರೋಪಿಕಲ್ ಮೈಜ್ ಫಾರ್ ಬಯೋಫುಯೆಲ್ಸ್". Archived from the original on 2009-06-01. Retrieved 2010-06-04.
  11. "Corn Stalk Lodging" (PDF). Monsanto Imagine. 2008-10-02. Archived from the original (PDF) on 2009-02-25. Retrieved 2009-02-23.
  12. "The origins of maize: the puzzle of pellagra". EUFIC > Nutrition > Understanding Food. The European Food Information Council. 2001. Archived from the original on ಸೆಪ್ಟೆಂಬರ್ 27, 2006. Retrieved September 14, 2006. {{cite web}}: Unknown parameter |dateformat= ignored (help); Unknown parameter |month= ignored (help)
  13. ಕಾರ್ನ್ (ಮೆಕ್ಕೆ ಜೋಳ) ಅಲರ್ಜಿ, ಇನ್ಫಾರ್ಮ್ಆಲ್ ಡೇಟಾಬೇಸ್, http://foodallergens.ifr.ac.uk/food.lasso?selected_food=33#summary Archived 2008-09-30 ವೇಬ್ಯಾಕ್ ಮೆಷಿನ್ ನಲ್ಲಿ., 18 ಅಕ್ಟೋಬರ್ 2006
  14. Brown, David (2009-11-20). "Scientists have high hopes for corn genome". Washington Post.
  15. MaizeGDB
  16. ಒಂದು ಪ್ರಮುಖ ಬೆಳೆ ಮೆಕ್ಕೆ ಜೋಳದ ಸಂಶೋಧಕರ ಅನುಕ್ರಮ ಜೀನೋಮ್
  17. ದ B73 ಮೈಜ್ ಜೀನೋಮ್: ಕಾಂಪ್ಲೆಕ್ಸಿಟಿ, ಡೈವರ್ಸಿಟಿ ಆಂಡ್ ಡೈನಮಿಕ್ಸ್ (ಅಬ್‌ಸ್ಟ್ರ್ಯಾಕ್ಟ್)
  18. Ordish, George; Hyams, Edward (1996). The last of the Incas: the rise and fall of an American empire. New York: Barnes & Noble. p. 26. ISBN 0-88029-595-3.{{cite book}}: CS1 maint: multiple names: authors list (link)
  19. "ವೈಲ್ಡ್ ಗ್ರಾಸ್ ಬಿಕೇಮ್ ಮೈಜ್ ಕ್ರಾಪ್ ಮೋರ್ ದ್ಯಾನ್ 8,700 ಇಯರ್ಸ್ ಎಗೊ", ನ್ಯಾಷನಲ್ ಸೈನ್ಸ್ ಫೌಂಡೇಶನ್, ಯ‌ೂರೇಕಅಲರ್ಟ್ ‌ನಲ್ಲಿ 2009ರ ಮಾರ್ಚ್ 24ರಲ್ಲಿ ಪ್ರಕಟವಾದ ಸುದ್ಧಿ
  20. http://www.srs.fs.usda.gov/pubs/ja/ja_peacock001.pdf
  21. (USDAಯ ಪ್ರತಿ ಬುಷಲ್‌ಗೆ 25.4 ಕೆಜಿಯಲ್ಲಿ ಪ್ರತಿ ಎಕರೆಯ 185 ಬುಷಲ್‌ಗಳಿಂದ ಅಂದಾಜಿಸಲಾಗಿದೆ) "ಐಯೋವ ಕಾರ್ನ್ ಕ್ರಾಪ್ ಪೋಯ್ಸ್ಡ್ ಟು ಸೆಟ್ ರೆಕಾರ್ಡ್". ಸೇಡರ್ ರ‌್ಯಾಪಿಡ್ಸ್ ಗೆಜೆಟ್ 12 ಆಗಸ್ಟ್ 2009 http://gazetteonline.com/top-story/2009/08/12/iowa-corn-crop-poised-to-set-record Archived 2009-08-16 ವೇಬ್ಯಾಕ್ ಮೆಷಿನ್ ನಲ್ಲಿ.
  22. Duvick, D. N. & Cassman, K. G. (1999). "Post-green-revolution trends in yield potential of temperate maize in the north-central United States". Crop Science. 39 (6): 1622–1630. Archived from the original on 2009-11-15. Retrieved 2010-06-04.{{cite journal}}: CS1 maint: multiple names: authors list (link)
  23. ಸೋಲನ್ ರಾಬಿನ್ಸನ್. ಹಾಟ್ ಕಾರ್ನ್: ಲೈಫ್ ಸೀನ್ಸ್ ಇನ್ ನ್ಯೂಯಾರ್ಕ್ ಇಲ್ಲಸ್ಟ್ರೇಟೆಡ್ (1853ರಲ್ಲಿ NY ಟ್ರೈಬ್ಯೂನ್‌ನಲ್ಲಿ ಕಾಣಿಸಿಕೊಂಡ ಸರಣಿ, ನಂತರ ಪುಸ್ತಕವಾಯಿತು)
  24. Liggett, R. Winston; Koffler, H. (1948). "Corn steep liquor in microbiology". Bacteriol Rev. Vol. 12, no. 4. pp. 297–311. {{cite news}}: Unknown parameter |month= ignored (help)
  25. ಕ್ರಿಶ್ಚಿಯನ್ ಸೈನ್ಸ್ ಮಾನಿಟರ್
  26. "ಐಯೋವ ರಿನೀವೇಬಲ್ ಫ್ಯುಯೆಲ್ಸ್ ಅಸೋಸಿಯೇಶನ್". Archived from the original on 2014-10-11. Retrieved 2010-06-04.
  27. ರೆವಿಸ್ತಾ ಎನ್ವಿಯೊ - ಆರ್ ಫ್ರೀ ಟ್ರೇಡ್ ಅಗ್ರೀಮೆಂಟ್ಸ್ ಫ್ರೀ? Archived 2011-07-24 ವೇಬ್ಯಾಕ್ ಮೆಷಿನ್ ನಲ್ಲಿ.ಆರ್ ದೆ ಡೆವಲಪ್ಮೆಂಟ್ ಸ್ಟ್ರಾಟೆಜೀಸ್? Archived 2011-07-24 ವೇಬ್ಯಾಕ್ ಮೆಷಿನ್ ನಲ್ಲಿ.
  28. "IBISWorld". Archived from the original on 2008-04-02. Retrieved 2010-06-04.
  29. http://www.angelfire.com/un/giantcrops/maize.html[ಶಾಶ್ವತವಾಗಿ ಮಡಿದ ಕೊಂಡಿ]
  30. ಮ‌ೂಲಗಳು: ಈವ್. J. ವಾಶ್. IA 1946, ಕೆಂಪ್ಟನ್ 1924.
  31. "Maize Quest Fun Park: Corn Box". Archived from the original on ಅಕ್ಟೋಬರ್ 12, 2007. Retrieved October 8, 2007. {{cite web}}: Unknown parameter |dateformat= ignored (help)
  32. ವಿಕಿನ್ವೆಸ್ಟ್‌ನ್‌ ಮ‌ೂಲಕ CBOT ಕಾರ್ನ್ ಭವಿಷ್ಯದ ಒಪ್ಪಂದಗಳ ಅವಲೋಕನ
  33. "US Corn Stats.pdf". Archived from the original on 2012-01-11. Retrieved 2010-06-04.
  34. [10] ^ ಬೆರ್ರಿನ್, ಕ್ಯಾಥರೀನ್ ಮತ್ತು ಲಾರ್ಕೊ ಮ್ಯೂಸಿಯಂ. ದ ಸ್ಪಿರಿಟ್ ಆಫ್ ಏನ್ಶಿಯೆಂಟ್ ಪೆರು:ಟ್ರೆಸರ್ಸ್ ಫ್ರಮ್ ದ ಮ್ಯೂಸಿಯೊ ಆರ್ಕಿಯೊಲಾಜಿಕೊ ರೇಫೆಲ್ ಲಾರ್ಕೊ ಹೆರೇರ. ನ್ಯೂಯಾರ್ಕ್: ಥೇಮ್ಸ್ ಮತ್ತು ಹಡ್ಸನ್, 1997.
  35. ಕ್ರೊಯಟಿಯನ್ ನ್ಯಾಷನಲ್ ಬ್ಯಾಂಕ್. ಕ್ಯೂನ ಮತ್ತು ಲಿಪ, ಕ್ರೊಯಟಿಯಾದ ನಾಣ್ಯಗಳು Archived 2009-06-22 ವೇಬ್ಯಾಕ್ ಮೆಷಿನ್ ನಲ್ಲಿ.: 1 ಲಿಪ ನಾಣ್ಯ Archived 2011-06-28 ವೇಬ್ಯಾಕ್ ಮೆಷಿನ್ ನಲ್ಲಿ.. – 2009ರ ಮಾರ್ಚ್ 31ರಲ್ಲಿ ಪುನಃಪಡೆಯಲಾಗಿದೆ.

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಆಹಾರ  |  ಹಣ್ಣುಗಳ ಪಟ್ಟಿ  |  ತರಕಾರಿಗಳ ಪಟ್ಟಿ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: